ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನ್ನ ದೂರುವರೆ ಪೇಳಮ್ಮಯ್ಯ ಪೋಕಬುದ್ಧಿಯ ಗೊಲ್ಲತಿ ಪೋಕ ಲೋಕಲೋಕದಿ ನೋಡೆ ನಾಕಾಣೆನೆಲ್ಲೆಲ್ಲೂ ಪ ಅಮ್ಮಯ್ಯ ನೀನಿಡುವೊ ಪಾಲ್ಬೆಣ್ಣೆಯ ಕಣ್ಣಿಂದ ನೋಡುವೆನೆ ಅಣ್ಣ ರಾಮರ ಕೇಳೆ ಎನ್ನಾಣೆ ಹುಸಿಯಲ್ಲ ಎನ್ನ ಪಣೆಯ ಲಿಖಿತ ಮುನ್ನ ಮಾಡಲಿ ಏನೆ 1 ದುಷ್ಟಹೆಂಗಳೇರಾಡುವೊ ಮಾತೊಂದು ನೀ ಗೊತ್ತು ಹಿಡಿಯ ಬ್ಯಾಡಮ್ಮ ಚಟ್ಟಿಗೆ ಬೆಣ್ಣೆಯ ಮೆಲುವೋದುಂಟಾದರೆ ಪುಟ್ಟಕೂಸಿನ ಹೊಟ್ಟೆಗೆ ದೃಷ್ಟಿತಾಗದು ಏನೆ 2 ಚೆಂಡನಾಡುವಾಗ ಇವರು ಎನ್ನ ಮುಂಗೈಯ ಪಿಡಿದುಕೊಂಡು ಗಂಡರಂಜಿಕೆಯಿಲ್ಲ ಗಾಡಿಕಾರ್ತಿಯರೆಲ್ಲ ಬಂಡು ಮಾತುಗಳಾಡಿ ಬಂದು ದೂರಿದರೇನೆ 3 ಸಣ್ಣ ಮಕ್ಕಳೊಡನೆ ಅಂಗಳದಿ ನಾ- ಚಿಣ್ಣಿಯನಾಡುವಾಗ ಬೆಣ್ಣೆಕೊಡುತೇವೆಂದು ಬಣ್ಣ ಬಣ್ಣದಿ ಎನ್ನ ಕಣ್ಣು ಸನ್ನೆಯ ಮಾಡಿ ಕರೆದರ್ಯಾತಕೆ ಕೇಳೆ 4 ಗೋಲಿ ಗುಂಡುಗಳಾಡುತ ನಿಂತಿರಲೆನ್ನ ಲೀಲೆಯಿಂದಲಿ ನೋಡುತ ಭೀಮೇಶಕೃಷ್ಣ ಬಾರೆಂದೆನ್ನ ಬಿಗಿದಪ್ಪಿ ಬಾಯ ತಂಬುಲಗಳ ಬೇಡಿ ಮಾತಾಡೋರು 5
--------------
ಹರಪನಹಳ್ಳಿಭೀಮವ್ವ
ಇನ್ನೂ ನೆಲೆಯ ನೋಡುವರೆ | ಮುನ್ನ ಮಾಡಿದ್ದಾಡುವರೇ ||ಉನ್ನತ ಮಹಿಮ ನಿನ್ನ ನಂಬಿದವರನು ಕಾಡುವರೇ ಪ ಕರವ ನೀಡುತ ನೋಡುತಲಿ 1 ಘಾಸಿ ಆದೆ ಕಾಸಿಗಾಗಿ |ದಾಸ ಪಾಲಕ ಲಕ್ಷ್ಮೀಶ ತಪ್ಪದಿರೋ ಭಾಷೆಗಾಗಿ 2 ಮನ್ನಿಸೆನ್ನ ಮಾತು ಹರಿಯೇ | ಇನ್ನು ಮಾತೊಂದು ನಾನರಿಯೆ | ಬೆನ್ನು ಬಿದ್ದವರ ಕಾಯೋ ರುಕ್ಮೇಶ ನಾರಾಯಣ ದೊರೆಯೇ 3
--------------
ರುಕ್ಮಾಂಗದರು
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು