ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡುಪಿಯ ಶ್ರೀಕೃಷ್ಣ ನುಡಿಯ ಲಾಲಿಸು ಮಾಧವ ನುಡಿಯ ಲಾಲಿಸು ಪಾಲಕಡಲಶಯನ ದೇವ ಕಡಗೋಲ ಪಿಡಿದ ನಮ್ಮುಡುಪಿಯ ಶ್ರೀಕೃಷ್ಣ ಪ. ಮಾನವ ಮದವನ್ನು ಮಸರಂತೆ ಮಥಿಸಿದ ಭಾವನ ತೋರುವಿಯೊ ಹಾಗಲ್ಲದಿದ್ದರೆ ದೇವತಗಳಿಗಮೃತವನುಣಿಸಿದನೆಂಬ ಸೋವನು ಸೂಚಿಪೆಯೊ ಸೌಭಾಗ್ಯ ಸಿರಿಯೊ ಸೇವಕರ ಸೇವಾನುಗುಣಫಲ ನೀವ ತರತಮ ಭಾವವೊ ಭವ ನಾವ ನಡೆಸುವ ನಿಪುಣತೆಯೊ ದುರಿ ತಾವಳಿಯ ದೂರೋಡಿಸುವೆಯೊ1 ಕಲಿಯ ಬಲದಿ ಜ್ಞಾನಕಲೆಯಡಗಲು ದೇವ- ರ್ಕಳು ಬಂದು ಸ್ತುತಿಸಲಂದು ಸಕಲಸುರ ತಿಲಕ ವಾಯುವಿನ ಭೂವಲಯದೊಳವ- ಗೊಳುವರೆ ಪೇಳ್ವೆನೆಂದು ನೀ ಮನಕೆ ತಂದು ಹಲವು ಭವದಲಿ ಭಜಿಪೆ ಸಜ್ಜನ ಕುಲಕೆ ಮೋಕ್ಷಾಂತದ ಚತುರ್ವಿಧ ಫಲವ ನೀಡುವೆನೆಂದು ಪವನನಿ- ಗೊಲಿದು ಬಂದೀ ನಿಲಯದೊಳಗಿಹೆ 2 ಸರ್ವಜ್ಞ ಮುನಿಕೃತ ಸಕಲ ಪೂಜೆಗಳನ್ನು ನಿವ್ರ್ಯಾಜದಲಿ ಕೊಳ್ಳುತ ನಿರ್ವಾಹಗೊಳುತ ದುರ್ವಾದಿಪಟಲಾದ್ರಿ ಗರ್ವಾಪಹರ ಶತ ಪರ್ವ ಶಾಸ್ತ್ರವ ಕೇಳುತ ಸಂತೋಷಪಡುತಾ ಪೂರ್ವಸುಪರ್ವ ರಿಪುಗಳ ನಿರ್ವಿಯೊಳಗಡಿಯಿಡಗೊಡದ ಸುರ ಸಾರ್ವಭೌಮ ಶುಭೋನ್ನತಿ ಪ್ರದ 3 ಶ್ರೀನಿಕೇತನ ಸರ್ವ ಪುರುಷಾರ್ಥದಾಯಿಯೆ ನೀನೆಲ್ಲೆ ನೆಲೆಯದೋರಿ ಇರಲಿನ್ನು ಭಜಿಸದೆ ನಾನಾ ದೈವಗಳ ಸೇರಿ ಹಲ್ಲುಗಳ ತೋರಿ ಏನನುಸುರುವೆ ಕೃಷ್ಣ ಬುದ್ಧಿ ವಿ- ಹೀನತೆಯನದನೊ ಮಾನಿಸೆನ್ನ ಕಡಪಾನಿಧಿಯೆ ಪವ- ಪಾದ ಪಲ್ಲವ 4 ದ್ವಾರಾವತಿಯೊಳು ಸಂಸಾರಿ ಭಾವವನೆಲ್ಲ ತೋರಿದ ಕಾರಣದಿ ಅಲ್ಲಿಂದ ಭರದೀ ವಾರುಧಿ ಮಾರ್ಗದ ಸ್ವಾರಿಯ ನೆವನದಿ ಪಾರಿವ್ರಾಜರ ಸೇರಿದಿ ತದ್ಭಕ್ತಿಗೊಲಿದಿ ದೂರ ಭಯದಲಿ ವೆಂಕಟಾದ್ರಿಗೆ ಬಾರದಿಹ ಸಜ್ಜನರ ಮೇಲ್ಕರು- ಣಾರಸಾಮೃತ ಸೂಸುತ್ತಿಲ್ಲಿ ಸರೋರುಹಸ್ಮಿತ ಮುಖ ತೋರುವಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಧನಿ ಧನೀ ದಯದೋರೊ ಬ್ಯಾಗೆನ್ನ ಅನಾಥ ರಕ್ಷಕ ಬೇರ್ಯಾರೊ ಪ. ಜಲಜನಾಭ ನಿನ್ನಲಿ ಮನವಿರಿಸಲು ಸುಲಭವು ಮೋಕ್ಷಾಂತದ ಫಲವು ಎಂದು ತಿಳಿದುದು ನೀಯರಿದಿರೆ ದೀನನ ಇಂಥ ಫಲದಲಿ ತಳಮಳಗೊಳಿಸುವದ್ಯಾತಕೆ 1 ಆರಿಗೊರೆವದೀ ಕ್ರೂರವೇದನೆಯನ್ನು ಸೈರಿಸಲಾರೆನು ಸರ್ವೇಶ ಕಂಸಾರಿ ನೀ ಗತಿ ಎಂದು ಚೀರುವೆ ಚಿನ್ಮಯ ತ್ರಿಗುಣೇಶ 2 ಘೋರಾಪದ್ಗಣ ವಾರುಧಿಯೊಳಗೀಸ- ಲಾರದೆ ಮುಳುಗಿದೆ ಮಾರಮಣ ಪಾರಗಾಣಿಸದಿರೆ ದೂರು ನಿನಗೆ ಬಂದು ಸೇರದೆ ಬಿಡದು ವೆಂಕಟರಮಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವಿಷ್ಣು ತೀರ್ಥ ಅಣು ವಿಜಯ ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ ಚರಣಸರಸೀರುಹದಿ ಶರಣಾದೆ ಸತತ ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ ಪಾದ ಸೇವಿಸಿದ ಫಲವಾಗಿ ಭಾಗೀರಥಿ ಬಾಳಾಚಾರ್ಯರಲಿ ಜನಿಸಿ ವೇಂಕಟರಾಮಾರ್ಯ ಐಜಿಯವರ ಸುಪವಿತ್ರ ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ 1 ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು ಸತ್ಯಸಂಧರಸುತ ಸತ್ಯವರ ತೀರ್ಥರಿಂ ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ 2 ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು ಸೂರಿ ಈರ್ವರಿಗೆ ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ 3 ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ ಭಾಗವತ - ಸಾರೋ ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು 4 ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು ಆಧ್ಯಾತ್ಮ ರಸರಂಜಿನಿ ಅಮೃತಫÉೀಣ ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ ಸಾಧನವಾಗಿಹುದನ್ನು ರಚಿಸಿಹರು ಇವರು 5 ಹದಿನಾರು ಪ್ರಕರಣ ಶೋಡಶಿ ಎಂಬುzರÀಲಿ ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ ಮೋಕ್ಷಾಂತ ಶೋಡಶಿಯಲ್ಲಿಹುದು ಭಕ್ತಿ ಶುಚಿಯಲಿ ಪಠನೀಯ ರಹಸ್ಯವು 6 ಬಂಧಕವು ಬಂಧ ನಿವೃತ್ತಿಯು ಬಿಂಬ ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು ಅವಸ್ಥಾತ್ರಯ ನಿರ್ಮಾಣ ಆರನೆಯದು 7 ಪ್ರಾಣವ್ಯಾಪಾರವು ಭೋಜನ ಪ್ರಕರಣವು ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು ತನು ಅಧಿಷ್ಠಾನ ರಥಾಧಿ ಪ್ರಕರಣವು ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು 8 ಸ್ವಪ್ನವು ಸುಷುಪ್ತಿಯು ಗಮನಾಗಮನವು ಶುಭ ಮೋಕ್ಷ ಪ್ರಕರಣ ಷೋಡಶವು ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ 9 ಜೀವಹೋಮ - ಉಪನಯನ ಸೂರ್ಯಗತಿ ಯಜ್ಞ ಪವಿತ್ರತಮ ವೇದಾಧ್ಯಯನ ಭಿಕ್ಷಾಟನ ವೈಶ್ವಾನರ ಪ್ರಿಯ ಭೋಜನ ಪಾಪಲೇಪ ಜೀವ ಪ್ರಯಾಣ ಮಾರ್ಗವು ನವಮ 10 ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ ಶುದ್ಧಯಜ್ಞ `ಸ್ವರೂಪಯಜ್ಞ' ಸುಲಭಪೂಜಾ ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ ಆದಿತ್ಯಗ ಮಧು ಸುಖ ಪೂರ್ಣ ವಿಷಯ 11 ಯೋಗ್ಯ ಆಧಿಕಾರಿಗೆ ಮಾತ್ರ ಈಸೌ - ಭಾಗ್ಯಪ್ರದ ಜ್ಞಾನ ಪುಷ್ಠಿಕರಣ ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು ಅಯೋಗ್ಯರಿಗೆ ಸರ್ವಥಾ ಕೊಡಕೂಡದು 12 ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್ ಐದಿಹರಿಪುರಲಯವ ಚಿಂತನೆಮಾಡಿ ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು 13 ಮತ್ತೊಂದು ಅಂಶದಿ ವೃಂದಾವನದಿಹರು ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು 14 ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ `ಮಹಿಸಿರಿ' ಶ್ರೀ ಪ್ರಸನ್ನ ಶ್ರೀನಿವಾಸನ ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು 15 ಪ || ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು