ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿಕ್ಷೆ ನೀಡೆನಗೆ ಪಕ್ಷಿಗಮನ ನಿಮ್ಮ ನಾಮ ಭಿಕ್ಷೆನೀಡಿ ರಕ್ಷಿಸೆನ್ನ ಮೋಕ್ಷಪದಕಧ್ಯಕ್ಷ ನಾಮ ಪ ಅಂಬರೀಷನ ಕಾಯ್ದ ನಾಮ ಇಂಬು ಇವಗಿತ್ತ ನಾಮ ಶಂಭು ಕುಣಿದು ಕುಣಿದು ಪೊಗಳ್ವ ಕುಂಭಿನಿಯೊಳು ಮೆರೆವ ನಾಮ 1 ಕರಿಯ ಕಷ್ಟಕ್ಕಾದ ನಾಮ ತರಳನ್ನೆತ್ತಿ ಪೊರೆದ ನಾಮ ಪರಮಪಾವನೆ ಪರಮೇಶ್ವರಿ ಅರಸಿ ಶಿರವದೂಗ್ವ ನಾಮ 2 ಯಮನ ಬಾಧೆ ಗೆಲಿಪ ನಾಮ ಸುಮನಸರೊಳಾಡಿಸುವ ನಾಮ ಅಮಿತ ಶ್ರೀರಾಮ ನಿಮ್ಮಾನಂದ ನಾಮ 3
--------------
ರಾಮದಾಸರು