ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ಯಾಡ ಬ್ಯಾಡಿರೆಂದ ಅವರೊಳು ಪಂಥಬ್ಯಾಡ ಬ್ಯಾಡಿರೆಂದು ಬ್ಯಾಡ ಬ್ಯಾಡ ಪಂಥ ನೋಡಿಕೊ ರುಕ್ಮಿಣಿಮಾಡೋರು ಮುಖಭಂಗಬೇಡಿಕೊಂಡೆನು ಭಾವೆ ಪ. ಹರದೆಯರಾಡಿದ ಮಾತು ಹರಿಯು ಕೇಳುತಬೇಗ ಕರೆಯ ಹೋಗೆಂದ ಮಡದಿಯರ ಕರಿಯ ಹೋಗೆಂದ ಮಡದಿಯರ ದ್ರೌಪತಿಯೆಸರಿಯಲ್ಲ ಪಂಥ ಬಿಡಿರೆಂದ1 ಹಾದಿ ಬೀದಿಯ ಮಾತು ಸಾಧಿಸುವರೆ ನೀವುವೇದಾಂತ ಮಳೆಯ ಗರೆದಾರುವೇದಾಂತ ಮಳೆಯ ಗರೆದಾರು ನಿಮ್ಮ ಮುಖಆದೀತು ಸಣ್ಣ ಸಭೆಯೊಳು 2 ಅತ್ತಲಿತ್ತಲೆ ಮಾತು ಜತ್ತು ಮಾಡೋರೆನೀವುಶ್ರುತ್ಯರ್ಥವೆಲ್ಲ ಸುರಿಸೋರುಶ್ರುತ್ಯರ್ಥವೆಲ್ಲ ಸುರಿಸೋರು ನಿಮ್ಮಮುಖ ಬತ್ತೀತು ಒಂದು ಕ್ಷಣದಾಗೆ 3 ಮಂದರಧರ ತನ್ನ ತಂಗಿಯರ ಕರೆಯೆಂದು ಮಂದಹಾಸದಲಿ ನುಡಿದನುಮಂದಹಾಸದಲಿ ನುಡಿದನು ಭಾವೆರುಕ್ಮಿಣಿ ಬಂದರು ಭಾಳೆ ವಿನಯದಿ4 ಆರು ಮಂದಿ ಹರಿಯ ನಾರಿಯರುಹದಿನಾರು ಸಾವಿರ ಮಂದಿ ಸಹಿತಾಗಿಹದಿನಾರು ಸಾವಿರ ಮಂದಿ ಸಹಿತಾಗಿ ಬಂದರು ನಾರಿ ದ್ರೌಪದಿಯ ಕರೆಯಲು5 ನೂರುಮಂದಿ ಹರಿಯನಾರಿಯರುತಂತಮ್ಮ ಹಾರಭಾರಗಳ ಅಲವೂತಹಾರಭಾರಗಳು ಅಲವೂತ ಬಂದರು ನೀರೆ ಸುಭದ್ರೆಯು ಕರೆಯಲು 6 ಪನ್ನಂಗ ವೇಣಿಯರು ಮನ್ನಿಸಿ ಹರಿಯಾಜ್ಞೆಚನ್ನ ರಾಮೇಶನ ಮಡದಿಯರು ಚನ್ನ ರಾಮೇಶನ ಮಡದಿಯರು ಬಂದರುಕನಿ ದ್ರೌಪತಿಯ ಕರೆಯಲು 7
--------------
ಗಲಗಲಿಅವ್ವನವರು
ಭಜನೆಯ ಪದ ಭಕ್ತ ವತ್ಸಲ ಸ್ವಾಮಿ ಭಯನಿವಾರಣ ದೇವ ಭರದಿಂದ ಬಂದುದ್ಯಾಕೆ ಪೇಳಯ್ಯಾ ಪ ಭಾರ ಹೊತ್ತು ಬಂದೆಯಾ ಕೋರೆದಾಡಿಗಳಿಂದ ಧಾರೂಣಿ ಎತ್ತೀ ತಂದು ಭಾರ ವಾಯಿತೆಂದು ಬಂದೆಯಾ 1 ಬಾಲಕಾನಾ ನುಡಿಯ ಕೇಳಿ | ಬೇಗದಿಂದಾ ಬಂದೆಯಾ ದುರುಳನ್ನ ಕೊಂದು ಕರುಳ ಮಾಲೆಯಧರಿಸಿ ನೀ ತರಳಗಭಯವಿತ್ತು ಬಂದೆಯಾ2 ಬಲಿಯ ದಾನಾಬೇಡಿ ನೀನು ಕೊಡಲಿ ಪಿಡಿದೂ ನಿಂತೆಯಾ ಮಡದಿಯಾ ಕದ್ದವನ ಬಿಡದೆ ಬೆನ್ನಟ್ಟಿಕೊಂಡು ಸಡಗರದಲಿ ನೀ ಬಂದೆಯಾ 3 ಮಧರೇಲಿ ಹುಟ್ಟಿ ಮಲ್ಲಾರ ಮಡುಹೀ ಮಾವ ಕಂಸನ ಕೊಂದು ಬಂದೆಯಾ ಆನಂದಿಂದಿಲ್ಲಿ ಬಂದೆಯಾ 4 ವಸನಾ ವಿಲ್ಲದೆ ನೀನು ಪಶುವನ್ನೇರಿಕೊಂಡು ವಸುಧೆಯ ಒಳಗೆಲ್ಲಾ ತಿರುಗೀದೆಯಾ ನೀ ಬಂದೆಯಾ5 ಕರಿಯಾ ಮೊರೆಕೇಳಿ ನೀ ತ್ವರಿತಾದಿಂದಾ ಬಂದೆಯಾ ಮ ಕರಿವರದನೆಂದೆನಿಸಿಕೊಂಡೆಯಾ 6 ಕಷ್ಟ ಪಡುವಾ ಜನರ ಕಂಡು ಕಡುದಯದಿಂ ಬಂದಿಯಾ ಪಕ್ಷಿವಾಹನನೇ | ಲಕ್ಷಮಿರಮಣನೆ | ಕಟಾಕ್ಷವನೇ ಬೀರುವಿಯಾ 7 ಹತ್ತವತಾರವ ಎತ್ತಿ ಬೇಸತ್ತು ನೀ ಮತ್ತೆ ನೀನಿಲ್ಲ ಬಂದಿಹೆಯಾ ಬರುವರು ಕಂಡೆಯಾ 8 ಲಕ್ಷ್ಮಿ ಇಲ್ಲದೆ ನಾನಿರೆನೆನುತಲಿ ವೈಕುಂಠ ಬಿಟ್ಟು ಬಂದೆಯಾ ಭಕ್ತಾರ ಸಲಹಲು ಬಂದಿಹೆಯಾ 9 ಹುಡುಕೀಕೊಂಡಿಲ್ಲೇ ಬಂದಿಹೆಯಾ 10 ಪಾಪನಾಶಿನಿ ಸ್ನಾನ ಮಾಡೋರು | ನಿನ್ನ ಧ್ಯಾನ ಬೇಡೋರು ಮನದಿಕ್ಷ್ಟಾರ್ಥಗಳ ಸಲಿಸಲು | ಆತೂರದಿಂದಲಿ ಬಂದೆಯಾ 11 ರೀತಿಗಳಿಂದ ಸೇವಿಸುವರು ನಿನ್ನ ಕೆರಂಡಾಡುವರು 12 ಬಳಿ ಬಂದಿಹರು ಬೇಡುತಾ ನಿಂದಿಹರೂ13 ಪಡುತಲಿ ಬಂದಿಹರು ಸಂತಯಿಸಬೇಕೆನುತ ಬಂದಿಹೆಯಾ14 ಬಳಿ ಬಂದಿಹರೂ ಬೀಸಾಡಲೂ ಬಂದಿರುವಿಯಾ 15 ಬಂದಿಹರೂ ನಿನಗೊಂದಿಸುವರೂ 16 ಹೆಜ್ಜೆಗೆ ನಿನ್ನ ವಂದಿಸುತಲೀ ಬಾಷ್ಟಗಳ ಸುರಿಸುವರೂ 17 ನಲಿಯುವರೂ ಕುಣಿ ದಾಡುವರೂ 18 ದೋಬಿಕೊಳ್ಳುತ ನೀ ನಿಂತಿರುವೇ ಯಲ್ಲಾನುಕಸಕೊಂಡು ಕಳುಹುವಿಯೇ 19 ತೀರೀತೆಂದು ತಿಳಿಯುತಲೀ ಧನ್ಯರಾದೇವೆನುತ ತೆರಳುತಿಹರೂ 20 ಮೇಲಾದ ಭಕ್ಷಗಳ ಬಡಿಸುವೋರು
--------------
ರಾಧಾಬಾಯಿ
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಸಾಕು ಸಾಕು ಈ ಜನಸಂಗ ಪ ಅದರಿಂದ ಆಗೋದು ವಿಚಾರ ಭಂಗಾ ಅ.ಪ. ನಾಲ್ಕಾರು ತತ್ವಮಾತಿಗೆ ಮರುಳ್ಯಾಗಬ್ಯಾಡ ನಿನ್ನೊಳು ನೀನಾಗಿ ತಿಳಿದುಕೋ ಗಾಢಾನಿನಗೆ ನಾನರುಹುವೆ ಅವರ ಮನೋವೃತ್ತಿ ಗೂಢಾಅನಿಮಿತ್ತವಾಗಿ ಸರಸದಿ ಬಂದು ವಿರಸವ ಮಾಡೋರು ಮೂಢಾ 1 ಪಿರಿಯರು ಪೇಳಿದ ವಾಕ್ಯವನ್ನು ಗ್ರಹಿಸಿ ತ್ಯಜಿಸೋದು ಸತ್ಕರ್ಮ ಬಾಹ್ಯ ವಳಗೆ ನೋಡಲು ತುಂಬಿದೆ ವಿಷಯರಾಶಿ ಜೀಯಾ ಆದ್ದರಿಂದ ನಿನಗೆ ಬೇಡಿಕೊಂಡು ಮುಗಿವೆ ನಾ ಕೈಯ್ಯಾ2 ಸಂತರ ಸಂಗ ಮಾಡಬೇಕು ಅದು ಹ್ಯಾಗೆಂದರೆ ಕಂತೆಯೊಳಗೆ ಉಳ್ಳವರಾಗಬೇಕು ಸಂತೆ ಜನರ ಭಂಗಾ ತಾಳಲು ಬೇಕು ನಮ್ಮ ಸಂತತ ಸುರ ತಂದೆವರದಗೋಪಾಲವಿಠಲನ ದಯಬೇಕು 3
--------------
ತಂದೆವರದಗೋಪಾಲವಿಠಲರು