ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಮಂಗಳೆಂದು ಪಾಡಿರೆ ಶ್ರೀರಂಗನಾಥಗೆ ಲಕ್ಷ್ಮೀರಂಗನಾಥಗೆ ಮಂಗಳಪುರಿ ಜಾಲ ಹಳ್ಳಿರಂಗ ನಿಲಯಗೆ ಬ್ಯಾಗೆ ಪ ಅಂಗನೆಯರು ಶೃಂಗಾರದಿ ಸಂಗೀತಪ್ರಿಯಗೆ ಮಂಗಳಾಂಗ ದೇವಗೆ ಮಾತಂಗವರದಗೆ ಬ್ಯಾಗೆ 1 ಇಂದಿರವರ ಮಂದರೋದ್ಧರ ನಂದಕುವರಗೆ ಹಿಂದಕೆ ಮುದಗಲ್ಲು ಪುರದಿ ಬಂದು ನಿಂದಗೆ ಬ್ಯಾಗೆ 2 ದಾರಿಯೊಳು ಉಪ್ಪಾರಜನರ ಸೇರಿಬಂದವಗೆಸಾರಿದವರ ಪೊರೆವ 'ಕಾರ್ಪರ ನಾರಶಿಂಹಗೆ' ಬ್ಯಾಗೆ 3
--------------
ಕಾರ್ಪರ ನರಹರಿದಾಸರು
ನೆನೆವವರ ಬಳಿಯಲಿ ನಗುವ ಮಣಿರದನ ಪ ಕುಪಿತನಾಗದೆ ಎನ್ನ ತಾಪವ ಬಿಡಿಸೋ 1 ಸ್ನಾನ ಸಂಧ್ಯೆಗಳಿಂದ ಜ್ಞಾನ ದೊರೆಯಲಿಲ್ಲ ಧ್ಯಾನಭಿಕ್ಷೆಯ ನೀಡೋ ಶ್ರೀನರಸಿಂಹ 2 ಮೂರ್ತಿ ಮಾತಂಗವರದ ನನ್ನ ಭಂಗಪಡಿಸಬೇಡ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರೆಯುವರಾರೆ ಶ್ರೀ ಮುರಳೀಧರನ ಕಂಡು ವರವ ಬೇಡದವರಾರೆ ಪಡೆಯದವರಾರೆ ಪ ಮುರಳೀದನಿಯ ಕೇಳಿ ಪರಿದೋಡದವರಾರೆ ಅವನೆಡೆ [ಪರಮಸುಖ] ಪಡೆಯದವರಾರೆ ಅ.ಪ ಕಂಜನಾಭನು ಬಂದು ಪುಂಚವನದಿ ನಿಂದು ಮಂಜುಳಗಾನವ ಮಾಡುತಿರೆ ಅಂಜುವರೇನೆ ನಿರಂಜನನವ ಪಾಪ ಭಂಜಕನೇ ತಂಗಿ ಹೋಗೋಣ ಬಾರೆ 1 ಮಂಗಳಮೂರ್ತಿ ಮಾತಂಗವರದ ಭವ ಭಂಗನ ಚರಣವ ನೋಡುವ ಬಾರೆ ಮಂಗಳ ಜಯ ಜಯ ಮಂಗಳ ಮಾಂಗಿರಿ ರಂಗಗೆ ಶುಭವೆಂದು ಪಾಡುವ ಬಾರೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಧರ ಮುರಹರ ಮಾರಮಣೀಕರ ಸೇವಿತ ಜಯ ಜಯ ಗೋಪಾಲಾ ಪ ಭೂಧರಾ ಪರಮೇಶ್ವರಾ ಕರಿವರ ಸುಖಕರ ಪರಮ ದಯಾಕರ ಗೋಪಾಲಾ ಅ.ಪ ಪಾಂಡವ ರಕ್ಷಕ ಕೌರವ ಶಿಕ್ಷಕ ಪಕ್ಷಿಗಮನ ಹರಿ ಗೋಪಾಲಾ ಚಂಡಕರಾಕ್ಷ ವಿಲಕ್ಷಣ ಲಕ್ಷಿತ ಲಕ್ಷ್ಮೀನಾಯಕ ಗೋಪಾಲಾ 1 ಗಂಗಾಜನಕ ವಿಹಂಗಗಮನ ಮಾತಂಗವರದ ಹರಿ ಗೋಪಾಲಾ ಸಂಗರಭೀಮ ಕೃಪಾಂಗ ಮನೋಹರ ಮಾಂಗಿರಿನಾಯಕ ಗೋಪಾಲಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ ಸಾಕು ದಯದಿಂದನೇಕ ಮಹಿಮನೆ ಏಕಾಮೇವಾದ್ವಿತೀಯ ಪ ಮಂಗಳಾಂಗ ಮಾತಂಗವರದ ವಿ- ಹಂಗಗಮನ ಭುಜಂಗಶಯನ ತು- ರಂಗವದನ ಶುಭಾಂಗ ರಿಪುಕುಲ- ಭಂಗ ಅಸಿತಾಂಗ ಅ.ಪ. ಶೃಂಗಾರಾಂಬುಧಿ ರಂಗ ನಿನ್ನಯ ಅಂಗಸಂಗಕ್ಕೆ ಅಂಗೀಕರಿಸಿದ ಸಂಗಿತರ ಚರಣಂಗಳಬ್ಜಕೆ ಭೃಂಗನಪ್ಪೆನೆಂತೊ 1 ಮಾನವಾವುದು ಸುಮ್ಮನಿರೆ ಪವ- ಮಾನವಂದಿತ ನಿನ್ನ ಪೋಲ್ವ ಸ- ಮಾನರಾರನು ಕಾಣೆ ಎನ್ನಭಿ- ಮಾನವಾಧೀಶ ಮಾನವಮಾನ- ಮಾನದಿಂದ ಕ್ರಮಾನುಸಾರನು ಮಾನಗೊಳಿಸದೆ ಮಾನವಿತ್ತು ದು- ಮ್ಮಾನವನೆ ಬಿಡಿಸೊ 2 ಬಲ್ಲೆ ನಿನ್ನಯ ಎಲ್ಲ ಪರಿಯಲಿ ಬಲ್ಲಿದರಿಗತಿ ಬಲ್ಲಿದನು ಸಿರಿ- ವಲ್ಲಭಾ ನೀನಲ್ಲದಿಲ್ಲೆಂದು ಎಲ್ಲ ತುತಿಸುತಿದೆ ಸೊಲ್ಲುವೊಂದನು ನಿಲ್ಲುತಲಿ ಕೇಳು ಎಲ್ಲು ಬಯಸದೆ ಇಲ್ಲಿಗೇ ಬಂದೆ ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ ಬಲ್ಲದನು ಮಾಡೋ3
--------------
ವಿಜಯದಾಸ
ಸುಲಲಿತ ಮಧುಕರ ಕೊಳಲನೂದುವುದನು ಕಲಿಸಿದರಾರೇ ನಳಿನಮುಖೀ ರಾಧೇ ಪ ಬಲಿಸಂಹಾರನು ಲೋಕದ ನಾರಿಯ ರಲಸದೆ ಗಾನವ ಕಲಿಸಿದನೇನೇ ಅ.ಪ ಕರು ತುರುಗಳ ಬಳಿ ಸರಸವನಾಡುತ ಮುರಳಿಯನೂದುವ ಸರಸಿಜನಾಭ ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1 ಬೃಂದಾವನದಲಿ ನಂದಕುಮಾರನ ವಂದಿಸೆ ನಾರದ ಬಂದುಹಾಡಿದನೇ ಅಂದದ ಕಲಿಕೆಯ ತುಂಬುರ ನಿನಗಾ ನಂದದಿ ಗಾನವ ಕಲಿಸಿದನೇನೆ 2 ಅಂಗಜಪಿತನಿಗೆ ಮಂಗಳಗಾನವ ಅಂಗನೆ ಶಾರದೆ ಪಾಡಿದಳೇನೇ ಮಾಂಗಿರಿರಂಗ ಮಾತಂಗವರದನಂತ ರಂಗದರಾಣಿ ನೀ ಕಲಿಯೆಂದನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸು ನಮ್ಮನು ಪರಬ್ರಹ್ಮ ಶ್ರೀ-ಲೋಲಾನಂತ ಗುಣಾಲಯನೇ ಪ.ನೀಲಾಭ್ರದಾಭ ಕಾಲನಿಯಾಮಕಮೂಲೇಶ ಪುರುಷ ಮೂರ್ಲೋಕಾಧಿಪ ಅ.ಪ.ಉತ್ತಮ ಗುಣಗಳು ಬತ್ತಿಪೋದುವೈದೈತ್ಯರ ಗುಣವು ಪ್ರವರ್ಧಿಪುದುಚಿತ್ತಸಾಕ್ಷಿ ತವ ಭಕ್ತಿಕಥಾಮೃತನಿತ್ಯನಿತ್ಯಸವಿಸುತ್ತ ಹಿಂಬಾಲಿಸೆ1ಭಾಗವತಜನರ ಯೋಗಕ್ಷೇಮ ಸಂಯೋಗೋದ್ಯೋಗಿ ನೀನಾಗಿರಲುಕೂಗುವಾಸುರರ ಕೂಡೆ ಕೂಡಿಸದೆಭೋಗಿಶಯನಭವರೋಗಭೇಷಜನೆ2ಪಾವನಕರ ನಾಮಾವಳಿ ವರ್ಣಿಪಸೇವಕ ಜನರ ಸಂಭಾವಿಸುವಕೇವಳಾನಂದ ಠೀವಿಯ ಪಾಲಿಸುಶ್ರೀವಾಸುದೇವ ದೇವಕೀತನಯ] 3ಶುದ್ಧತಮೋಗುಣಬದ್ಧ ದೈತ್ಯ ಪ್ರ-ಸಿದ್ಧರಾಗಿಹರು ಮದ್ಯಪರುಬುದ್ಧಿಜ್ಞಾನ ಸಮೃದ್ಧಿ ಭಕ್ತಿಯಿಂ-ದುದ್ಧರಿಸೈಗುರುಮಧ್ವವಲ್ಲಭನೆ4ಕೇಶವಾಚ್ಯುತ ಪರೇಶ ಹೃದ್ಗುಹನಿ-ವಾಸ ವಾಸವಾದ್ಯಮರನುತಶ್ರೀಶ ಶ್ರೀವೆಂಕಟೇಶ ಭಕ್ತಜನರಾಶ್ರಯಸ್ಥಿತದಿನೇಶಶತಪ್ರಭ5ಮಂಗಲ ಜಗದೋತ್ತುಂಗರಂಗಮಾತಂಗವರದ ನೀಲಾಂಗ ನಮೋಅಂಗಜಪಿತಲಕ್ಷ್ಮೀನಾರಾಯಣಸಂಗೀತಪ್ರಿಯವಿಹಂಗತುರಂಗನೆ6
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