ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಕದ್ದು ಬಂದೆನಯ್ಯ ರಂಗ ಮದ್ದು ಕಾಣೆನಯ್ಯ ಕಣ್ಣು ಕೊಟ್ಟು ಇಟ್ಟೆ ಇಲ್ಲಿ ನಿನ್ನ ನೋಡಲೆಂದು ಪ ನಾನು ನನ್ನದೆಂದು ಭ್ರಾಂತಿ ತಂದುಕೊಂಡೆನಯ್ಯ ನಿನ್ನದೆನ್ನದೆಂದೆ ನಾನು ನನ್ನ ಬಿಟ್ಟು ನೀನು ನಿಂತೆ ಅ.ಪ ಎಲ್ಲಿ ಇಲ್ಲ ನೀನು ದೇವ ಕುಂದು ಕೊರತೆಯುಂಟೆ ನಿನಗೆ ಖುಲ್ಲಮೋಹವೆಂಬ ಮೋಡ ನಿನ್ನ ಬೆಳಕು ಮುಚ್ಚಿತಯ್ಯ ಕಾಲಕಳೆದು ಕಲಿತೆ ನಿನ್ನ ಕಾಲುಬಿಟ್ಟರಿಲ್ಲ ಕೂಲ ಸೇರಿಸಯ್ಯ ಬೇರೆ ದಾರಿಯಿಲ್ಲವಯ್ಯ 1 ಅರಿತು ಪೇಳ್ವೆನಯ್ಯ ಕೃಷ್ಣ ನೀನು ಹೇಳಿ ಕೊಟ್ಟೆ ಆಗ ಬರಿದೆ ಕೆಟ್ಟು ಹೋದೆ ದೇವ ಒಳಿತು ಮಾಡವಯ್ಯ ಈಗ ಮರೆತು ನಿಲ್ಲಲಾರೆ ನಿನ್ನ ಕಲೆತುಬಂದು ನಿಲ್ಲೊ ನೀನು [ವರ]ಶೆಲ್ವ ಭಾಗ್ಯವಯ್ಯ ನೀನು ಭೋಗಮೋಕ್ಷವಯ್ಯ ದೇವ2
--------------
ಸಂಪತ್ತಯ್ಯಂಗಾರ್
ನೋಡುವ ಬನ್ನಿರಯ್ಯ ಪಕಾವೇರಿಯ ಭವಹಾರಿಯ |ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪಮಾತೆಯ ನುತಜನಜಾತೆಯ ಹರಿಮನಃ |ಪ್ರೀತೆಯ ಭುವನವಿಖ್ಯಾತೆಯ ||ನೀತಿಯುನ್ನತಕರದಾತೆಯ ಶಿವನ ಸಂ-|ಭೂತೆಯ ನೋಡುವ ಬನ್ನಿರಯ್ಯ 1ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|ಲಂದು ನಾರದಮುನಿ ಪೊಗಳುತಿರೆ ||ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|ದೆಂದರೆ ಮುಳುಗಲದೇತಕಯ್ಯ? 2ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |ಚಕ್ರತೀರ್ಥದೊಳಗೋಲಾಡಿ ||ಗಕ್ಕನೆ ಸದ್ಗತಿಯಹುದೆಂದು ಮನೆಗಳ |ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3ಕಂಡರೆ ಸಕಲಪಾತಕಪರಿಹಾರ, ಪಡೆ-|ದುಂಡರೆ ದುರಿತ-ದುರ್ಜನ ದೂರವು ||ಕೊಂಡಾಡಿದವರಿಗನಂತ ಫಲವು ನೀ-|ರುಂಡರೆ ಭವಬಂಧ ಮೋಕ್ಷವಯ್ಯ 4ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|ನಂಗಳಿಗಹುದು ಮುಕುತಿಯೆಂದಡೆ ||ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|ಪಂಗಳಿರದೋಡಿ ಪೋಪುವಯ್ಯ 5ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |ಆಗಲೆ ತನುವ ಬಿಡಲು ಮುಕುತಿ |ಭೋಗಿಶಯನನ ದಿನದಲಿ ಕಾವೇರಿಗೆ |ಹೋಗಿ ಮಿಂದವರಿಗಿದೇ ಗತಿಯಯ್ಯ 6ಕಾವೇರಿಯ ಗಾಳಿ ಸೋಕಿದ ದೇಶದೊ-ಳಾವಾವ ಮನುಜರು ಸುಕೃತಿಗಳೇ ||ಕಾವೇರಿಯ ತೀರವಾಸಿಗಳಿಗೆ ಮಕ್ತಿಆಹೋದು ಸಂದೇಃವಿಲ್ಲವಯ್ಯ 7ಆವಾವ ಜನ್ಮಕರ್ಮಂಗಳು ಸವೆವರೆಕಾವೇರಿಯ ಕಾಡು ಸುಖಬಾಳಿರೈ ||ಶ್ರೀವರ ಸ್ವಾಮಿ ಶ್ರೀಪುರಂದರವಿಠಲನಸೇವೆಯೊಳನುದಿನವಿಪ್ಪುದಯ್ಯ 8
--------------
ಪುರಂದರದಾಸರು