ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸ್ಥಾನ ಮಾಡೋಣ ಆತ್ಮ ವಿಚಾರ ದಾಸ್ತಾನ ಮಾಡೋಣ ಪ ಸ್ವಸ್ತಿ ಆಯುಷ್ಕೀರ್ತಿ ಧರ್ಮಯಶೋಕಾಮ ಹಸ್ತಿವರದನಾಧೀನವೆಂದು ನಾವೆಲ್ಲಅ.ಪ ಶಮದಮಶ್ಯಾಂತಿ ವಿರಕ್ತ್ಯುಪರತಿಯಂಬೋ ಕ್ರಮಮಂತ್ರಿಗಳು ವಿಜ್ಞಾನಿ ಪ್ರಧಾನಿಯು ಸಮಾಧಿಕ ಶೂನ್ಯವೆಂಬುವ ರಾಜನು ವಿಷಯ ಭ್ರಮೆ ಎಂಬೊ ಕಟ್ಟು ವಿಚಾರಣೆಯಾಗುವ 1 ಸತ್ಕರ್ಮವೆಂಬೊ ಭೂಮಿಯನು ಸಾಧುಗಳೆಂಬ ವಕ್ಕಲುಗಳಿಗಿತ್ತು ಸಿದ್ಧಾಯವ ತೆಗೆದು ಭಕ್ತಿ ಜ್ಞಾನ ವೈರಾಗ್ಯ ಬಂಡಿಗಳಲಿ ತುಂಬಿ ಭಗವಂತನೆಂಬ ರಾಜಗೆ ಒಪ್ಪಿಸುವಂಥ 2 ಸ್ವಾಮಿ ಭೃತ್ಯನ್ಯಾಯ ಎಂಬೋ ಡಂಗುರವನು ಹೊಯಿಸಿ ತಾಮಸರಿಗೆ ನಿತ್ಯದಂಡನೆಯನು ವಿಧಿಸಿ ಕಾಮಕ್ರೋಧಗಳೆಂಬೋ ಖಳರ ಶಿಕ್ಷಿಸಿ ಗುರು- ರಾಮವಿಠಲನ ಕರುಣವೆಂಬೋ ಸಂಬಳ ಪಡೆದು 3
--------------
ಗುರುರಾಮವಿಠಲ
ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ ಪೂಜಾ ಮಾಡೋಣ ಬಾರೆ ಪ. ವನಜನ ನೇತ್ರೆಯ ತ್ರಿಜಗನ್ಮಾತೆ ಪ್ರಖ್ಯಾತೆ ಅ.ಪ. ಅರ್ಥಿಯಿಂದಲಿ ಇಟ್ಟು ಚಿತ್ತದೊಲ್ಲಭನ ಸ್ತುತಿಸಿ ಬೇಡಿಕೊಂಡು ಮತ್ತೆ ನಿಮಗೆ ಕರವೆತ್ತಿ ಪ್ರಾರ್ಥಿಸುತಲಿ 1 ಗಂಧಪುಷ್ಪ ವಸ್ತ್ರಾಭರಣ ಆನಂದ ದೀಪಗಳಿಂದ ಇಂದು ನಾ ಪೂಜಿಪೆ ಮಂದಿರದೊಳು ಆನಂದಭರಿತಳಾಗಿ ಬಾ 2 ರುಕ್ಮೀಶವಿಠಲನ ಪಟ್ಟದ ರಾಣಿ ವಕ್ಷಸ್ಥಳದಲಿನಿಂತು ನಲಿಯುತ ಬಾ ಭಕ್ತಜನರ ಮನೋಭೀಷ್ಟವ ಸಲಿಸುತ ಬಾ 3
--------------
ಗುಂಡಮ್ಮ
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು