ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಭೂಮಿದುರ್ಗ ಮತ್ತೇಭೇಂದ್ರಿಗಮನೆ ಸ್ವ ರ್ಣಾಭ ಗಾತ್ರೆ ಸುಚರಿತ್ರೆ | ಸುಚರಿತ್ರೆ ಶ್ರೀ ಪದ್ಮ ನಾಭನ್ನ ಜಾಯೆ ವರವೀಯೆ 1 232 ದರಹಸಿತವದನೆ ಸುಂದರಿ ಕಮಲ ಸದನೆ ನಿ ವಿಧಿ ವಿಧಿ ಮಾತೆ ಲೋಕಸುಂ ದರಿಯೆ ನೀ ನೋಡೆ ದಯಮಾಡೆ 2 233 ತ್ರಿಗುಣಾಭಿಮಾನಿ ಎನ್ನವ ಗುಣದ ರಾಶಿಗಳ ವರವೀಯೆ ನಿನ್ನ ಪಾದ ಯುಗಳಕ್ಕೆ ನಮಿಪೆ ಜಗದಂಬೆ 3 234 ಪ್ರಳಯ ಕಾಲದಲಿ ಪತಿ ಮಲಗ ಬೇಕೆನುತ ವಟ ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ ಗಳ ದೇವಿ ನಮಗೆ ದಯವಾಗೆ 4 235 ತಂತು ಪಟದಂತೆ ಜಗದಂತರ್ಬಹಿರದಲ್ಲಿ ಕಾಂತಮೊಡಗೂಡಿ ನೆಲೆಸಿಪ್ಪೆ | ನೆಲೆಸಿಪ್ಪೆ ನೀನೆ ನ್ನಂತರಂಗದಲಿ ನೆಲೆಗೊಳ್ಳೆ 5 236 ಈಶಕೋಟಿ ಪ್ರವಿಷ್ಟೆ ಈಶ ಭಿನ್ನಳೆ ಸರ್ವ ದೋಷವರ್ಜಿತಳೆ ವರದೇಶ | ವರದೇಶ ಪತಿದೊಡನೆ ವಾಸವಾಗೆನ್ನ ಮನದಲ್ಲಿ 6 237 ಆನಂದಮಯಿ ಹರಿಗೆ ನಾನಾಭರಣವಾದೆ ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ ಪಾಣಿ ನೀನೆಮಗೆ ದಯವಾಗೆ 7 238ಮಹದಾದಿ ತತ್ವಗಳ ವಹಿಸಿ ನಿನ್ನುದರದೊಳು ದ್ರುಹಿಣಾಂಡ ಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ ಮಹಮಹಿಮಳೆ ಎಮಗೆ ದಯವಾಗೆ 8 238 ಆವ ಬ್ರಹ್ಮಾದಿ ದೇವರೆಲ್ಲರು ತವ ಕೃ ಪಾವ ಲೋಕನದಿ ಕೃತಕೃತ್ಯ | ಕೃತಕೃತ್ಯರಾಗಿ ಹರಿ ದೇವಿ ನಾ ಬಯಸುವುದು ಅರಿದಲ್ಲ 9 240 ಪಕ್ಷೀಂದ್ರವಾಹನನ ವಕ್ಷಸ್ಥಳವಾಗಿ ಅಕ್ಷಯಜ್ಞಾನಿ ಸುಖಪೂರ್ಣೆ | ಸುಖಪೂರ್ಣೆ ಕಮಲದ ಳಾಕ್ಷಿ ನೋಡೆನ್ನ ದಯದಿಂದ 10 241 ಹಲವು ಮಾತ್ಯಾಕೆ ಶ್ರೀಲಲನೆ ಶ್ರೀಜಗನ್ನಾಥ ವಿ ಮನದಲ್ಲಿ ವಾಸವಾಗೆಲ್ಲ ಕಾಲದಲಿ ಅವಿಯೋಗಿ 11
--------------
ಜಗನ್ನಾಥದಾಸರು
ಒಬ್ಬರ ಮಾತ್ಯಾಕೆ ನಾಲಗೆ ನೀನು ಉಬ್ಬದೆ ಸುಮ್ಮನಿರು ನಾಲಗೆ ಪ ಮಬ್ಬಿನಿಂದ ನೀ ಒಬ್ಬರ ಮಾತಾಡಿ ಕೊಬ್ಬನಿಂ ಕೆಡಬೇಡ ನಾಲಗೆ ಅ.ಪ ಮಂದಿ ಮಾತಾಡಲು ನಾಲಗೆ ನಿನಗೆ ಬಂದ ಭಾಗ್ಯವೇನು ನಾಲಗೆ ಒಂದು ಅರಿಯದೆ ಮನಬಂದಂತೆ ಮಾತಾಡಿ ಅಂದಗೆಡಲಿ ಬ್ಯಾಡ ನಾಲಗೆ 1 ನಿಂದೆಯಾಡಬೇಡ ನಾಲಗೆ ನೀನು ಕುಂದುವಡೆಯ ಬೇಡ ನಾಲಗೆ ಒಂದಿನ್ಹೋಗ್ವುದು ನಿನಗೆಂದಿಗೆ ತಪ್ಪದು ಮುಂದಿನ ಸುಖ ನೋಡು ನಾಲಗೆ 2 ಸತ್ಯ ತಪ್ಪಬೇಡ ನಾಲಗೆ ನೀನ ಸತ್ಯ ನುಡಿಯ ಬೇಡ ನಾಲಗೆ ಮೃತ್ಯುಗೀಡಾಗ ಬ್ಯಾಡ ನಾಲಗೆ 3 ಸುಳ್ಳನಾಡಬೇಡ ನಾಲಗೆ ಸದಾ ಒಳ್ಳೆ ಮಾತಾಡು ಕಂಡ್ಯ ನಾಲಗೆ ಸುಳ್ಳು ಈ ಜಗಕೆ ಮಳ್ಳನಾಗಿ ಯಮ ಕೊಳ್ಳಕೆ ಬೀಳ ಬ್ಯಾಡ ನಾಲಗೆ 4 ಹಾಳುಗೋಜ್ಯಾಕೆ ಕಂಡ್ಯ ನಾಲಗೆ ಕಾಲ ಹೇಳಿ ಬರದು ನಿನಗೆ ನಾಲಗೆ ಶೀಲಮನಸಿನಿಂದ ಪಾಲ ಶ್ರೀರಾಮಪಾದ ಕಾಲತ್ರಂiÀiದಿ ನೆನೆ ನಾಲಗೆ 5
