ಒಟ್ಟು 11 ಕಡೆಗಳಲ್ಲಿ , 6 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸ ಕಂಡೆ ನಿನ್ನಿನಿರುಳೊಳು ಕೇಳುಕನಸಿನ ಸೊಗಸನು ತರಳೆಚಿನುಮಯಾತ್ಮಕ ಚಿದಾನಂದ ಅವಧೂತದಿನಕರ ಪ್ರಭಾತೀತ ಗುರುನಾಥ ಬಂದಿಹ ಪ ಕಾಶ ಕೌಪೀನವನುಟ್ಟು ಚೆಲ್ವಬಾಸುರ ಕುಂಡಲವಿಟ್ಟುಕೇಶದ ಜಡೆಗಳು ಥಳಥಳಿಸಲು ಸರ್ವಭೂಷಿತನಾಗಿ ತನ್ನೆದುರಿಗೆ ನಿಂತಿಹ 1 ನೆಟ್ಟನೆ ನಡುಮನೆಯೊಳು ತಾನುನೆಟ್ಟನೆ ಬಂದು ಕುಳಿತಿಹನುಶಿಷ್ಟ ಮೂರುತಿ ತನ್ನ ಕಾಯಬೇಕು ಎಂದುಮುಟ್ಟಿ ಪಾದವ ನಾನು ಶರಣು ಮಾಡಲಿದ್ದೆ2 ಸುಂದರ ಕಳೆಯುಳ್ಳ ಸ್ವಾಮಿತಾನು ಸಿಂಧು ಕೃಪಾಕರನಾಮಿ ಎಂದಡಿಗಡಿಗೆ ಸಾಷ್ಟಾಂಗವೆರಗಿನಿಂದು ಪೂಜಿಸಿ ಕಣ್ತುಂಬ ನೋಡಿನಲಿವ 3 ನಾನಾ ಪೂಜೆಯನೆಲ್ಲವ ಮಾಡಿ ಗುರುಧ್ಯಾನದಿನಾನೋಲಾಡಿ ಮಾನವನಾಗಿನಾನು ನಿಂದಿರಲೆನ್ನ ಕಿವಿಯೊಳುನಾನು ನೀಗಿತ್ತೆಂದು ಉಪದೇಶ ನೀಡುವ4 ಈಪರಿ ಕನಸನು ಕಂಡು ಎಲ್ಲತಾಪವು ಪರಿಹಾರಗೊಂಡುಭೂಪ ಚಿದಾನಂದ ಅವಧೂತ ತಾನಾದರೂಪಾಗಿ ಬೆಳಗಿರೆ ಬೆಳಗಿರೆ ಬೆಳ್ಳನೆ ಬೆಳಕಿತ್ತು5
--------------
ಚಿದಾನಂದ ಅವಧೂತರು
ಉಪದೇಶಾತ್ಮಕ ಪದಗಳು ನೀಚವೃತ್ತಿಯ ಬಿಟ್ಟು ಸೋಚಿತ ಕರ್ಮವನೇ ಯೋಚನೆ ಮಾಡುತಾ ಪ ನೀಚ ಜನರುನು ಯಾಚಿಸದೆ ಸವ್ಯ ಸಾಚಿಯ ಸಖನ ಭಜಿಸೋ ಪ್ರಾಣೀ ಸರಸ ಸಲ್ಲಾಪ ಶ್ರೀ ಹರಿಕಥಾ ಶ್ರವಣ ನೀ ಪರಮಭಕ್ತರ ಸಂಗವಾ ನಿರುತದಲಿ ನೀ ಮಾಡಿ ಹರುಷ ಮನವನು ತಾಳಿ ಚರಿಸೊ ಈ ಧರಣಿ ಮಂಡಲಾ ಅರಸಿಗಾದರು ಒಮ್ಮೆ ಶಿರಸುಬಾಗದಲೆ ಶ್ರೀ ಹರಿದಾಸರಾ ಚರಣಕೆ ಎರಗ್ಯವರ ಮನಿದ್ವಾರಪರಿಚರನು ಎಂದೆನಿಸಿ ಭರದಿಂದ ಬಾಳಿ ಬದಕೋ ಇದಕೋ 1 ಅಲ್ಪ ಆಶೆಯ ಮಾಡಿ ಅಲ್ಪ ಮಾನವನಾಗಿ ಕಲ್ಪನೀಯನು ಮಾಡದೆ ಸ್ವಲ್ಪ ಫಲದಲಿ ಮನಸು ಕಲ್ಪಿಸಿ ಪ್ರಿತಿದಿನವ ನಲ್ಪ ಜನರನು ನಿಂದಿಸೀ ಅಲ್ಪನಾರೇರು ಮಾಳ್ಪ ಒಲ್ಪಿಗೆ ಮರುಳಾಗಿ ಪಲ್ಕಿಸಿದು ಬಾಯ್ದೆರೆಯದೆ ಸ್ವಲ್ಪಗಾಲದಲಹಿತಲ್ಪ ಪದಪದುಮಗಳ ಕಿಂ - ಜಲ್ಕ ನೀನಾಸ್ವಾದಿಸೋ ಲೇಸೋ2 ಪೊಡವಿ ಮೊದಲಾದ ಈ ಮಡದಿ ಮಕ್ಕಳು ಗೇಹ ವಡವಿ ವಸನವ ಬಯಸದೆ ಪೊಡವಿಮಂಡಲದಿ ಬಹು ಬಡವ ನಾನೆನುತಲೀ ಪೊಡವಿ ಪಾಲರ ಸೇವೆಯಾ ಧೃಢಮನದಿ ನೀ ಮಾಡೆ ಕೊಡರೊಂದು ದುಗ್ಗಾಣಿ ಕಡುಮೂರ್S ಎಲೊ ಪಾಪಿಯೇ ಬಿಡದೆ ದೈನ್ಯದಿ ನೀನು ಜಡಜನಾಭನ ಪಾದ ಬಿಡದೆ ಸೇವಿಸಲು ಫಲವ ಕೂಡುವಾ 3 ನಾ ಮಾಡೋ ವ್ಯಾಪಾರ ನೀ ಮಾಡಿಸುವಿ ಎಂಬ ಈ ಮಹಾಙÁ್ಞನ ಮಾರ್ಗ ನೇಮವಾಗಿ ತಿಳಿದು ಗ್ರಾಮ ಗ್ರಾಮದಲ್ಲಿದ್ದ ಪಾಮರೋತ್ತಮ ಜನರಿಗೆ ಧಾಮನಾಗಿಹ ನಮ್ಮ ರಾಮದೇವನ ಪಾದ ತಾಮರಸ ಕೊಂಡಾಡುತಾ ಪ್ರೇಮ ಹರುಷಾಮರ್ಷ ಯಾಮಯಾಮಕೆ ಬರಲು ಕಾಮಿಪುದು ನಿನಗೆ ಸಲ್ಲಾ ಖುಲ್ಲಾ 4 ನಗುವ ಜನರಾ ಕಂಡು ನಗುವುದೇ ಲೇಸೆಂದು ಸಿಗದೆ ಜನರೊಳು ತಿರುಗುತಾ ಬಗೆ ಬಗೆಯ ಮಾತುಗಳ ಬೊಗಳುವಾ ಜನರಿಗೆ ಹಗಲಿರಳು ಹರಿ ಕಾಯಲೀ ನಿಗಮ ವಂದಿತನ ಪ್ರತಿ ಮೆಗಳು ಇವು ಎಂದು ತಿಳಿಯೇ ನಗುತ ಹರುಷವ ಕೊಡುವ ಸುಗುಣಪೂರಣ ಗುರು ಜಗನ್ನಾಥವಿಠಲರಾಯಾ ಮರೆಯಾ 5
--------------
ಗುರುಜಗನ್ನಾಥದಾಸರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೊ ಪರಮ ಪಾವನ್ನ ಕಮ ಲಾಲಯ ನಂಬಿದೆ ನಿನ್ನ ಆಹ ನಖ ತೇಜ ಮೂರ್ಲೋಕದರಸೆ ನೀನಾಲಯ ಬಿಡದಲೆ ಅ.