ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕ ನಾಯಕ ಲಕ್ಷ್ಮೀಲೋಲನಾ ಸ್ಮರಣೆ ಬಿಟ್ಟೂ ಪ ವಿದಿ ಮುನ್ನೆ ಬರದಿಷ್ಟಾ ಯಡಿಯಾತಪ್ಪಾದು ತುದಿಮೊದಲಿಂದಾ ಮಾಡಿದ ದೋಷವೆಲ್ಲಾ ಬೆದರಿಸಿದರೆ ಅದು ಬಿಡಲು ಬಲ್ಲುದೆ ಕೇಳೂ ಪಾದ ಭಜನಿಯ ಬಿಟ್ಟು 1 ನಾನಾಪರಿಯ ಮನಸೂ ನಟಿಸುವದಲ್ಲಾದೆ ಏನು ಎಲ್ಲವೂ ವ್ಯರ್ಥಾ ವೇದನೆ ನಿಂದೆ ನೀನು ಮಾಡಿದಾ ಫಲ ನಿನಗುಣಿ ಸದೆ ಬಿಡದೂ ಮಾನವಾಧೀಶನಂಘ್ರಿ ಧ್ಯಾನವೆಂಬುದು ಬಿಟ್ಟು 2 ಸಕಲಕೆ ಕರ್ತನಾಗಿ ಸರ್ವೋತ್ತಮನಿರಲು ಭಕುತಿ ಭಾವನೆಯಿಂದ ಭಜಿಸಾದೆ ನಿ ವಿಕಟಯೋಚನೆಯಿಂದ ಏನುಫಲವು ಇಲ್ಲಾ ನಿಕರ `ಹೊನ್ನೆಯ ವಿಠ್ಠಲನ ' ನಾಮೋಪಾಸನೆ ಬಿಟ್ಟು 3
--------------
ಹೆನ್ನೆರಂಗದಾಸರು
ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ ಸಾಕು ದಯದಿಂದನೇಕ ಮಹಿಮನೆ ಏಕಾಮೇವಾದ್ವಿತೀಯ ಪ ಮಂಗಳಾಂಗ ಮಾತಂಗವರದ ವಿ- ಹಂಗಗಮನ ಭುಜಂಗಶಯನ ತು- ರಂಗವದನ ಶುಭಾಂಗ ರಿಪುಕುಲ- ಭಂಗ ಅಸಿತಾಂಗ ಅ.ಪ. ಶೃಂಗಾರಾಂಬುಧಿ ರಂಗ ನಿನ್ನಯ ಅಂಗಸಂಗಕ್ಕೆ ಅಂಗೀಕರಿಸಿದ ಸಂಗಿತರ ಚರಣಂಗಳಬ್ಜಕೆ ಭೃಂಗನಪ್ಪೆನೆಂತೊ 1 ಮಾನವಾವುದು ಸುಮ್ಮನಿರೆ ಪವ- ಮಾನವಂದಿತ ನಿನ್ನ ಪೋಲ್ವ ಸ- ಮಾನರಾರನು ಕಾಣೆ ಎನ್ನಭಿ- ಮಾನವಾಧೀಶ ಮಾನವಮಾನ- ಮಾನದಿಂದ ಕ್ರಮಾನುಸಾರನು ಮಾನಗೊಳಿಸದೆ ಮಾನವಿತ್ತು ದು- ಮ್ಮಾನವನೆ ಬಿಡಿಸೊ 2 ಬಲ್ಲೆ ನಿನ್ನಯ ಎಲ್ಲ ಪರಿಯಲಿ ಬಲ್ಲಿದರಿಗತಿ ಬಲ್ಲಿದನು ಸಿರಿ- ವಲ್ಲಭಾ ನೀನಲ್ಲದಿಲ್ಲೆಂದು ಎಲ್ಲ ತುತಿಸುತಿದೆ ಸೊಲ್ಲುವೊಂದನು ನಿಲ್ಲುತಲಿ ಕೇಳು ಎಲ್ಲು ಬಯಸದೆ ಇಲ್ಲಿಗೇ ಬಂದೆ ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ ಬಲ್ಲದನು ಮಾಡೋ3
--------------
ವಿಜಯದಾಸ