--------------
ರಾಮದಾಸರು
ನಾರಾಯಣಯೆಂಬೊ ನಾಮವನು ನೆನೆದರೆ ಹಾರಿ ಹೋಹುದು ಜನ್ಮಜನ್ಮದ ಪಾಪಗಳು ಮುಕ್ತಿದೋರಿಸು ಮುರಾರಿ ಪ. ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ ಸುಕುಮಾರನೆನಿಸಿಕೊಂಡು ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ ದುಷ್ಕøತ್ಯದ ಫಲದಿಂದ ಅಂತ್ಯಜಳನು ಕಂಡು ಕಾ- ಅರಿತರಿಯದೆ 1 ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ ಹುಲ್ಲೆನೋಟದ ಭಾವಕಿ ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ ಸೆರಗ ಪಿಡಿದ 2 ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು ಹಿಂಡು ಬಲು ಘೋರ ಎನಿಸಿಪ್ಪುದು ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ ಛಲವೊಂದೆ ಎನಗೆ ಎಂದ3 ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ ನಿನಗೊಲಿವೆನೆಂ[ದಳು] ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ ಮೊತ್ತಕೊಳಗಾಗದಿರೊ 4 ಆಗದಾಗದು ಎನ್ನ ಕುಲಬಂಧು ಬಳಗವÀನು ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು 5 ಹಾಲಂತ ಕುಲವ ನೀರೊಳಗದ್ದಿಪೂರ್ವದ ಶೀಲವನಳಿದು ಸತಿಯೊಡಗೂಡಿ ತಾನು ಚಾಂ- ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ ಆಲಂಬನದಲಿ ಅಜಾಮಿಳನು ಇರುತಿರಲಾಗ ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು ಯಮನಾಳುಗಳು ಇಳಿದರಾಗ 6 ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ] ಘುಡು‌ಘುಡಿಸುತಲಿ ನಿಂತರು ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು ಲಾಲಿಸಿದ ಸ್ವಾಮಿ 7 ಮರಣಕಾಲದಿ ಶ್ರೀಹರಿಯೆಂಬ ನಾಮವನು ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ ಉರದೊಳೊಪ್ಪುವ ತುಳಸಿದಂಡೆ ಪೀತಾಂ- ಬರವು ಗದೆ ಶಂಖ ಚಕ್ರ ದ್ವಾದಶನಾಮವನು ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು 8 ಪುಂಡರೀಕಾಕ್ಷನ ಭೃತ್ಯನ ಭಾಧಿಸುವ ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ- ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ ಉದ್ದಂಡರಹುದೆಂದರಾಗ 9 ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ 10 ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು ಬಿದ್ದ ಕಾಯವನು ಭಾದಿಸಿದವರ್ಯಾರು ಉ- ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ ಅದ್ದಿದೆ ನೂರೊಂದು ಕುಲವ ನರಕದೊಳೆಂದು ತಾನತಿ ಮರುಗುತ 11 ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧÀ ಜನರು ಮದನ ಬಾಧೆಗೆ ಸಿಲುಕಿ ದುಷ್ಟ ತಾಪವ ಪೊತ್ತೆ ಜನನಿಂದಕನಾದೆ ಅಪ್ರತಿಮ ಅನಂತಪಾತಕಿ ಭುವನದಲಿ ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ ವಿಧಿ ಎಂದನು 12 ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು ದುಷ್ಟಯವÀುದೂತರನು ಕಂಡು ಚಂಡಾಲತಿಗೆ ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ ಗಟ್ಯಾಗಿ ಧ್ಯಾನಿಸಿದನು 13 ತನ್ನ ನಾಮವ ನೆನೆವ ಭಕ್ತರಾದವರೆಲ್ಲ ಧನ್ಯರಿವರಹುದೆಂದು ಜಗವರಿಯಬೇಕೆಂದು ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು ಎನ್ನಯ್ಯ ಏಳೆಂದು ಕೈಲಾಗವÀನು ಕೊಡಲು ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ . ಸನ್ನಿಧಿಗೆ ನಡೆದ 14 ಜಲಜನಾಭನ ದಿವ್ಯನಾಮವನು ನೆನೆದರೆ ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ ಸಲುವರಲ್ಲೆಂದ ಯಮನು ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು 15
--------------
ಹೆಳವನಕಟ್ಟೆ ಗಿರಿಯಮ್ಮ
ಇದೆಕೊದಧಿಮಥಿಸಿ ಹೊಸ ಬೆಣ್ಣೆ ಕೊಡುವೆನೊಪದುಮನಾಭನೆ ಗೊಲ್ಲ ಗೋರಸಕೆ ಗೋಳಿಡಬ್ಯಾಡೊ ಪ.ಮಲತ ಹಾಲು ಹುಳಿಮೊಸರು ತಂಗಳ ಬೆಣ್ಣೆನಳಿನಾಕ್ಷ ನಿನಗೇನು ರುಚಿಯೊ ಕಂದಕಳವಿನ ಮಾತ್ಯಾಕೆ ಹಸುಳೆ ಗೋವಳೆಯರಗೆಳತನವ್ಯಾತಕೊ ನಿನಗೆ ರಂಗಮ್ಮ 1ಮನೆ ಮನೆ ತಿರುಗಲು ತಿರುಕರ ಮಗನೇನೊಮನೆಯಲೇನು ಗೋರಸ ಕೊರತ್ಯಾಗಿದೈಅನುದಿನವಿಗಡೆÉೀರು ದೂರುತಲೈದಾರೆದಣಿದೆನಾರೋಪಣೆಯಕೇಳಿಕೃಷ್ಣಮ್ಮ2ಎನ್ನ ಮುದ್ದಿನಮೂರ್ತಿಎನ್ನ ಭಾಗ್ಯದ ನಿಧಿಯೆಎನ್ನ ಚಿತ್ತದ ಚಿಂತಾಮಣಿಯೆಚಿನ್ನರರಸನಾದ ಪ್ರಸನ್ವೆಂಕಟ ಕೃಷ್ಣನನ್ನಾಣೆ ಕಣ್ಣ ಮುಂದಿರೊ ನಮ್ಮಮ್ಮ 3
--------------
ಪ್ರಸನ್ನವೆಂಕಟದಾಸರು
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು