ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲಿದೆ ಯಾತಕಮ್ಮಾ ಲಕುಮಿವಾಸುದೇವಗೆ ಪ ಶುದ್ಧ ನೀಲವರ್ಣದ ಮೈಯಕಪ್ಪಿನವನಿಗೆ ಹ್ಯಾಗೆ ಅ.ಪ. ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ ಚಟ್ಟಿ ಸಹಿತ ಹಾಲು ಕುಡಿದ- ಅಲ್ಲಿದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ 1 ಗೊಲ್ಲರ ಮನೆಗಳ ಪೊಕ್ಕು- ಅಲ್ಲಿಗುಲ್ಲು ಮಾಡದೆ ಮೊಸರೆಲ್ಲ ಸವಿದಮೆಲ್ಲನೆ ಸವಿಮಾತನಾಡಿ-ಅಲ್ಲಿಎಲ್ಲ ಸಖಿಯರ ಅಭಿಮಾನಗೇಡಿಗೆ 2 ಮಾವನ ಮರ್ದಿಸಿದವಗೆ -ಅಲ್ಲಿಸೋಳ ಸಾಸಿರ ಗೋಪೇಯರ ಮದುವೆ ಆದವಗೆಹಾವಿನ ಮ್ಯಾಲೊರಗಿದವಗೆಕಾವೇರಿ ತೀರದ ರಂಗವಿಠಲಗೆ 3
--------------
ಶ್ರೀಪಾದರಾಜರು
ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಪ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ 1 ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ2 ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ3
--------------
ವಿಜಯದಾಸ
ಪತಿಮಂದಿರದಲಿ ನೀ ಸುಖವಾಗಿ ಬಾಳು ನಿನ್ನ ಪತಿಗಹಿತಕರ ಸಂಗ ತ್ಯಜಿಸಮ್ಮ ಮಗಳೆ ಪ ಉದಯ ಪೂರ್ವಕೆ ಎದ್ದು ಹರಿಯ ಸ್ಮರಣೆಯ ಮಾಡು ಮುದದಿ ಗುರುಹಿರಿಯರಿಗೆ ವಂದನೆಯ ಮಾಡು ಮದನನಯ್ಯನ ಭಜಕರನು ಕಂಡು ನಲಿದಾಡು ಪದುಮನಾಭಗೆ ಪಟ್ಟದರಸಿಯಾಗಮ್ಮ1 ರತ್ನಾಕರನು ತಂದೆ ಎನುತ ಗರ್ವಿಸಬೇಡ ಮತ್ತೆನಗೆ ಸರಿಯಾರು ಎಂದೆನಲು ಬೇಡ ಚಿತ್ತಜನಯ್ಯನ ಮನವರಿತು ನಡೆಯಮ್ಮ ಹೊತ್ತು ಹೊತ್ತಿಗೆ ಪತಿಯ ಸೇವೆ ನಿರತಳಾಗಿ2 ಬಿಟ್ಟಕಂಗಳು ಮುಚ್ಚದವನು ಎಂದೆನಬೇಡ ಬೆಟ್ಟ ಬೆನ್ನಿಲಿ ಪೊತ್ತನೆನಲು ಬೇಡ ಗಟ್ಟಿ ನೆಲವನು ಕೆದರಿ ಅಲಸಿದನೆನಬೇಡ ಹೊಟ್ಟೆಯ ಕರುಳನು ಬಗೆದವ ನೆನೆಬೇಡ 3 ಕಡುಲೋಭಿದಾನ ಬೇಡಿದನು ಎಂದೆನಬೇಡ ಪೊಡವಿಪಾಲಕರ ಕೆಡಹಿದನು ಎನಬೇಡ ಮಡದಿಯ ತಂದ ಕಪಿವಡೆಯನು ಎನಬೇಡ ತುಡುಗತನದಿ ಪಾಲ್ಬೆಣ್ಣೆ ಚೋರನೆಂದೆನಬೇಡ 4 ಉಡಿಗೆ ಉಡದ ಮಾನಗೇಡಿ ಇವನೆನಬೇಡ ತುಡಗತನದಿ ರಾಹುತನಾದನೆನಬೇಡ ಕಡಲಶಯನ ಕಮಲನಾಭ ವಿಠ್ಠಲನ ಗುಣ ಒಡೆದು ಪೇಳದೆ ಗುಟ್ಟಾಗಡಗಿಸಿ ನಡೆಯಮ್ಮ 5
--------------
ನಿಡಗುರುಕಿ ಜೀವೂಬಾಯಿ
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