ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ. ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ 1 ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ 2 ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ3
--------------
ಶ್ರೀಪಾದರಾಜರು
ಗಾನ ಹರಿನಾಮ ಕೀರ್ತನೆಯ ಗಾನ ಪರಮಾದರವಿದ್ದರೆ ಗಾನ ಪ ಗಾನದಿಂದ ಹರಿಯುವ ಬಾಷ್ಪಾಂಜಲಿ ಭಾನುವಂಶ ಶೇಖರಿನಿಗುಪಾಯನ ಅ.ಪ ಗಾನರಸದ ಮಜ್ಜನದಿಂದಲಿ ಮನ ಕಾಣಲು ಶಮದಮ ಸುಖಗಳನು ಕೂರ್ಮ ಮೊದಲಾದ ರಮೇಶನ ನಾನಾ ಲೀಲೆಗಳನ್ನು ಪೊಗಳುವುದೇ 1 ನಾರಿಯ ಸೌಂದರ್ಯಕೆ ಮಾಂಗಲ್ಯವು ಕಾರಣವಾಗುವ ತೆರದಲ್ಲಿ ಹೇರಳ ಗಾಂಭೀರ್ಯವ ರಸಪುಂಜಕೆ ಬೀರುವ ಶೌರಿಯ ಮಧುರನಾಮಗಳೆ2 ಆದಿವ್ಯಾಧಿ ಜನನಾದಿ ವಿರೋಧದ ಬಾಧೆಯ ಕಳೆಯುವ ಔಷಧಿಯು ಮಾಧವ ಮಧುಸೂಧನ ಶ್ರೀಧರಪರ ಬೋಧ ಪ್ರಸನ್ನನ ಮಧುರ ನಾಮಗಳೇ 3
--------------
ವಿದ್ಯಾಪ್ರಸನ್ನತೀರ್ಥರು
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ ಇನ್ನು ಪಾಲಿಸು ದೇವನೆ ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ ಇನ್ನು ಕರುಣಿಸೊ ಕೇಶವಾ ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ ನಿನ್ನ ಮೊರೆಯಿಡುವೆ ಹರಿಯೇ ಚನ್ನ ಶ್ರೀಗೋಪಾಲ ಗೋವಿಂದ ಕೇಶವ ನಿನ್ನ ನಾಮನಿರಂತರವು ಪಾ- ವನ್ನ ಮಾಡಲಿ ಎನ್ನ ಜಿಹ್ವೆಯಾ 1 ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ ಭೇದವಿಲ್ಲದೆ ಕರುಣಿಸೊ ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ- ಮಾದರವ ನಿತ್ತು ಸಲಹೊ ಮೋದ ಪಡುವ ಭಾಗ್ಯ ಮಾಧವನೆ ದಯಪಾಲಿಸೋ ಮಾಧವ ಜನಾರ್ದನ ಕ್ರೋಧಿ ಸಂವತ್ಸರವು ಭಕುತರ ಕ್ರೋಧಗಳ ಕಳೆಯುತ್ತ ಸಲಹಲಿ2 ಶರಣೆಂದು ಬೇಡುವೆ ಪರಿಪರಿ ಅಘಗಳ ಪರಿಹರಿಸೆಂದು ನಾ ಸ್ಮರಿಸಿಬೇಡುವೆನು ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ ಹರುಷದಿ ನೆಲಸೆನ್ನ ಹೃದಯದಲಿ ದೇವ ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ ಕಡುಭಾಗವತರ ಸಂಗವನೆ ನೀಡೈ ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ ತಡೆಯದಲೆ ಪಾಲಿಸುತ ಪೊರೆ ಶ್ರೀ ಕಮಲನಾಭ ವಿಠ್ಠಲನೆ ದಯದಲಿ 3
--------------
ನಿಡಗುರುಕಿ ಜೀವೂಬಾಯಿ