ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ದಿನದಲಿ ಇಂದಿರೇಶನು ಚಂದದಿಂದಲಿ ವನಕೆ ಬಂದನು ಸುಂದರಾಂಗನು ಗೋಪ ವೃಂದದಿ ನಿಂದು ಕೊಳಲನು ಸ್ವರವಗೈದನು 1 ಕೊಳಲ ಧ್ವನಿಯನು ಕೇಳುತಾಕ್ಷಣ ಖಗಮೃಗಂಗಳು ಮಯ್ಯ ಮರತವು ತರುಣಿ ಮಣಿಯರು ಮನೆಯ ಕೆಲಸಕೆ ಮರತು ಮಯ್ಯನು ತೆರಳಿ ಬಂದರು 2 ಕೊಳಲ ಧ್ವನಿಯನು ಕೇಳಿ ಗೋಪೇರು ನಳಿನನಾಭನ ಬಳಿಗೆ ಬಂದರು ನಳಿನಮುಖಿಯರ ನೋಡಿ ಕೃಷ್ಣನು ಮುಗುಳುನಗೆಯಲಿ ಮಾತನಾಡಿದನು 3 ನಾರಿಮಣಿಯರೆ ರಾತ್ರಿ ವೇಳೆಯು ಈಗ ಇಲ್ಲಿಗೆ ಬಂದಿರೇತಕೆ ಮಾರನಯ್ಯನ ಮಾತುಕೇಳುತ ಮಡದಿ ಮಣಿಯರು ನುಡಿದರಾಗಲೆ4 ಬಾಲಕೃಷ್ಣನೆ ನಿನ್ನ ಕೊಳಲಿನ ಈಗಲೆಮ್ಮಯ ಮನವು ಹರುಷಿಸೆ ಬೇಗ ನಿನ್ನನು ಬೇಡಿಕೊಂಬೆವೊ 5 ಇಂತು ಕೃಷ್ಣನು ಸರಸವಾಡುತ ನಿಂತನವರಿಗೆ ಹರುಷ ತೋರುತ ಚಿಂತೆಯೆಲ್ಲವ ಬಿಟ್ಟು ಗೋಪೇರು ಅಂತರಾತ್ಮನ ಭಜಿಸುತಿದ್ದರು 6 ಏನು ಪುಣ್ಯವೊ ನಮ್ಮದೆನುತಲಿ ದಾನವಾರಿಯ ಸ್ಮರಿಸುತಿದ್ದರು ನಾರೇರೆಲ್ಲರ ನೋಡಿ ಕೃಷ್ಣನು ಬೇಗದಿಂದಲಿ ಅಂತರ್ಧಾನನಾದನು 7 ಸ್ಮರನ ಪಿತನನು ಸ್ಮರಿಸಿಪಾಡುವ ತರುಣಿಯರಿಗೆ ಮೈ ಸ್ಮರಣೆ ಮರೆತಿರೆ ಭರದಿ ಕಂಗಳ ತೆರೆದು ನೋಡಲು ಮುರಳೀಧರನ ಕಾಣದಲೆ ಚಿಂತಿಸಿ 8 ಜಾಜಿ ಸಂಪಿಗೆ ಸೂಜಿ ಮಲ್ಲಿಗೆ ರಾಜೀವಾಕ್ಷನ ಕಾಣಲಿಲ್ಲವೆ ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ ನಳಿನನಾಭನ ಸುಳಿವು ಕಾಣಿರಾ 9 ಸರಸದಿಂದಲಿ ಹರಿವ ಯಮುನೆಯೆ ಪಾದ ಕಾಣೆಯಾ ಚಿಗರಿ ಮರಿಗಳೆ ನಿಮ್ಮ ಕಂಗಳು ನಳಿನನಾಭನ ಸುಳವು ಕಾಣವೆ 10 ಯಾರ ಕೇಳಲು ಹರಿಯ ಕಾಣರು ನಾರಿಮಣಿಯರೆ ನಾವೆ ಕರೆಯುವ ಮುದ್ದು ಕೃಷ್ಣನೆ ಪದ್ಮನಾಭನೆ ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11 ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ ಜಯತು ಜಯತು ಶ್ರೀ ಗರುಡಗಮನನೆ ಜಯತು ಜಯತು ಶ್ರೀ ಉರಗಶಯನನೆ ಜಯತು ಜಯತು ಶ್ರೀ ಪರಮ ಪುರುಷನೆ 12 ಜಯತು ಜಾಹ್ನವಿಜನಕÀ ಶ್ರೀಶನೆ ಜಯತು ಭಕ್ತರ ಭಯವಿನಾಶನೆ ಜಯತು ಪಾವನ ಪುಣ್ಯ ಚರಿತನೆ ಜಯತು ಜಯತು ಲಾವಣ್ಯರೂಪನೆ 13 ಎಳೆಯ ಚಿಗುರಿನಂತಿರುವ ಪಾದವು ರುಳಿಯ ಗೆಜ್ಜೆಯು ಕಾಲಪೆಂಡೆಯು ಎಳೆಯ ಪಾದದಿ ಹೊಳೆವ ಪೈಜನಿ ಘಲಿರು ಘಲಿರು ಎಂದೆನುತ ಮೆರೆವುದು 14 ಪುಟ್ಟ ನಡುವಿಗೆ ಪಟ್ಟೆ ಮಡಿಗಳು ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ ಉಡುಗೆಜ್ಜೆಯು ಗಂಟೆ ಸರಪಳಿ ಒಪ್ಪಿ ಮೆರೆಯುವ ಕಾಂಚಿಧಾಮವು 15 ಚತುರ ಹಸ್ತದಿ ಶಂಖುಚಕ್ರವು ಗದೆಯು ಪದುಮವು ಹೊಳೆಯುತಿರುವುದು ಕಡಗ ಕಂಕಣ ತೋಳ ಬಾಪುರಿ ವಜ್ರದೊಂಕಿಯು ಮೆರೆಯುತಿರುವುದು 16 ಕೌಸ್ತುಭ ವೈಜಯಂತಿಯು ಸುರಗಿ ಸಂಪಿಗೆ ಸರಗಳೊಲಿಯುತ ಎಳೆಯ ತುಳಸಿಯ ಸರಗಳೊಪ್ಪುತ ಜರದವಲ್ಲಿಯು ಜಾರಿ ಬೀಳಲು 17 ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ ರತ್ನ ಪದಕಗಳೆಲ್ಲ ಶೋಭಿಸೆ ಮಕರ ಕುಂಡಲ ರತ್ನದ್ಹಾರಗಳಿಂದ ಒಪ್ಪಿರೆ 18 ಗುರುಳು ಕೂದಲು ಹೊಳೆವೊ ಫಣೆಯಲಿ ತಿಲುಕ ಕಸ್ತೂರಿ ಶೋಭಿಸುತ್ತಿರೆ ಎಳೆಯ ಚಂದ್ರನ ಪೋಲ್ವ ಮುಖದಲಿ ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19 ಪದ್ಮನೇತ್ರಗಳಿಂದ ಒಪ್ಪುತ ಪದ್ಮ ಕರದಲಿ ಪಿಡಿದು ತಿರುವುತ ಪದ್ಮಲೋಚನೆಯನ್ನು ನೋಡುತ ಪದ್ಮನಾಭನು ಕೊಳಲನೂದುತ 20 ರತ್ನ ಮುತ್ತಿನ ಕಿರೀಟ ಶಿರದಲಿ ಮತ್ತೆ ನವಿಲಿನ ಗರಿಗಳೊಪ್ಪಿರೆ ಹಸ್ತಿ ವರದನು ಎತ್ತಿ ಸ್ವರವನು ಮತ್ತೆ ಕೊಳಲನು ಊದೊ ದೇವನೆ 21 ಸುಂದರಾಂಗನೆ ಮಂದಹಾಸನೆ ಮಂದರೋದ್ಧರ ಬಾರೋ ಬೇಗನೆ ಇಂದಿರೇಶನೆ ಇಭರಾಜವರದನೆ ರಂಗನಾಥನೆ ಬಾರೊ ಬೇಗನೆ22 ಮದನ ಮೋಹನ ಪಾರಮಹಿಮನೆ ಬಾರೊ ಬೇಗನೆ ಶ್ರೀರಮಾಪತೆ ಶ್ರೀ ನಿಕೇತನ ವಾರಿಜಾಕ್ಷನೆ ಬಾರೊ ಬೇಗನೆ 23 ಹೀಗೆ ಗೋಪೇರು ಮೊರೆಯನಿಡುತಿರೆ ಮಂಗಳಾಂಗನು ಬಂದನೆದುರಿಗೆ ಧ್ವಜ ವಜ್ರಾಂಕುಶ ಪದ್ಮ ಪಾದವು ಅಡಿಯನಿಡುತಿರೆ ಧರಣಿ ನಲಿವಳು 24 ಹರಿಯ ನೋಡುತ ಪರಮ ಹರುಷದಿ ತರುಣಿಮಣಿಯರು ಹರುಷ ಪಡುತಲಿ ಪರಮ ಮಂಗಳ ಚರಿತ ದೇವಗೆ ಸ್ವರವನೆತ್ತಿ ಮಂಗಳವ ನುಡಿದರು 25 ಶುಭ ಕಂಬು ಕಂಠಗೆ ಮಂಗಳಂ ಮಹಾ ಮಾರನಯ್ಯಗೆ ಮಂಗಳಂ ಮಹಾ ಮುದ್ದುಕೃಷ್ಣಗೆ ಮಂಗಳಂ ಜಯ ಮಂಗಳಾಂಗಗೆ 26 ಕಮಲ ಮುಖಿಯರು ನಮಿಸಿ ಕೃಷ್ಣಗೆ ಸರಸವಾಡುತ ಹರುಷ ಪಡುತಲಿ ಕಮಲನಾಭ ವಿಠ್ಠಲನ ಕೂಡುತ ಮನದಿ ಸುಖವನು ಪಡುತಲಿದ್ದರು 27
--------------
ನಿಡಗುರುಕಿ ಜೀವೂಬಾಯಿ
ಶ್ರೀ ತುಳಜಾ ಮಹಾತ್ಮೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸಿರಿಯ ಸಹಿತಾಗಿರುವ ವೆಂಕಟಗಿರಿಯ ರಮಣನ ಮರೆತು ಎಲ್ಲವನು|| ಚರಕೆರಗುವೆನು|| 1 ಧರೆಯೊಳಗವನ ಮೆಟ್ಟಿ ಹಾರುವ ಹಿರಿಯ ಕವಿಗಳಿಗೆಲ್ಲಾ ನಾನೇ ಕಿರಿಯನೆಂದೆನಿಸಿ ಅವರನು ಮರೆಯದಲೆ ನೆನೆವೆ|| ಕಿರಿಯನಾದರೇನು? ನಾ ಈ ಧರೆಯೊಳಗೆ ಎಲ್ಯಿದ್ದರೇನು? ಮರೆಯದಲೇ ಮಾಡುವರು ಗುರುಗಳು ಮಮತೆ ಎನ ಮೇಲೆ||2 ಕೇವಲಾನಂತಾದ್ರಿ ರಮಣನ ಭಾವ ತಿಳಿಸುವ ನಮ್ಮ ಗುರುಗಳು ಭಾರ ಭಾವದಲ್ಲಿ ಪೇಳುವೇನು ತುಳುಜಾದೇವಿಯ ಮಹಿಮೆಯನು|| 3 ಪದ್ಯ ಪೂರ್ವದಲಿ ಕೃತಯುಗ ಪೂರ್ವದಲ್ಲಿ| ದ್ವಿಜವಯ ನೀರ್ವಕದ್ರುಮನೆಂದು ಊರ್ವಿಯಲ್ಲಿ ಪ್ರಖ್ಯಾತ ಸರ್ವದಾ ಮಾಡುವನು ಸರ್ವರಿಗೆ ಸಮ್ಮತಪೂರ್ವಧರ್ಮವು ಭಕ್ತಿ ಪೂರ್ವಕವಾಗಿ|| ಸರ್ವ ಸ್ತ್ರೀಯ ರೊಳಗ ಪೂರ್ವ ಸುಂದರಿಯಾಗಿ ಇರ್ವಳಾತನ ಮಡದಿ ಊರ್ವಶಿಯ ಪೋಲುವಳು ಊರ್ವಿಯಲಿ ಪತಿಸೇವೆ ಸರ್ವದಾ ಮಾಡುತಲೆ ಇರ್ವಳಾತೆಯು ಮನಃ ಪೂರ್ವಕವಾಗಿ||1 ಆ ಕಾಂತನಿಂದಲ್ಲಿ ತಾಕೂಡಿ ತನ್ನ ಮನಕೆ ಬೇಕಾದ ಸೌಖ್ಯದನೇಕ ವರ್ಷಗಳಲ್ಲಿ ಸ್ವೀಕಾರ ಮಾಡಿದಳು ಶ್ರೀಕಾಂತನ ದಯದಿ ಆಕೆಯ ಹೆಸರುಂಟು ಅನಭೂತಿ ಯಂತೆಂದು|| ಆ ಕರ್ದಮಾಖ್ಯ ದ್ವಿಜತಾಕಾಲದಿಂದ ಭೂತೋಕವನು ಬಿಟ್ಟು ಪರಲೋಕಕೆ ಪೋಗುತಿರೆ ಆಕೆ ಪತಿವುತೆಯು ಎಂಬಾಕೆ ಸಹಗಮನವೆಂಬ ಸಹಗಮನೆಂಬೊ ಆಶಾರ್ಯ ಮಾಡುತಿರೆ| ಆ ಕಾಲದಲ್ಲಿ ಆಯಿತಾಕಾಶವಾಣಿ|| ಪದ ಬ್ಯಾಡ ಬ್ಯಾಡಮ್ಮ ಬ್ಯಾಡದು || ನೀ ಮಾಡೋಕಾರ್ಯ ಬ್ಯಾಡ|| ಬ್ಯಾಡು ಬ್ಯಾಡುಮ್ಮ ಕೇಳು ಮಾಡತಕ್ಕ ಕಾರ್ಯದೂರ ನೋಡಿ ಮಾಡುಬೇಕು ಇಂಥ ಮೂಢ ಬುದ್ಧಿ ಮಾಡುವದು||ಪ ಪತಿಯ ಸರಿಯು ಹಿತಕರಿಲ್ಲವು || ಪತಿವ್ರತೆಗೆ ತನ್ನ ಪತಿಯ ಹೊರತು ಗತಿಯು ಇಲ್ಲವು || ಸುಳ್ಳಲ್ಲವು|| ಪತಿಯು ಇಲ್ಲದಿದ್ದರೇನು ಸುತರು ಸುಗುಣರುಂಟು ನಿನಗೆ ಸುತರು ಇರಲು ಪತಿಯ ಕೂಡಿ ಗತಿಯಸಮ್ಮತವು ಅಲ್ಲ|| 1 ಪತಿಯ ಬಿಟ್ಟು ಸ್ಥಿತಿ ಅಧರ್ಮವೇ| ಆ ಸತಿಗೆ ತನ್ನ ಪತಿಯ ಕೂಡೆ ಗತಿಯು ಧರ್ಮವೇ|| ಸತ್ಕರ್ಮವೇ|| ಪತಿಯ ಮ್ಯಾಲೆ ಸತಿಯು ಊಂಟು ಸತಿಗೆ ಸಮ್ಮತವು ಸತ್ಯ ಪತಿಯಿಂದಲೇ ಪತಿಯಲೋಕ ಗತಿಯು ಪತಿವುಲೆಯೇ ನಿನಗೆ||2 ಮುಖ್ಯಮಾತು ನೀನು ಕೇಳಿದ್ದು|| ಗರ್ಭಿಣಿಯು ಮತ್ತು ಮಕ್ಕಳುಳ್ಳ ಸ್ತ್ರೀಯು ಮಾಳ್ಪುದು || ಧರ್ಮಲಿಲ್ಲದ್ದು|| ಮಕ್ಕಳುಳ್ಳವಳು ನೀನು ಮಕ್ಕಳನ್ನು ಪಾಲಿಸುವುದು ಮುಖ್ಯನಂತಾದ್ರಿ ರಮಣ ತಕ್ಕ ಮುಕ್ತಿಕೂಡುವ ನಿನಗೆ|| 3 ಪದ್ಯ ಆ ಕಾಲಕ್ಕಾಗಿರುವ ಆಕಾಶವಾಣಿಯನ್ನು ತಾ ಕೇಳಿ ಅನುಭೂತಿ|| ಕಾಲ ಮೇರು ಶೈಲದಲ್ಲಿ|| 1 ಚಾರು ಮಂದಾಕಿನಿಯ ತೀರದಲ್ಲಿ ಪರ್ಣದ ಕುಟೀರವನ್ನು ಹಾರಿಸುತಾ ಬಂದನಾ ನಾರಿ ಇದ್ದಲ್ಲಿ||2 ಆಗ ಆಕೆಯ ಕಂಡು ಹೋಗಿ ಬದಿಯಲಿ ನಿಂತು ಹೀಗೆಂದು ಮನಸಿನಲಿ ಯೋಗಿಯಂತಲಿ ನಿಶ್ಚಳಾಗಿಹಳು ದಾವಾಕಿ ದೈವಯೋಗದಲ್ಲಿ ನೋಡಿದರೆ ಯೋಗಿಗಳು ತಮ್ಮ ಉದ್ಯೋಗಿವನ್ನು ಬಿಡುವರು ಹೀಗೆಂದು ಅನುಭೂತಿಯಾಗಿ ಮೋಹಿಸಿ ನುಡಿದ ಭೋಗ ಬಯಸುತಲೇ|| 3 ಪದ ರಾಗ:ಶಂಕರಾಭರಣ ನೀಪೇಳೆ ದಾವದಾವದು ನಿನ್ನ ಜೀವಕ್ಕ ಬೇಕು ಹೇಳೆ|| ಪ ನಿತ್ಯ ಶೋಷಣ ಮಾಡುಬ್ಯಾಡೇ|| 1 ದೇವತೆಗಳು ಎಲ್ಲಾರು ಬಿಡದೆ ಎನ್ನ ಕೋಕರಾಗಿಹರು|| ಸಾವಿರ ಸ್ತ್ರೀಯರು ಸೇವಿಸುವರು ಎನ್ನ ಸೇವಿಸುವರು ನಿನ್ನನ್ನು 2 ಚಿಕ್ಕ ಪ್ರಾಯದಲ್ಲಿ ನೀನು ಇರುವಿ ನಿನ್ನ ತಕ್ಕ ಪುರುಷನು ನಾನು|| ಮುಖ್ಯನಂತಾದ್ರೀಶ ಸಿಕ್ಕ ನಿನಗೆ ನಿನ್ನ ತಕ್ಕಂತೆ ಆಯಿತ್ಹೇಳೆ|| 3 ಪದ್ಯ ಧ್ಯಾನದಲ್ಲಿರಲು ದುಷ್ಟ ದನುಜೇಶ್ವರನು ತಟ್ಟನೆ ಮಾಡಿ ದುಕೃಷ್ಟ ತಾಳ ಧ್ವನಿಯು ಕಟ್ಟು ಇಲ್ಲದೇ ಒಳ್ಳೆ ಗಟ್ಟಿ ವದರಿಸಿ ನೋಡಿ ಒಂದಿಷ್ಟು ನುಡಿಯದೆ ಇರಲು, ದಿಟ್ಟಾಗಿ ತನಗೆ ರೀತಿ|| ಸಿಟ್ಟಲೇ ನುಡಿದಾಳು ಆ ಪತಿವುತೆ|| 1 ದಾ ಪೇಳಲೋ ನೀ ಧಿಟ್ಟ ದಾರಿಲ್ಯಾತಕೆ ಬಂದ್ಯೊ ನೀ ಪಾಪಿಷ್ಠ|| ದೂರದಲ್ಲಿ ಇರೋ ನೀ ದುಷ್ಟ || ಧೈರ್ಯದಿ ನೀ ಎನ್ನ ಮುಟ್ಟಿದ್ಯೋ ಭ್ರಷ್ಟ|| 2 ಸುಖಭರಿತ || ಲಗುಬಗೆಯಲಿ ಮೋಹಿಸುತ || ಬಗೆ ಬಗೆಯಲ್ಲಿ ಮಾತನಾಡಿದನು ನಗುನಗುತ| 3 ಪದ, ರಾಗ:ಶಂಕರಾಭರಣ ಮರುಳು ಗೊಂಡೆನೇ || ತರುಳೆ ನೊಂದೆನೆ|| ಮರಳು ಗೊಂಡೆ ತರುಳೆ ನಿನ್ನ ಹೊರಳಿ ನೋಡುವ ಯ್ಹರಳಿನೋಟಕೆ|| ಪ ಮಾನ್ಯ ಮಾನಣಿ || ರನ್ನೆ ಶಿರೋಮಣಿ || ಚೆನ್ನವಾದ ಚಿನ್ನದಂಥ ನಿನ್ನ ದೇಹವನ್ನು ಕಂಡು|| 1 ಮಾತುಲಾಲಿಸೆ|| ಪ್ರೇತಿ ತೋರಿಸೆ ||ಪ್ರೀತಿ ಎಂಬೊದ್ಯಾತಕಿನ್ನ ಸೋತು ಕಾಮಾಪೂರದಲ್ಲಿ|| 2 ನಿಂತು ಮರೆತೆನಾ || ಅನಂತಾದ್ರೀಶನಾ || ಎಂಥಹವರಿಗೆ ಭ್ರಾಂತಿ ಬಿಡಿಸುವಂಥ ನಿನ್ನ ಕಾಂತಿ ನೋಡಿ|| 3 ಆರ್ಯಾ ಇಂಥಾ ಮಾತವು ಕೇಳಿ || ಚಿಂತಾಕ್ರಾಂತಳಾದಳಾಗ ಆಗ ಆ ಬಾಲಿ|| ಬಂದಿತು ಇಂಥಾ ಘೋರಾ || ಚಿಂತಿಸ ಬೇಕಿನ್ನು ಇವನ ಸಂಹಾರಾ|| 1 ಶಾಪಿಸ ಬಾರದು ಜ್ಞನಿ || ಶಾಪಿಸಿದವರ ಅಗುವುದು ತಪಹಾನಿ|| ಪರಿ ಮನಸಿಗೆ ತಂದು ವ್ಯಾಪಾರವು ಮಾಡಿದಳು ಮತ್ತೊಂದು| 2 ಎಂಬಾಕೆ ನಾಮವೇ ತುಳಜಾ|| 3 ಪದ ರಾಗ :ಸಾರಂಗ ತಾಳ :ತಿವಿಡಿ ಸ್ವರಷಡ್ಜ ಸಲಹಬೇಕೆಂದು ನಿಲ್ಲದೆ|| ಪ ಪಾಶಾಕೃಷ್ಟ ಧರಿಸುತಾ||1 ವರೆಂದು || ದಯಮಾಡಿ ವರಗÀಳ ನೀಡುವಳು ಹಿಡಿಯಂದು|| ಕಾರುಣ್ಯಸಿಂಧು|| ಗಾಢನೆ ಧ್ವನಿ ಮಾಡುತಲೇ ಹಾರ್ಯಾಡುತಲೇ ತ್ವರ ಮಾಡಿಸುತಲೇ ಓಡಿ ಬರುತಿಹ ಪ್ರೌಢಗಣಗಳ ಕೂಡಿ ಸಿಂಹಾರೂಢಳಾಗಿ||2 ಎಂತು ಪೊಗಳಲಿ ನಾನು|| ಅತ್ಯಂತ ಬಹಳಾದಂತ ಮಹಿಮೆಗಳನು ಎಂತೆಂಥವರು ಬೇಕಂತ ಹುಡುಕಿದರೇನು|| ಹಿಗಂತ ಆಕೆಯ ಅಂತೂ ತಿಳಿಯದು ಇನ್ನು|| ಗುಣವತಿ ತಾನು|| ಶಾಂತಿಯಿಂದ ಅನಂತಾದ್ರೇಶನ ಕಾಂತಯಳ ಪೋಲುವಂತ ದೇವಿಯು ಚಿಂತೆಯಲಿ ತನ ಚಿಂತಿಸಿರುವಳ ಚಿಂತೆ ಬಿಡಿಸ ಬೇಕಂತ ಧಾವಿಸಿ|| 3 ಆರ್ಯಾ ಸಾರ ಪರಮಾದರದಿಂದ ಕೂತು ಕೇಳಿದವರು || ಪರಿಪೂಜಿಸುತಾ ತುಳಜಾ ತಾನಾಗುವಳು ಪ್ರತ್ಯಕ್ಷ|| 1 ವರಕವಿತಾ ರಚನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದು ಎನ್ನ ಉಪಾಯ|| ಗುರು ಕೃಪೆಯಿಂದಾಯಿತೊಂದಧ್ಯಾಯ|| ಶ್ರೀಹರೇ ಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು