ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪ ಪರಮ ಭಾಗವತರ ಪದಧೂಳಿ ಧರಿಸುತಲಿಅ.ಪ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಬೆರೆಯಬೇಡ ಪರರ ಸತಿಯ ಸ್ವಪ್ನದಲೂ 1 ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ 2 ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ 3 ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ 4 ಮಂದಮತಿಗಳ ಕೂಡೆ ಮಾತಾಡಲಿ ಬೇಡ ನಿಂದಕರ ಕಣ್ಣೆತ್ತಿ ನೋಡಬೇಡ ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ ದ್ವಂದ್ವದಲಿ ಮಸ್ತಕವ ನೀಡದಿರಬೇಡ5
--------------
ವಿಜಯದಾಸ
ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ ||ಪ||ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||ಅ|| ||ಪ|| ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ || ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ|| ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ ||
--------------
ವಿಜಯದಾಸ
ಶಂಕರ ಗಂಡನ ಹಾಡು ಸರಸ್ವತಿಗಭಿವಂದಿಸುವೆ ಒಡೆಯನು ಎನ್ನ ಮನದೊಡೆಯ 1 ಸಂಭ್ರಮ[ದಾ] ಕೇಳಿ ಸಜ್ಜನರು 2 ವಿಶಾಲ ವಿಲಾಸ ಪಟ್ಟಣದಿ ಖಚಿತ ಮಂದಿರದಿ 3 ಮಂದಮಾರುತ ತಂಪೆÉಸೆಯೆ ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು4 ಮಯೂರ ಪಕ್ಷಿಗಳು ನಳಿನ ನಾಭನ ಓಲಗವು 5 ನಿರ್ಭಯದಲಿನಲ್ಕಾವತಿಯು ಪಾಲಿಸುತ್ತ 6 ಮರಿಹಾವುಗಳ ನೆರೆಹುವಳು ಗೊಂಬೆಯಾಟವನೆ ಆಡುವಳು 7 ಕೂಡಿದ್ದ ಗೆಳತಿಯರ ಒಡನೆ ನೋಡಿದ ನವಯೌವನೆಯನು 8 ಕುಚವು ತೋರಿದವು ಚಿತ್ತದೊಳಗೆ ಚಿಂತಿಸುತ್ತಿದ್ದ 9 ಚೆನ್ನಿಗನು ಮನ್ಮಥನು ಉದಯಕ್ಕೆ ಕರೆತನ್ನಿರೆಂದ 10 ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ ನಿಂದು ಕೈ ಮುಗಿದರು ಹೋ ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು 11 ಮಾತಾಡಿ ನಗುತ ಭೂ ಕೇಳಿದ ಮನ್ಮಥನ 12 ರಾಜ್ಯವು ಕ್ಷೇಮವೆನ್ನಲು ಬ್ರಹ್ಮಾನಂದದಲಿದ್ದ ಶಂಕರಗಂಡನು 13 ವಿವಾಹ ಮಾಡಲಿಚ್ಛಿಸುವೆ ಚಂದ್ರಮುಖಿಯು 14 ಸಂಭ್ರಮದಿಂದ ಕುಳಿತರು ತಂದಿಡುವರು ಮನ್ಮಥಗೆ 15 ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು ಮಂಗಳ ಮೃದು ವಾಕ್ಯವನ್ನು ಪ್ರ ತಂಗಿಯನೆನಗೀಹುದೆಂದ 16 ಮಲ್ಲಿಗಿಸರ ಕಬ್ಬು ಬಿಲ್ಲು ಹಿರಿಯರು ಹೇಳುವರು 17 ಒಬ್ಬಳೇ ರತಿ ನಮ್ಮ ತಂಗಿ ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ 18 ಕಡುಮೋಹದಿಂದ ಸಾಕಿದೆನು ಕೊಡಲಾರೆ ತಂಗಿಯನೆಂದ 19 ಅವಳಿಗೆ ಸ್ವತಂತ್ರವಿಲ್ಲೇನು ನುಡಿದ ದೈನ್ಯದಲಿ 20 ಭಾಗ್ಯದಿಂದಲಿ ನೋಡಿದರು ಮದನ ನೇಮವನೆ ಮಾಡಿದರು 21 ಪ್ರತಿಬಿಂಬ[ದಂದ]ದಲಿ ಎಣಿಕೆಯಿಲ್ಲದ ಬಂಧು ಜನರ 22 ಎಲ್ಲರು ನೆರೆದು ಸಂಭ್ರಮದಿ ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು 23 ಬಟ್ಟಲು ಗಿಂಡಿಗಳನ್ನು ಬಳುವಳಿ ತಂಗಿಗೆ ಇತ್ತ 24 ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ ವಿಲಾಸಪಟ್ಟಣಕೆ ಕಳಿಸಿದ 25 ದಿನ ಬಾಳುತಿರಲು ತಾನೇ ಯೋಚಿಸಿದ 26 ಬಿಗಿದ ನಾಡಗಂಬಳಿಯ ನಗುವಂತೆ ಮಾಡಿ ರೂಪವನು 27 ಕುಡಗೋಲು ಕÀವಣೆಯ ಪಿಡಿದು ಮಾಡುವೆನೆನುತ 28 ರೂಢಿಯೊಳಗೆ ಅತಿಚೆಲುವ ಸತಿಗೆ ತೋರಿದನು 29 ಒಡಹುಟ್ಟಿದಣ್ಣ ತಾ ಮುನಿಯೆ ನಮಗೆ ಬೇಡವೆಂದ್ಲು 30 ಕಾರಣವ ಹೇಳದಂತೆ ದಿನÀಕರ ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು31 ಗೆಲುವಿನಿಂದ ಮಾತಾಡಲಿಲ್ಲ ಜುಲ್ಮಿಂದ ತಾನೆ ಕೇಳಿದನು 32 ನಮ್ಮನೆಯಲಿ ನಾವೀಗ ಕಳಿಸುವೋರಲ್ಲ 33 ತೌರುಮನೆಯ ಹಾರೈಸುವರು ಉಂಡು ಸಂಭ್ರಮದಿಂದ ಬಾಹೋಳೆಂದ 34 ಕರುವ ಕಾಯಿ ನಮ್ಮ ಮನೆಯ ಮರೆಯದೆ ಹೊಯ್ಸುವೆಂನೆಂದ 35 ಜೋಳವ ಕೊಂಡು ಹೋಗೆನಲು ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು ಮಾಡುವೆನೊಂದÀು ಗಳಿಗೆಯಲಿ 36 ಗಮಕದಿಂದಲಿ ಬೆಳೆವೆನೆಂದು ಚಮತ್ಕಾರದಿಂದ ಮಾಯವಾದ 37 ಅಟ್ಟ ಅಡಿಗೆ ಮನೆಂiÉ
--------------
ಹೆಳವನಕಟ್ಟೆ ಗಿರಿಯಮ್ಮ
ಸಕಲ ಕಾಲದಿ ಮಾಡಿದ ಕರ್ಮವು | ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ ಪ ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ | ಸ್ತೋತ್ರಗಳ ಮಾಡಲಿ ಕೊಂಡಾಡಲಿ || ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿ | ಹೋತ್ರವನು ಮಾಡಿ ಹಿತವಾಗಿ ನುಡಿಯಲಿ 1 ದಾನವನು ಮಾಡಲಿ ದಾಕ್ಷಿಣ್ಯವಾಗಲಿ | ಮೌನವನು ಮಾಡಲಿ ಮಾತಾಡಲಿ || ಕಾನನವ ಸೇರಲಿ ಕಂಡಲ್ಲಿ ತಿರುಗಲಿ | ಏನೇನು ಚರಿತೆಗಳ ಮಾಡುತಿರಲಿ 2 ಪುಣ್ಯವಾದರು ಲೇಸೆ ಪಾಪವಾದರು ಹರಿ | ಮನ್ನಿಸಿ ತಾನೀಗ ತೆಗೆದುಕೊಂಡು || ತನ್ನ ಸಮೀಪದಿ ಇಟ್ಟುಕೊಂಡು ಅವನ |ಘನ್ನ ಮೂರುತಿ ವಿಜಯವಿಠ್ಠಲ ಪೊರೆವ 3
--------------
ವಿಜಯದಾಸ