ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾವಧನಾಗಿ ಮನುಜಾ | ಕೇಳು | ನಿಜ ಸ್ಥಿತಿಯಾ ಪ ಕೇಳು ನಿಜ ಸ್ಥಿತಿಯಾ | ಪಡೆದೇನೆಂದರೆ ಗತಿಯಾ | ಬೀಳದೆ ನೀ ಕವಳದಾರಿಗೆ | ನಂಬು ಗುರು ಮೂರ್ತಿಯಾ 1 ಗಗನ ಮುರಿದು ಬೀಳಲಿ | ಸಾಗರ ಮೇರೆದಪ್ಪಲಿ | ಬಾಗದೇ ನೀ ಅನ್ಯದೈವಕ | ಭಾವ ದೃಢ ವಿರಲಿ 2 ದಾಸರ ಕಂಡರೆ ರಂಗಯ್ಯಾ | ಜಂಗಮ ಕಂಡರೆ ಲಿಂಗಯ್ಯಾ | ವೇಷಿಯಂತೆ ತಿರುಗಬ್ಯಾಡಾ | ಹಿಡಿಯೋ ಒಂದೇ ನಿಷ್ಠೆಯಾ 3 ಕಂಡ ಮಾರ್ಗ ನೋಡದೆ | ಕಂಡ ಮಾತನಾಡದೆ | ಗಂಡನೊಬ್ಬನ ಮಾಡದೆ ನಾರಿ | ಪತಿವೃತೆ ಮೆರಿವದೇ 4 ಎಲ್ಲಿ ಒಂದೇ ನಿಷ್ಠೆಯು | ಅಲ್ಲಿ ಶ್ರೀ ಹರಿ ಕೃಪೆಯು | ನಿಲ್ಲದೆ ಮಹಿಪತಿ ನಂದನಸ್ವಾಮಿ | ಇದಿರಿಡುವನು ಸಂಗತಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೋತುಹೋಗಣ್ಣ ಮಾತುಬಂದಲ್ಲಿ ಜಾಣನಾಗಿ ಸೋತುಹೋಗಣ್ಣ ಮಾತುಬಂದಲ್ಲಿ ಪ ಸೋತುಹೋಗದೆ ಮಾತುಮಾತಿಗೆ ವಾದಿಸಲ್ಕೆ ಘಾತಕತನದ್ವಿಧಿಯು ಬಂದು ಆತುಕೊಂಡು ಕೂತುಕೊಳ್ವುದು ಅ.ಪ ಸೋತೆನೆನ್ನಲು ನಾಚಬೇಡಣ್ಣ ದೇವರು ಕೊಟ್ಟಿಹ್ಯ ಖ್ಯಾತಿಯೇನು ಹೋಗೋದಿಲ್ಲಣ್ಣ ಸುಳ್ಳಲ್ಲವಣ್ಣ ಸೋತೆನೆಂಬುದು ಜಯದ ಮಾತಣ್ಣ ಸತ್ಯ ತಿಳಿಯಣ್ಣ ನೀತಿಗಡಕರ ಮಾತಿನ ತಳ್ಳಿಗೋತ ಕುಣಿಯೊಳೆಳೆವ ಬಳ್ಳ್ಯೆಂದು ಮಾತನಾಡದೆ ಸುಮ್ಮನ್ಹೋಗಲು ನೀತಿವಂತರು ಮೆಚ್ಚುತಾರ 1 ದುಡುಕುಮಾತಿಗೆ ಮಿಡುಕಬೇಡಣ್ಣ ಸತ್ಯದ್ಹೇಳುವ ದೃಢತರ್ವಚನದ ಅಡಕು ತಿಳಿಯಣ್ಣ ಪಡಕೊ ಸುಖವಣ್ಣ ನೀ ತೊಡರಿಕೊಂಡರೆ ತಪ್ಪದು ಕಡೆಯತನಕ 2 ಸೋತೆನೆನದ್ಹತ್ತುವದನಂದೇನಾಯ್ತು ಸೋತು ಓಡಿದ ನೀತಿವಂತ ವಿಭೀಷಣಂದೇನಾಯ್ತು ಮತ್ತು ನಳರಾಜ ಸೋತ ರಾಜ್ಯ ಭಂಡಾರೆಲ್ಲ ಮುಳುಗಿತು ತಿಳಿ ನೀತಿ ಅರಿತು ಮಾತುಮಾತಿಗ್ವಾದಿಸಿ ಕುಲಘಾತಕ್ಕಾದನು ಕೌರವೇಂದ್ರನು ಸೋತಜನರಭಿಮಾನಿ ಶ್ರೀರಾಮ 3
--------------
ರಾಮದಾಸರು
ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು