ಒಟ್ಟು 6 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ ಕಂಡು ಬೆದರುವ ಷಂಡನಲ್ಲವೊ ಪುಂಡರೀಕ ಲೋಚನನೇ ದೊಡ್ಡ 1 ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ ನೊಂದರೂ ಗೋವಿಂದ ನಿನ್ನನು ಬಂಧುವೆಂದು ನಂದದಿ ಪೊಗಳುವ 2 ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ ಲೇಶ ಎನ್ನನು ಪೋಷಿಸುವನೆಂದು ಘೋಷಿಸುವೆನೋ ಶೇಷಶಯನನೇ 3 ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ ಜಾನಕೀಶನೆ ನೀನು ಎನ್ನಯ ಮಾನರಕ್ಷಕನೆಂದು ಅರಿಯುವ 4 ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ ಸೊನ್ನೆಯಾದರು ನಿನ್ನ ಪಾದಗ ಳನ್ನು ಬಿಡೆನೊ ಪ್ರಸನ್ನ ಮೂರುತಿ 5
--------------
ವಿದ್ಯಾಪ್ರಸನ್ನತೀರ್ಥರು
ಶ್ರೀನಿವಾಸನೆ ನಿನ್ನ ಮಹಿಮೆಯ ಏನ ಪೇಳ್ಪೆನಾ ಜ್ಞಾನರಹಿತಳು ಗಾನಲೋಲನೆ 1 ಮಂಕುಮಾನವರಿಂದ ಸಾಧ್ಯವೆ ಶಂಕರಾದಿ ವಂದಿತನ ಸ್ತುತಿಸಲು ಪಾದ ಪಂಕಜ ಧ್ಯಾನಿಸೆ ನಿನ್ನ ಕೃಪೆಯನಾತಂಕವಿಲ್ಲದೆ2 ನಿನ್ನ ಭಕ್ತರಾ ಕಾಯ್ವೆಯೆಂಬುವುದನ್ನು ಅರಿತೆಹೆ ಪನ್ನಗಾಚಲ ಚಿನ್ನಭೊಮ್ಮನಿಂದಳವೆ ದೇವನೆ 3 ಕಿರೀಟಶೋಭನÀ ವರ್ಣಿಪೆ ಕರ್ಣಕುಂಡಲ 4 ಪದ್ಮನಾಭಗೆ ಪದ್ಮದಕ್ಷಿಯ ತಿದ್ದಿದ ಚಂಪಕದ ನಾಸಿಕ ಮುದ್ದುದಂತ ಪಂಕ್ತಿಗಳ ಕಂಡೆನೊ ಪೂತನಿಯ ಅಸುಹೀರಿದ ಆ ಭುಜಕೀರ್ತಿಗಳ ಕಂಡೆನು ಭಕ್ತಪಾಶ ನಿನ್ನ ಹಸ್ತ ಕಂಕಣವಾ ಕಂಡೆನು 5 ಬೆರಳ ಮುದ್ರಿಕೆ ಕೊರಳೊಳ ಸಾಲಿಗ್ರಾಮದ ಸರ ವೈಜಯಂತಿ ಮಾಲೆಗಳ ಕಂಡೆನು 6 ವÀರ ಶ್ರೀ ತುಳಸಿಯ ಹಾರಗಳ ಮಧ್ಯದಿ ಮೆರೆವ ರಮಾದೇವಿಯಳ ಕಂಡೆನು ಜಾನು ಜಂಘೆಯೊಳ ಮೆರೆವ ಪೀತಾಂಬರ ಕಂಡೆನು 7 ಆಜಾನುಬಾಹು ನೀನ್ಹೊದ್ದವಲ್ಲಿ ವಜ್ರದ್ಪಡ್ಯಾಣಕಂಡೆನು ಸಾನುರಾಗದಿ ಸ್ತುತಿಸಿ ಹಿಗ್ಗುತ ನಾನುಸ್ತುತಿಪ ನಿನ್ನಂಘ್ರಿ ಕಮಲವ 8 ಚರಣಕೊಪ್ಪುವೊ ಗಗ್ಗರಿಪಾಡಗ ವರಗೆಜ್ಜೆ ಪೈಜಣಿ ಕಂಡೆ ದೇವನೆ ಶ್ರೀವೆಂಕಟೇಶನೆ 9 ಕಾಯ ಬೇಕೆÉಲೊ ಕ್ಷಮಿಸೊ ದೇವನೆ 10
--------------
ಸರಸ್ವತಿ ಬಾಯಿ
ನಾ ನಿನ್ನ ಧ್ಯಾನದೊಳಿರಲು - ಇಂಥಹೀನ ಮಾನವರಿಂದೇನಾಹೋದು ಹರಿಯೆ ಪ.ಮಚ್ಚರಿಸಿದರೇನ ಮಾಡಲಾಪರೊ ಎನ್ನಅಚ್ಯುತ ನಿನ್ನದೊಂದು ದಯವಿರಲು ||ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ 1ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲುಧೂಳು ರವಿಗೆ ತಾನು ಮುಸುಕುವುದೇ ||ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ 2ಕನ್ನಡಿಯೊಳಗಿನ ಗಂಟ ಕಂಡು ಕಳ್ಳಕನ್ನವಿಕ್ಕಲು ವಶವಾಗುವುದೇ ?ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ 3
--------------
ಪುರಂದರದಾಸರು
ಸಜ್ಜನರ ಸಂಗ ನಮಗೆಂದಿಗಾಗುವುದೊ |ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |ಪೋಕರಾಡಿದ ಮಾತು ನಿಜವೆಂಬರು ||ವಾಕ್‍ಶೂಲಗಳಿಂದ ನೆಡುವರು ಪರರ ನೀ |ಪೋಕುಮಾನವರಿಂದ ನೊಂದೆ ಹರಿಯೆ 1ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |ನ್ಯಾಯವಿಲ್ಲದೆ ನುಡಿವರು ಪರರ ||ಭಾವಿಸಲರಿಯರು ಗುರುಹಿರಿಯರನಿಂಥ |ಹೇಯ ಮನುಜರಿಂದ ನೊಂದೆ ಹರಿಯೆ 2ಒಡಜನರನು ಕೊಂದು ಅಡಗಿಸಿಕೊಂಬರು |ಬಿಡಲೊಲ್ಲರು ಹಿಡಿದನ್ಯಾಯವ ||ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |ತೆತ್ತಿಗರೊಡನೆ ಪಂಥವ ನುಡಿವರು ||ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |ಮತ್ತಮನುಜರಿಂದ ನೊಂದೆ ಶ್ರೀಹರಿಯೆ4ಇಷ್ಟುದಿನವು ನಿನ್ನ ನೆನೆಯದ ಕಾರಣ |ಕಷ್ಟಪಡುವ ಕೈಮೇಲಾಗಿ ||ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
--------------
ಪುರಂದರದಾಸರು