ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