ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ
ಶ್ರೀ ಗಣಪತಿ ಗಿರಿಜೆ ಪುರಾಂತಕ ಬಾಗಿನಮಿಸುವೆ ಲಕ್ಷುಮಿಗೆ ನಾರಾಯಣಗನು- ರಾಗದಲಿ ವಂದಿಸಿ ಪೇಳುವೆನು 1 ನವರತ್ನಖಚಿತ ಮಂಟಪದಲಿ ನವನವ ಚಿತ್ರಗಳನು ಬರೆಯಿಸಿ ಭವನರಸಿ ಮುಖ್ಯಾ ಮುತ್ತೈದೆಯರು ಹರುಷದಿ ಲಕ್ಷ್ಮೀ ಧವನಡಿಗಳ ಬೇಡಿ ಪ್ರಾರ್ಥಿಸುವರು 2 ಮುತ್ತು ಮಾಣಿದ ಹಸೆಗಳ ಹಾಕಿಸಿ ಪಚ್ಚೆಯ ಮಣಿಗಳ ತಂದಿರಿಸಿ ಮಿತ್ರೇ ಮಹಲಕ್ಷ್ಮಿಯ ರಮಣೆಗೆ ಅಕ್ಷತೆಯನು ತಳಿದು ವತ್ತೀದಾರೆಣ್ಣೆ ವಧೂವರರಿಗೆ 3 ಅಂಕಿತವಾಗಳವಡಿಸಿ ಪಣೆಗೆ ಪಂಕಜಾನನೆಯರು ವೀಳ್ಯವನು ಕರದಲಿಕೊಟ್ಟು ವೆಂಕಟಾಗೆಣ್ಣೆ ವತ್ತೀದಾರು 4 ನಲ್ಲೆಯರೊತ್ತಲು ನಸುನಗುತಲಿ ಚಲ್ವಾಗುರುರಾಮವಿಠಲಗೆ ಹರಸಿದರು ಸುರ ರೆಲ್ಲ ಪೂಮಳೆಯ ಕರೆದಾರು 5
--------------
ಗುರುರಾಮವಿಠಲ