ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಡಿಗುಡಿಯನು ಸೇದಿ ನೋಡೋ ನಿನ್ನ ಒಡಲೋಳಗಿರುವ ರೋಗಗಳನೀಗಾಡೋ ಪ ಬುರುಡೆ ಎಂಬುದು ಈ ಶರೀರಪಡೆ ದಿರುವ ಸುಕೃತವೆ ಕೊಳವೆಯಾಕಾರಾ ಹರಿನಾರಾಯಣನೆಂಬ ನೀರಾ ಇದ ನರಿತು ನೀ ಸೇದಿಕೊ ಬಲು ಮೋಜುಗಾರಾ ಗುಡುಗುಡಿ1 ಮನವೆಂಬ ಸಂಚಿಯ ಬಚ್ಚಿ ದಿನ ದಿನದಿ ಪತಾಕವೆಂಬ ಭಂಗಿಯ ಕೊಚ್ಚಿ ತನುವಿನ ಚಿಲುಮೆಯೊಳ್ಬೆಚ್ಚಿ ಗುರು ಧ್ಯಾನದ ಕೆಂಡದುರಿಯ ತಂದ್ಹಚ್ಚಿ ಗುಡುಗುಡಿ2 ಸದ್ಯದಿ ಅಮಲೇರುವುದು ದಾರ್ರಿದ್ರ್ಯ ದುಃಖವ ಸುಟ್ಟು ಹೊಗೆ ಏಳುವುದು ತೋರುವುದು ಗುರು ಬುದ್ಧಿಗೆ ಮಾರ್ಗ ಸಿದ್ಧ ವಿಮಲಾನಂದ ಪದಕೆ ಕೊಡುವುದು ಗುಡುಗುಡಿ 3
--------------
ಭಟಕಳ ಅಪ್ಪಯ್ಯ
ಜ್ಞಾನಸುಧೆಯ ಪಾನಮಾಡಿ ಸ್ವಾನುಭವದಿ ಲೀನನಾದೆ ಹೀನ ಭವದ ತಾಪವೆನಗೆ ಬಾಧಿಸುತಿರೆ ಗುರು ನೀಡಿದ ಪ ಜೀವನ ಸುಖದುಃಖದಾ ಭಾವ ಜೋಲಿಗಳನು ಮರೆದು ದೇವ ನಾನೆ ಎಂದು ತಿಳಿದು ಪಾವನಾತ್ಮನೊಳಗೆ ಬೆರೆದು 1 ನಾನು ನೀನು ಎಂಬ ಭೇದ ಏನು ಮೋಜು ಮಾಯವಾಯ್ತು ಕಾಣದಾಯ್ತು ಜೀವಭಾವ ಜ್ಞಾನಬೋಧದಾ ಪ್ರಭಾವ2 ಭಾನ ಮರೆದು ದೇಹಮನದ ಜ್ಞಾನಗೀತೆಗಳನು ಪಾಡಿ ತಾನೆ ತಾನಾಗಿರುವ ಜ್ಞಾನಿ ಗುರುವಿನೊಳಗೆ ಕೂಡಿ 3 ಕಲ್ಪನಾವಿಲಾಸ ಪೋಗಿ ಅಲ್ಪನೆಂಬ ಮತಿಯ ನೀಗಿ ಅಲ್ಪನಾತೀತನಾದನಲ್ಪನಾದ ಶಂಕರನಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಾರಾಯಣನಮ್ಮ ಈತ ನಾರಿ ಒಳ್ಳೊಳ್ಳೆ[ಯ]ವರಿಗೆ ಮಾಡಿದ ಖ್ಯಾತ ಪ. ನಾನಾ ಬಗೆಯಿಂದ ಪೊಗಳುವೆನೀತ- ನ್ನಾನೆಂಬುವುದನ್ನು ಮುರಿದ ಪ್ರಖ್ಯಾತ ಅ.ಪ. ಕೈಕಾಲಿಲ್ಲದೆ ಆಟ ಆಡಿದ ಮೈಮ್ಯಾಲೆ ಹೊರೆಯ ಹೊತ್ತು ನೋಡಿದ ಕೋರೆಯ ಮಸೆದು ಹದ ಮಾಡಿದ ಕೋಯೆಂದು ಕೂಗಿ ಒದರುತೋಡಿದ ಇವ ಭಕ್ತರನ್ನ ಪಾತಾಳಕ್ಕೆ ದೂಡಿದ ಶಕ್ತಿ ಮಗನಾದ ಕ್ಷತ್ರಿಯರ ಕಾಡಿದ ಅಂಬು ತೆಗೆದು ಹೂಡಿದ ರಾಧಾನ್ಮನೆ ಪೊಕ್ಕು ಮೋಜು ಮಾಡಿದ ಇವ ದಿಗಂಬರನಾಗಿ ಅಶ್ವವೇರಿ ಓಡಿದ 1 ಕಲ್ಲು ಮಾಡಿಕೊಂಡು ಇರುವನು ನೆಳ್ಳ ಭೂಮಿ ನೆಗವಿ ಸುತ್ತಿ ಬಲ್ಲ ಬುದ್ಧಿವಂತ ಪ್ರಹ್ಲಾದಗೊಲಿದನಲ್ಲ ಇವ ಎರುಡುಪಾದ ಭೂಮಿ ದಾನ ಒಲ್ಲ ಇವನ ಕೊಡಲಿಬಾಯಿಗ್ಯಾರು ಇದಿರಿಲ್ಲ ಲಂಕೆಗೆ ಬೆಂಕಿಯನಲ್ಲ ಕೊಂಕಿ ಕೊಳಲನೂದುವನು