ಪ ಹಿಂದೆ ಪ್ರಹ್ಲಾದನ ಮೊರೆಯ ಕೇಳಿ ಬಂದು ಕಾಯಿದೆ ಭಕ್ತ ಪ್ರಿಯ ಸುಖ ಸಂದೋಹ ಮೂರುತಿ ಆಯ ತಾಕ್ಷ ಎಂದೆಂದು ಬಿಡದಿರು ಕೈಯ ಆಹ ವೃಂದಾರ ಕೇಂದ್ರಗೆ ಬಂದ ದುರಿತಂಗಳ ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ 1 ಹರಣದಲ್ಲಿ ನಿನ್ನ ರೂಪ ತೋರಿ ಪರಿಹರಿಸೊ ಎನ್ನ ಪಾಪ ದೂರ ದಿರದಿರು ಹರಿಸಪ್ತ ದ್ವೀಪಾಧಿಪ ಸಿರಿಪತಿ ಭಕ್ತ ಸಲ್ಲಾಪ ಆಹ ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ ನರಕಂಠೀರವ ದೇವ ಚರಣ ಆಶ್ರೈಸಿದೆ 2 ಶರಣ ಪಾಲಕನೆಂಬೊ ಬಿರುದು ಕೇಳಿ ತ್ವರಿತದಿ ಬಂದೆನೊ ಅರಿದು ಇನ್ನು ಪರಿ ಅಪರಾಧ ಜರಿದು ಪರತರನೆ ನೋಡೆನ್ನ ಕಣ್ತೆರೆದು ಆಹ ಮರಣ ಜನನಂಗಳ ತರಿದು ಬಿಸುಟು ನಿನ್ನ ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ 3 ಸಂಸಾರ ಸಾಗರ ದೊಳಗೆ ಎನ್ನ ಹಿಂಸೆ ಮಾಡುವರೇನೊ ಹೀಂಗೆ ನಾನು ಕಂಸಾರಿ ಅನ್ಯರಿಗೆ ಬಾಗೆ ಮತ್ತೆ ಸಂಶಯವಿಲ್ಲ ಮಾತಿಗೆ ಆಹ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಶೌರಿ ಮೂರ್ತಿ ದಿವಸ ದಿವಸದಲ್ಲಿ 4 ಭವ ಶಕ್ರಾದ್ಯಮರ ಕೈಯ ನಿರುತ ತುತಿಸಿಕೊಂಬ ಧೀರ ಶುಭ ಪರಿಪೂರ್ಣ ಗುಣ ಪಾರಾವರ ಭಕ್ತ ವಾರಿನಿಧಿಗೆ ಚಂದಿರ ಆಹ ಸ್ಮರನ ಕಾಂತಿಯ ನಿರಾಕರಿಸುವ ತೇಜನೆ ಎರವು ಮಾಡದೆ ಹೃತ್ಸರಸಿಜದೊಳು ತೋರಿ 5 ಮೊದಲು ಮತ್ಸ್ಯಾವತಾರದಿ ವೇದ ವಿಧಿಗೆ ತಂದಿತ್ತ ವಿನೋದಿ ಶ ರಧಿಯೊಳು ಸುರರಿಗೋಸ್ಕರದಿ ನೀನು ಸುಧೆಯ ಸಾಧಿಸಿ ಉಣಿಸಿದೆ ಆಹ ಅದುಭೂತ ಭೂಮಿಯ ತೆಗೆದೊಯ್ದುವನ ಕೊಂಡು ಮುದದಿ ಹಿರಣ್ಯಕನುದರ ಬಗಿದ ಧೀರ 6 ಬಲಿಯ ಮನೆಗೆ ಪೋಗಿ ದಾನ ಬೇಡಿ ತುಳಿದೆ ಪಾತಾಳಕ್ಕೆ ಅವನ ಪೆತ್ತ ವಳ ಶಿರ ತರಿದ ಪ್ರವೀಣ ನಿನ್ನ ಬಲಕೆಣೆಗಾಣೆ ರಾವಣನ ಆಹ ತಲೆಯನಿಳುಹಿ ಯದುಕುಲದಿ ಜನಿಸಿ ನೀನು ಲಲನೇರ ವ್ರÀ್ರತವಳಿದಾಶ್ವಾರೂಢನೆ 7 ಮಾನಸ ಪೂಜೆಯ ನೀ ದಯದಿ ಇತ್ತು ಶ್ರೀನಾಥ ಕಳೆ ಭವವ್ಯಾಧಿ ಕಾಯೋ ಅನಾಥ ಬಂಧು ಸುಮೋದಿ ಚತುರಾ ನನಪಿತ ಕೃಪಾಂಬುಧಿ ಆಹ ತಾನೊಬ್ಬರನರಿಯೆ ದಾನ ವಿಲೋಲನೆ ಏನು ಮಾಡುವ ಸಾಧನ ನಿನ್ನದೊ ಹರಿ8 ನಿನ್ನ ಸಂಕಲ್ಪವಲ್ಲದೆ ಇನ್ನು ಅನ್ಯಥಾವಾಗಬಲ್ಲುದೆ ಹೀಂಗೆ ಚೆನ್ನಾಗಿ ನಾ ತಿಳಿಯದೆ ಮಂದ ಮಾನವನಾಗಿ ಬಾಳಿದೆ ಆಹ ಎನ್ನಪರಾಧವ ಇನ್ನು ನೀ ನೋಡದೆ ಮನ್ನಿಸಿ ಕಾಯೋ ಜಗನ್ನಾಥ ವಿಠಲ 9
--------------
ಜಗನ್ನಾಥದಾಸರು
ಪುಟ್ಟಿ ಬಂದಿಹೆಯಾ ಕಿಟ್ಟಯ್ಯಾ ಪ ಕೆಟ್ಟ ಲೋಕವನೆಲ್ಲ ನೆಟ್ಟನೆ ತಿದ್ದಲುಕಟ್ಟಿ ನೋಡು ಶ್ರಾವಣದಷ್ಟಮಿ ದಿನದಲ್ಲಿ 1 ಹೀನಾದ ಧರ್ಮದ ಜ್ಞಾನೋದಯ ಗೈಸಿದೀನರನುದ್ಧರಿಸಿ ಮಾನವನಾಗಿ 2 ಬಾಧಿಪ ಕುಜನರ ಛೇದಿಸಿ ಜಗದೊಳುಸಾಧು ಸುಜನರನು ಮೋದದಿ ಸಲುಹಲುಮೇದಿನಿಯೊಳು ನೀ ಉದಿಸಿ ಬಂದೆಯಾ 3 ಭಕ್ತರ ಮೊರೆ ಕೇಳಿ ಯುಕ್ತಿಯಿಂದ ಸಲುಹಲುಮುಕ್ತಿಯ ಸ್ಥಾನ ವೈಕುಂಠವ ಬಿಟ್ಟು 4 ಸುರ ಮುನಿಗಳಿಗಿಂತು ವರವಿತ್ತ ಕಾರಣ ಧರೆಯೊಳು ಗದುಗಿನ ವೀರನಾರಾಯಣ5
--------------
ವೀರನಾರಾಯಣ
ಬಂದೆಯಾ ಕೃಷ್ಣಯ್ಯಾ ಬಂದೆಯಾ ಪ ಸುಂದರ ನರರೂಪದಿಂದಲೀ ಧರೆಯೊಳು ಅ.ಪ. ಲೋಕೈಕ ದೇವನೆಂದು ಜ್ಞಾನಿಗಳೇಕಾಗಿ ಸಾರ್ವರಿಂದುಆಕಾರ ರಹಿತನ ಲೋಕ ಸಾಮಾನ್ಯರುಸ್ವೀಕರಿಸರು ಎಂದು ಸಾಕಾರನಾಗಿ 1 ಪೂರಾ ವಿಶ್ವದಲ್ಲೆಲ್ಲ ತುಂಬಾ ನಿಂತಿಹ ನಿನ್ನ _ನಾರು ನಂಬರು ಎಂತೆಂಬಕಾರಣ ಜಗಕೆ ತೋರರೆಲ್ಲಾ ಗುಣಸಾರ ಸಂಗ್ರಹಿಸಿ ನೀ ಧೀರ ಮಾನವನಾಗಿ2 ಜಗದೊಳಂದದ್ಭುತ ಶಕ್ತಿ ಇರುವುದೆಂ _ದುಗಮಿಕೆ ಜನದೊಳಾಸಕ್ತಿಜಗದೊಳು ಗದುಗಿನ ವೀರನಾರಾಯಣಬಗೆ ಬಗೆ ಮಹಿಮೆಯ ಸುಗುಣ ಮಾನವನಾಗಿ 3
--------------
ವೀರನಾರಾಯಣ
ದೇವ ನೀ ಗತಿಯಯ್ಯ ಶ್ರೀಮಾಧವನೀ ಗತಿಯಯ್ಯಪ.ಎಂಬತ್ತುನಾಲ್ಕು ಲಕ್ಷ ಯೋನಿಯ ತಿರುಗಿಅಂಬರಪೈಶಾಚಿಯ ತೆರ ಮರುಗಿಅಂಬುಧಿಶಾಯಿ ನಿನ್ನೆಡೆಯರುಹಿ ರಿವಿ? ಲ್ಲಇಂಬುಗಾಣಿಸಿನ್ನಾದರೆಸಿರಿನಲ್ಲ1ಏನೋ ಸುಕೃತದಿಂದ ಮಾನವನಾಗಿನಾನಾ ವಿಷಯವುಂಡು ಅಂಧಕನಾಗಿಹೀನ ನರ್ಕಕೆ ಸಂಚಕಾರವ ಕೊಟ್ಟೆಜ್ಞಾನವಿಹೀನ ನರಪಶುಗೇನುಬಟ್ಟೆ2ಬುದ್ಧಿ ಇಲ್ಲದವನಾದರೆ ತನ್ನವನತಿದ್ದಬೇಕಲ್ಲದೆ ಬಿಡುವರೆ ಜಾಣಮದ್ದುಂಡಿಲಿಯಪರಿಬಳಲುವೆನೆನ್ನಉದ್ಧರಿಸು ಪ್ರಸನ್ನವೆಂಕಟ ರನ್ನ 3
--------------
ಪ್ರಸನ್ನವೆಂಕಟದಾಸರು
ರಂಗನಹುದೋ ನೀನು ಕನಕಾಚಲರಂಗನಹುದೋ ನೀನುತುಂಗಮಹಿಮ ಕೃ-ಪಾಂಗ ಚೆಲುವ ಮುದ್ದು ರಂಗಲಕ್ಷ್ಮಿಯ ರಮ-ಣಾಂಗ ಜಪಿತಮೂರ್ತಿಪದುರುಳರಕ್ಕಸನು ವೇದ ಕದ್ದೊಯ್ಯೆಮೀನಾಗಿ ತಂದೆಯದನ ಕೂರ್ಮನಾಗಿಗಿರಿಯ ಪೊತ್ತು ಎರೆದೆ ಸುರರಿಗೆ ಅಮೃತವವರಾಹನಾಗಿ ಧರೆಯ ಕದ್ದವನಶಿರವ ಖಂಡಿಸಿ ನೃಕೇಸರಿಯಾಗಿಯೆಕಂಬವನೊಡೆದು ನಿಶಾಚರನ ಸಂಹ-ರಿಸಿದೆ ರಣಧೀರಮಾಧವ1ಪುಟ್ಟ ಮಾನವನಾಗಿ ಬಲಿಯ ದಾನವ ಬೇಡಿಅಷ್ಟು ಬ್ರಹ್ಮಾಂಡವನೆಲ್ಲಈರಡಿಮಾಡಿತುಟ್ಟ ತುದಿಗೆ ಅವನ ಶಿರದ ಮೇ-ಲಿಟ್ಟು ದ್ವಾರವ ಕಾಯ್ದನಾ ಭೂಸುರರಿಗೆಕೊಟ್ಟ ಮೇದಿನಿಯ ದಾನವ ಭಳಿರೆ ಜಗಜಟ್ಟಿ ಪರಶುರಾಮ ಕ್ಷತ್ರಿಯ ಛೇದನ2ದಶರಥನ ಸುತನಾಗಿ ವಸುಧಜೆಯ ಕಳೆದುಅಸಮ ಕಪಿವೀರರ ನೆರಪಿ ಸೇತುವೆಕಟ್ಟಿಅಸದಳ ರಾಕ್ಷಸರ ಇಂದ್ರಜಿತುದಶಶಿರಅತಿಕಾಯರ ಕುಂಭಕರ್ಣಅಸಹಾಯ ರಣಶೂರರ ಛೇದಿಸಿ ಸೀತಾಶಶಿಮುಖಿಯ ಕರೆತಂದ ರಘುರಾಮಕಂಠೀರವ3ದೇವಕೀಸುತನಾಗಿ ಬಾಣನ ಭಂಗಿಸಿಮಾವ ಕಂಸನ ಶಿಶುಪಾಲ ನರಕಾಸುರ ಕೌ-ರವ ವೀರರನು ಕೊಂದು ಪಾಂಡುರಾಜನ ಪುತ್ರ-ರನು ಪಾಲಿಸಿ ಪೃಥವಿ ಪಾವನರಾದರನು ರಕ್ಷಿಸಿ ಬೌ-ದ್ಧಾವತಾರ ತಾನಾಗಿ ವ್ರತ ಭಂಗಿಸಿದೆ ನೀನು4ತೇಜಿಯನೇರಿ ನೇಣನೆ ಹಿಡಿದು ಪಾಪದಬೀಜವನುರುಪಿ ಪುಣ್ಯದ ಬಿತ್ತನುರುಹಿಯೆಸೋಜಿಗಸಹಸ್ರರ ಕನಕಗಿರಿಮೂಜಗದೊಳು ವಿಸ್ತಾರವಾಗಿಹಘನತೇಜೋ ಮೂರುತಿ ಗಂಭೀರ ಸಿದ್ಧ ಪರ್ವತರಾಜ ಸದ್ಗುರು ಚಿದಾನಂದಾವಧೂತ5
--------------
ಚಿದಾನಂದ ಅವಧೂತರು
ಶಿಷ್ಯನು ಶಿಷ್ಯನು ಎಂದು ತುಂಬಿಯಿಹುದುಜಗ ಶಿಷ್ಯನದ್ಯಾತರಶಿಷ್ಯಶಿಷ್ಯನಾದರೆ ತನುಮನವನರ್ಪಿಸಿ ದೃಢದಲಿಶಿಷ್ಯನಾದರೆ ಸಚ್ಛಿಷ್ಯಪಹೇಳಿದಲ್ಲಿಗೆ ಹೋಗಿ ಹೇಳಿದುದನೆ ಮಾಡಿ ಬಾಲನಂತಿಹನವಶಿಷ್ಯಕಾಲತ್ರಯಗಳಲಿಗುರುಪೂಜೆವಂದನೆ ತಪ್ಪದೆ ನಡೆಸುವವಶಿಷ್ಯಬಾಲೆಸುತರು ಬಂದರಾದರೆ ತನ್ನಂತೆ ಬಾಳ್ವೆ ಮಾಡೆಂಬವಶಿಷ್ಯ1ಮಾನವನಾಗಿ ಆರೇನೆಂದರೆ ಅಭಿಮಾನ ಹಿಡಿಯದವಶಿಷ್ಯಹೀನ ಕೆಲಸಗಳ ಮಾಣಿಸುತೆಲ್ಲವ ತಾನೆ ದೂರನಹಶಿಷ್ಯಏನಿದು ನಿನ್ನ ಹಣೆಯ ಬರಹವೆಂದೆನೆ ಯೋಚನೆಗೊಳಗಾಗದವಶಿಷ್ಯ2ದೇಹಾಭಿಮಾನವನು ಗುರುಪಾದವಕೊಪ್ಪಿಸಿ ಶಠತೆಯ ಕಳೆದವಶಿಷ್ಯಕರುಣಾಳು ಸದ್ಗುರು ತತ್ವ ಜ್ಞಾನವ ಹೇಳೆ ಆಲಿಸಿ ನಲಿವವಶಿಷ್ಯಅರಿತು ಮನಕೆ ಜ್ಞಾನವ ತಂದು ಅದರಂತೆ ನಡೆವವಶಿಷ್ಯಗುರುಚಿದಾನಂದ ಸದ್ಗುರು ವಾಕ್ಯದಿ ಗುರುವಾದವನವಶಿಷ್ಯ3
--------------
ಚಿದಾನಂದ ಅವಧೂತರು
ಸಲಹಯ್ಯಸ್ಮರಬೊಮ್ಮ್ಮರಯ್ಯವ್ಯಾಳಶಯ್ಯ ಪಿಡಿಕೈಯನೀಲಮೈಯ ನೀರಜಪ್ರಿಯ ಪ.ಭವಾರಣ್ಯದಿ ಬಲುತೊಳಲಿ ನಾಮಾನವನಾಗಿ ಮದಾಂಧಕನಾಗಿಹೇವಗೆಟ್ಟೆನಯ್ಯ ಹೇಯಬಿಟ್ಟೆನಯ್ಯತವ ಪಾದವ ತೋರೊಮಾಧವ1ಎನ್ನ ಭಕ್ತಿ ಗಹನ ವಿರಕ್ತಿ ನಿಧಾನ ತತ್ವನಿರ್ಣಯದ ಸತ್ವಹೀನ ಹೃದಯ ನಾ ಹಿತವನರಿಯೆ ನಾನೀನೆ ಕರುಣಿಸೊ ನಿಜರೊಳಿರಿಸೊ 2ನೆನೆವರ ನೆನಪಿನ ಚದುರದೀನತಮದಿನಕರರಾಮ ಶುಭಾನನ ಶರಣೆಂಬೆ ನಾ ಪ್ರಸನ್ನವೆಂಕಟೇಶ ಶ್ರೀ ಶ್ರೀನಿವಾಸ 3
--------------
ಪ್ರಸನ್ನವೆಂಕಟದಾಸರು