ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಪಾಲಿಸೊ ಎನ್ನ ಮಾರುತಿರಾಯ ಪ ನೀನೆ ಪಾಲಿಸೊ ಮಹಾನುಭಾವನೆ ಸದಾ ಙÁ್ಞನ ಭಕುತಿನಿತ್ತು ಮಾನಾದಿ ನೀ ವೇಗ ಅ.ಪ ನಿನ್ನ ಆಧಾರ ಲೋಕಾ ಜನರು ಸದಾ ನಿನ್ನ ಭಜಿಸುವೊರೇಕಾ ಪ್ರಕಾರದಿ ನಿನ್ನ ಸೇವಿಪರನೀಕಾ ಸಂಗಾವಿತ್ತು ನಿನ್ನ ಧ್ಯಾನಿಪ ವಿವೇಕಾ ಮತಿಯನಿತ್ತು ಮನ್ನಿಸೊ ಮಜ್ಜನಕಾ ನಿನ್ನಾ ಭಜಿಪರಿಗೆ ಅನ್ಯಾಲೋಕಗಳುಂಟೆ ಘನ್ನಾ ಹರಿಯ ಲೋಕವನ್ನೆ ಸೇರುವರಯ್ಯಾ 1 ರಂತರ ದೊಳಗಿಹನು ಎಂದು ನಿನ್ನಾ ನಂತ ರೂಪಗಳನ್ನು ಭಜಿಸುವ ಗಂತು ಜ್ಞಾನವನ್ನು ನೀಡುತ ಜನ ರಂತರದಲಿ ನೀನು ನಿಂತು ಪಾಲಿಸಿ ಜೀವರಂತೆ ಗತಿಯನಿತ್ತು ಕಂತುºರಾದ್ಯರ ಸಂತತಿ ವಂದ್ಯನೆ 2 ಸೀತಾರಾಮನ ಪಾದವಾ ಸೇವಿಸಿ ನಿತ್ಯ ಪಾತಕಾಂಬುಧಿಗೆ ದಾವಾನಂತೆ ಜಗದಿ ಈ ತೆರದಲಿ ಮೆರೆವಾನೆಂದು ಈಗ ಸೋತು ನಾ ಬಂದೆ ದೇವಾ ನೀನೇ ಎನ್ನ ಮಾತು ಲಾಲಿಸೊ ದ್ಯುಧವಾ ಮಾತರಿಶ್ವ ನಿಜ ದೂತಾನು ನಾನಯ್ಯ ನೀತ ಗುರು ಜಗನ್ನಾಥವಿಠಲಪ್ರಿಯ 3
--------------
ಗುರುಜಗನ್ನಾಥದಾಸರು
ರಕ್ಷಿಸೋ ಪವಮಾನ ಸದ್ಗುರುವರಾ ಪ ಜೀವರ ಬಂಧಗಳಿಂದ ಎಲ್ಲ ಪಾವನ ಮಾಳ್ಪದರಿಂದ ದೇವ ಪಾವನಮೂರ್ತಿಯು ನಿನ್ನ ಮುಖದಿ ಜಗ ತ್ಪಾವನ ಮಾಳ್ಪುದರಿಂದ ಪವನನೆಂಬೋರೆ ನಿನ್ನ ಅ.ಪ ಜ್ಞಾನೈಶ್ವರ್ಯ ವೈರಾಗ್ಯ ನಿನಗೆ ನಿನ್ನ ಸ್ವರೂಪ ಸ್ವಭಾವಕೆ ಯೋಗ್ಯ ನಿಜ ಘನ್ನ ಮಹಿಮ ನಿನ್ನ ಭಾಗ್ಯ | ಆಹಾ ತನು ಚತುಷ್ಟಯದೊಳಗನವರತ ವ್ಯಾಪ್ತನೋ ಇನ್ನೂ ಮುನ್ನೂ ಜಗತ್ಕಾರ್ಯ ನಿನ್ನದೋ ದೇವಾ1 ಬೃಹತಿನಾಮಕ ಕರುಣಾಳು ನಿನ್ನ ದೇಹದಿ ಭಗವದ್ರೂಪಗಳೂ ನಿತ್ಯನೋಡುತ ಅನೇಕಂಗಳು | ಆಹಾ ಬೃಹತಿ ಛಂದಸ್ಸು ಅನ್ನವು ಶ್ರೀಹರಿಗೆ ಛಂದಸ್ಸಿನಿಂದಾಚ್ಛಾದಿತ ತ್ವದ್ಗಾತ್ರನೊ2 ಪ್ರಾಣಾಪಾನ ವ್ಯಾನೋದಾನ ಸಮಾನಾದಿ ಪಂಚಪ್ರಾಣ ಜೀವ ಶ್ರೇಣಿಗಳೊಳಗೆ ನೀ ಪ್ರವೀಣ ಜಗತ್ರಾಣ ನೀನಹುದೋ ಸದ್ಗುಣ |ಆಹಾ ಪ್ರಾಣಾಪಾನದಿಂದ ದೇಹದ ಸ್ಥಿತಿ ಕಾರ್ಯಕ್ಷಣ ತಪ್ಪಲು ಕುಣಪನೆಂದಪರೋ ಈ ದೇಹಕೆ3 ಇಪ್ಪತ್ತೊಂದು ಸಾವಿರದಾರುನೂರು ಶ್ವಾಸ ತಪ್ಪದೆ ಜೀವರು ಮಾಡಿ ಅಹರ್ನಿಶಿ ದೇಹವ ಧರಿಪರೋ ನಿನ್ನ ಒಪ್ಪಿಗೆಯಂತೆ ಸಾಧಿಪರೋ | ಹಾ ಅಹೋರಾತ್ರಿ ಶ್ವಾಸನಿಯಾಮಕ ಜೀವರ್ಗೆ ಅಯುಮಾನವ ನೀವ ಮಾತರಿಶ್ವದೇವಾ 4 ನಿನ್ನಂತರದಿ ಇಟ್ಟು ಅವಸ್ಥಾಭೋಗ್ಯವನಿತ್ತು ತ್ವರದಿ | ಆಹಾ ಪಾವನ ಮೂರ್ತಿಗೆ ಅರ್ಪಿಸುತ್ತ ಶ್ರೀಪತಿ ಕರವ ಮುಗಿದು ನಿಂದಿಹೆ 5 ಪರಿಶುದ್ದ ಸತ್ವಾತ್ಮಕವಾಗಿ ಇನ್ನು ನಿರುತ ಪೂರ್ಣಪ್ರಜ್ಞನಾಗೀ ಜೀವ ಸ ರ್ವರೊಳು ಶುಚಿತಮನಾಗಿ ಇರ್ಪ ಮಾರುತ ನಿನ್ನೊಳು ಅನುವಾಗಿ |ಆಹಾ ಹರಿಯು ನಿನ್ನ ಶುಚಿ ತನುವಿನೊಳಿದ್ದು ಶುಚಿಹೃತ್ ಎಂದು ತಾ ನಿಂದು ನಲಿವನಯ್ಯ6 ಅಂಡಾವರಣದ ಗುಣತ್ರಯ ಕಂಡಿಹೆ ವ್ಯಾಪ್ತಸದ್ಗುಣ ಉ ದ್ದಂಡ ಮಹದ್ರೂಪನೆ ಮಹಘನ್ನ ಇನ್ನು ಮೃಡನಾಪೇಕ್ಷ ಶತಗುಣ | ಆಹಾ ತನುರೂಪದೊಳೆಲ್ಲ ಅಣುರೂಪವಾಗಿಹೆ ತೃಣಮೊದಲು ಸರ್ವಜೀವರೊಳು ವ್ಯಾಪ್ತನೊ7 ಅಂದು ತ್ರಿಕೋಟಿರೂಪದಲಿ ನಿಂತು ನಿಂದ ತ್ರಿವಿಕ್ರಮಾವತಾರದಲೀ ಸೇವೇ ಆ ನಂದದಿ ಸಲಿಸುತ್ತಲಲ್ಲಿ ಇನ್ನು ನಿಂದು ಅಂ ಡದ ಬಹಿರ್ಭಾಗದಲಿ |ಆಹಾ ಅಂಡ ಖರ್ಪರ ಉದ್ದಂಡ ಮೂರುತಿಯೊ 8 ವಾಯುಕೂರ್ಮನಾಗಿ ನಿಂದೇ ಜಗದಾದ್ಯಭಾರವು ಎಲ್ಲ ನಿನ್ನಿಂದೇ ಎಂದು ಕಾಯಜಪಿತ ತರುವ ಮುಂದೇ ನಿನ್ನ ಗಾಯತ್ರೀಪತಿಯ ಪಟ್ಟಕೆಂದೇ | ಆಹಾ ಶ್ರೀಯರಸಾ ಶ್ರೀ ವೇಂಕಟೇಶಾತ್ಮಕ ಉರಗಾದ್ರಿವಾಸವಿಠಲನ ನಿಜದಾಸ 9
--------------
ಉರಗಾದ್ರಿವಾಸವಿಠಲದಾಸರು
ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ರಂಜಿತಾಂಗಿ ನಿರಂಜನಾಂಗಿ ಪ ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ 1 ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ2 ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ 3 ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ 4 ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ5 ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ 6 ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ7 ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. 8 ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ 9 ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ 10 ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ11 ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ12 ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ13 ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ 14 ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ 15 ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು16 ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು 17
--------------
ಶ್ರೀಪಾದರಾಜರು