ಗೊಲ್ಲ ಮೈಮೇಲೆ ಗೇಣು ಅರಿವ್ಯಿಲ್ಲ ಇವ ಮಾಮೇರೆಂಬೊ (?) ತೇಜಿ ಏರ್ಯಾನಲ್ಲ 2 ವೈರಿ ಕೊಂದ ಕಾಮಾತ್ಮರಿ[ಗಾ]ಗೋದೇನು ಛಂದ ದಾಡೆಯಿಂದ ದೂಡಿ ಭೂಮಿ ತಂದ ದಾಡೆಯಿಂದ ಕಂಬ ಒಡೆದು ಬಂದ ಇವ ಶುಕ್ರನ್ನ ಕಣ್ಣ ಮುರಿದೊಂದ ತಂದೆ ಮಾತಿಗೆ ತಾಯಿ ಮರಣಂದ ವನದ್ಹಿಂಡು ಕೂಡಿ ವನಕೆ ಕೇಡು ತಂದ ಒಮ್ಮೆ ಮೀಸಲ್ಬೆಣ್ಣೆ ಮೆದ್ದೇನಂದ ಇವ ಬತ್ತಲಾಗಿ ಹತ್ತು ಕುದುರಿದಂದ ತಂದೆ ಹೆಳವನಕಟ್ಟೆರಂಗ ಬಂದ 3
--------------
ಹೆಳವನಕಟ್ಟೆ ಗಿರಿಯಮ್ಮ
ನಾರಾಯಣನೆ ಈತ - ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ ಪ ಪರಿಪರಿಯಲಿ ಪೊಗಳುವ ಗೀತ - ನಾನೆಂದವರ ಮುರಿದ ಪ್ರಖ್ಯಾತ ಅ ಕೈಕಾಲಿಲ್ಲದೆ ಆಡ್ದಾಮೈಮೇಲ್ಭಾರವ ಪೊತ್ತು ನೋಡ್ದಾಕೋರೆಯಲಿ ತಿವಿದು ಹತ ಮಾಡ್ದಾತಾಕೊ ಎಂದು ಒದರಿ ಬಗೆದು ಬೀರ್ದಾಅರ್ತಿಯಿಂದ ಪಾತಾಳಕೆ ದೂಡ್ದಾಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾರಾವಣಗಾಗಿ ಅಂಬುತೆಗೆದು ಹೂಡ್ದಾಆ ಜಮುನೆ ಪೊಕ್ಕು ಮೋಜು ಮಾಡ್ದಾದಿಗಂಬರ ವೇಷವ ತಾಳ್ದಾದಿಗಿದಿಗಿ ಎಂದು ಅಶ್ವವೇರ್ದಾ 1 ಪಾದ ಭೂಮಿ ತಾನೊಲ್ಲಇವನ ಕೊಡಲಿಬಾಯಿಗಿದಿರಿಲ್ಲಕೋ ಎಂದ ಲಂಕೆಗೆ ಬೆಂಕಿ ಮಲ್ಲಕೊಂಕಲಿ ಕೊಳಲನೂದಿ ಗೊಲ್ಲಮೈಮೇಲ್ ಗೇಣರಿವೆಯಿಲ್ಲಇವ ಮೇಲಾದ ತೇಜಿಯನೇರಬಲ್ಲ 2 ವೈರಿ ವನಕ್ಕೆ ಕೇಡು ತಂದಹಾಲ್ಮೊಸರ ಮೀಸಲು ಮುರಿದು ತಿಂದಬತ್ತಲೆ ನಿಂದು ಹತ್ತುವೆ ಕುದುರೆ ಎಂದಭರದಿ ಕಾಗಿನೆಲೆಯಾದಿಕೇಶವನೆಂದ3
--------------
ಕನಕದಾಸ
ಮೋಜು ಮಾಡಿದಿರ ರುಕ್ಮಿಣಿ ಭಾಮೆಮೋಜು ಮಾಡಿದಿರರಾಜಪುತ್ರರ ವಾಜಿಗಾಣುತಸೋಜಿಗಾಗೇದರಾಜ ರಾಜರ ಪ. ಚದುರೆ ದ್ರೌಪದಿದೇವಿ ಮುದದಿ ಮುಯ್ಯವ ತಾರೆಇದುರಿಗೆ ಬಾರದೆ ಕದವನಿಕ್ಕಿ ಬಹಳೆ1 ಚಿಕ್ಕ ಸುಭದ್ರಾತಾ ಅಕ್ಕರದಿ ಬರುವಾಗಹೊಕ್ಕು ಒಳಗೆ ಕದವ ನಿಕ್ಕಿಕೊಂಡು ಬಹಳೆ2 ವಸುಧೆರಾಯರು ನಿಮ್ಮ ಕುಶಲಕ್ಕೆ ಬೆರಗಾಗಿಮುಸು ಮುಸು ನಗುತಾರೆ ಮುಸುಕಿನೊಳಗೆ ಬಹಳೆ3 ಕತ್ತಲೆಗಂಜುತ ಮಿತ್ರೆಯರು ನಿಂತೆವುಪೃಥ್ವಿರಾಯರು ನಿಮ್ಮ ಅರ್ಥಿಗೆ ನಗುತಾರೆ ಬಹಳೆ 4 ಕೃಷ್ಣ ರಾಮೇಶನ ಪಟ್ಟದರಾಣಿಯರುಎಷ್ಟು ಶಾಣೇರೆಂದು ಅಷ್ಟ್ಟೂರು ನಗುತಾರೆ ಬಹಳೆ5
--------------
ಗಲಗಲಿಅವ್ವನವರು