ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಅನಾಥ ನಾನೇ ಸನಾಥ ಪ ಜ್ಞಾನಿಗಳಾಡುವರು ಯೀಪರಿ ಮಾತಾ ಅ.ಪ ನಂಬಿರುವುದೆ ಸುಳ್ಳು ನಂಬಿದಿರುವದೆ ನಿಜ ಹಂಬಲಿಸಿದರೇನು ತುಂಬುವುದಿಲ್ಲ 1 ಇಲ್ಲಾ ಎಂಬೋದುಂಟು ಉಂಟೂ ಎಂಬೋದಿಲ್ಲ ಬಲ್ಲರು ಸರ್ವರು ಬಾಯಿಮಾತಲ್ಲ 2 ಮಾನಾಭಿಮಾನ ನಿನ್ನಧೀನವು ಹರಿಯೇ 3 ಕಾಣೋದು ಕೇಳೋದು ಮಾಣಾದೆ ಮಾಡೋದು ನೀನೆ ಯನ್ನೊಳಗಿದ್ದು ನಡೆಸುತ್ತಲಿರುವೆ 4 ಎನಗೇ ನೀನೆ ತಂದೆ ನಿನಗೇ ತಂದೆ ಕಾಣೆ ಸಿರಿನಲ್ಲ 5 ನಿನ್ನೊಳಗೆ ಜಗವು ಜಗದೊಳಗೆ ನೀನೆ ಪನ್ನಗ ಶಯನಾ ಪಾವನ ಚರಿತನೆ 6 ಸರುವಾರೊಳಗೂ ಗುರುರಾಮ ವಿಠ್ಠಲ ಪರಿಪೂರ್ಣನೆಂಬೋದು ಪ್ರಹ್ಲಾದ ಬಲ್ಲ7
--------------
ಗುರುರಾಮವಿಠಲ
ಶ್ರೀರಾಮನಾ ಅಡಿವಿಡಿವೆನು ನಾ ಶ್ರೀರಾಮನಾ ಪ ನುಡಿಯಂತೆ ಮಾತೆಯಾ ಮಡದಿಯಿಂದೊಡಗೂಡಿ ಬಿಡದೆ ನಡೆದನವನಡವಿ ವಾಸಕೆ 1 ಕನಕಮೃಗವ ತೋರಿ ಸೊಣಕ ರಾವಣ ತಾನು ಜನಕ ಸುತೆಯ ನಿಜ ವನಕೆ ಕೊಂಡು ಪೋದಾ 2 ಕಾಣಾದೆ ಸತೀಯಳೇ ಮಾಣಾದೆ ಪುಡುರೆದಾ (?) ದಾನವನೆಡೆ ಪೇಳ್ದ ಮಾನಿಜಟಾಯು 3 ಲಂಕಾ ಪತ್ತನಕೆ ತಾ ಹುಂಕಾರಿಯುರಿ ಇರ್ಕೆ ಬಿಂಕದಿ ತಾ ರಾಮನಂಘ್ರಿಗೆರಗಿದಾ 4 ಶರಧಿ ಹಾದಿಯ ಮಾಡಿ ವರರಾಮನೊಡಗೂಡಿ ಲಂಕೆಗೆ ನಡೆದರು 5 ಜಗದೀಶ ರಾಮಾನೆಂದು ಮುಗುದಾ ಹನುಮ ಕರಾ ಜಗಜ್ಜನನಿಗೆ ಇತ್ತ ಸೊಗಲು ಪುಂಗುರಾ 6 ಶರಥಸುತನಿಗೆ ವಸುಧೆಯೊಳ್ಸಮರಾರು 7 ಅನಲಾಮುಖದಿ ತಾನು ವನಿತೇಯ ಕೂಡಿದಾ ಘನಮಹಿಮನ ಲೀಲೆ ಮನುಜರರಿವರೇ 8 ಮನಮುಟ್ಟಿ ಭಜಿಸೀದ ಮನುಜಗೊಲಿದ ನಿಜ ಘನಮಹಿಮನು ಶ್ರೀ ನರಸಿಂಹವಿಠ್ಠಲಾ 9
--------------
ನರಸಿಂಹವಿಠಲರು