ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವರ ನಿನ್ನಯ ಕರ ದುರಿತ ತೃಣಕೆ ನಾ ಮೊರೆಯಿಡಲೇಕೆ ? ಪ ಕರುಣಾಕರನೆಂದು ವರ್ಣಿಸುತಿವೆ ಶ್ರುತಿ | ಕರುಣಿಸೆನುತ ಮತ್ತೆ ಮೊರೆಯಿಡಲೇಕೆ ಅ.ಪ ಪಾವನ ಮಾಡೆನುತಲಿ ಪರುಷಕೆ ಲೋಹಾ | ಸೇವಿಸಲ್ಯಾಕೆ ಹರುಷದಿ ದಿನ ದಿನ | ಸ್ಪರ್ಶವು ಕಾರಣವಲ್ಲದೆ ಅದರೊಳು | ದರುಶನ ನಿರುತದಲಿರುತಿರ ಬೇಕು 1 ಶ್ವೇತ ಮಧ್ಯದಿ ಬಿದ್ದ ಸೂಕ್ತಿಕವದು ತಾ | ಸ್ವಾತಿಯುದಕಕೆ ಜ್ಯೋತಿ ಮೌಕ್ತಿಕವದು | ಪ್ರೀತಿಯಿಂದ ಸವಿ ಮಾತಾಡಬೇಕು 2 ಕತ್ತಲೆಯನು ಪರಿಹರಿಸೆನುತಲಿ | ಮತ್ತೆ ಭಾಸ್ಕರಗೆ ಪ್ರಾರ್ಥಿಸಬೇಕೆ ? | ಕರ್ತೃ ಸದ್ಗುರು ಭವತಾರಕ ಒಲಿದರೆ | ಮಿಥ್ಯವೀ ದೇಹದ ಸಾಧನ ಯಾಕೆ ? 3
--------------
ಭಾವತರಕರು
ಗೋಪೀಮಾನ ರಂಜನ ಶ್ರೀಪತಿ ಕರುಣಾಳು ವ್ಯಾಪಿಸಿಕೊಂಡಿಹ ಮಾಮಕ ತಾಪವ ವೋಡಿಸು ಸುಲಭದಿ ಪ. ಸೌಂದರ್ಯಾಮೃತ ಸಾರಾನಂದಾತ್ಮಕ ದೇಹ ವೃಂದಾರಕ ಗಣ ನಯನಾ ನಂದನ ನಿಖಿಳಾತ್ಮಾತ್ರಯ ನಿತ್ಯಾವ್ಯಯ ಸತ್ಯಾವರ ಭಕ್ತಾಸ್ಪದ ಸುಮುಖ 1 ಸುಭಗಾಂಬುದನಿಭ ಗೋವರ ಋಭುಗಣನುತ ಚರಣಾ ಇಭರಾಟ್ಕøತ ಕರುಣಾಖಿಳ ವಿಭವಾಶ್ರಯ ತರುಣಿಗಣ ಶುಭ ಸಂಚಯ ಕರುಣಾ ನಿಜಭರಣಾದೃತ ಕರಣಾ 2 ಶೃಂಗಾರ ವಿಲಾಸಿನಿಜಾಪಾಂಗಾಹೃತ ಗೋಪಕತ ಸ್ವಂಗೀಕೃತ ಪ್ರೇಮಭವಾಲಿಂಗಿತ ಶುಭಮೂರ್ತಿ ಅಂಗಜಜನಕಾದ್ಭುತ ಸಾರಂಗ ಮಮತ ಶೇಷಗಿರಿ ಶೃಂಗಾಧಿಷ್ಟಿತ ಕರುಣಾಪಾಂಗವ ದಯಮಾಡೆನುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪುಣ್ಯ ಪಡೆಯೆ ನೀನು ಪೂರ್ಣೇಂದುವದನೆ ಪುಣ್ಯ ಪಡೆಯೆ ನೀನು ಪ ಕುಂದಣದಾರತಿ ಬೆಳಗಿ ಅಕ್ಷತೆನಿಟ್ಟು ಆ- ನಂದವಾಗಾಶೀರ್ವಾದ ಮಾಡ್ಹರಸುತಲಿ 1 ಅತಿ ಹರುಷದಿ ಗಂಡು ಸುತರನೆ ಪಡೆದು ನೀ ಪೃಥಿವಿನಾಳೆನುತ ದ್ರೌಪದಿ ಹರಸಿದಳು2 ಅಕ್ಕರದಿಂದ್ಹೆಣ್ಣುಮಕ್ಕಳ ಪಡೆದು ಪ- ಲ್ಲಕ್ಕಿನೇರೆನುತ ದೇವಕ್ಕಿ ಹರಸಿದಳು 3 ಕಟ್ಟಿದ್ದ ಮಾಂಗಲ್ಯ ಕರಿಯ ಕಾಜಿನ ಬಳೆ ಮುತ್ತೈದೆತನಕೆ ಸಾವಿತ್ರಿ ಹರಸಿದಳು 4 ಅನ್ನ ಗೋವ್ಗಳು ಕನ್ಯಾದಾನ ಮಾಡೆನುತ ಸಂ- ಪನ್ನ್ಯಾಗಿರೆನುತ ಅರುಂಧತಿ ಹರಸಿದಳು 5 ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ನೀ ಪಡೆ ಸುಖ ಶ್ರೀಮಹಾಲಕ್ಷ್ಮಿ ಹರಸಿದಳು 6 ಕಾಮಿತ ಫಲ ಇಷ್ಟದಾಯಕನಾದ ಶ್ರೀ ಭೀಮೇಶಕೃಷ್ಣರಾಯನ ಕರುಣದಲಿ 7
--------------
ಹರಪನಹಳ್ಳಿಭೀಮವ್ವ
ವಂದಿಸುವೆವಿಂದು ಮುದದೆ ಶಾರದೆ ಪ. ವಂದಾರುಮಂದಾರೆ ಎಂದೆಂದಿಗೆಮ್ಮೊಳಿರೆ ಸಂದೇಹವಿಲ್ಲದಂತೇ ಸುಸ್ವಾಂತೀ 1 ಮತ್ತೇರಿ ತಲೆಕೆಟ್ಟು ಕತ್ತಲೆಯೊಳು ಬಿದ್ದು ತತ್ತರಗೊಳ್ವೆವಲ್ಲೇ ಕೋಮಲೆ 2 ಹಾಲಹಲದಂಥ ಆಲಸ್ಯದಿಂದ ಬೀಗಿ ಕಾಲೆತ್ತದಂತೊರಗಿರ್ಪೆನೇ ನೊಂದೆನೇ 3 ಕಂದನ ನುಡಿ ಕೇಳು ಒಂದಿಷ್ಟು ದಯೆ ತಾಳು ಕುಂದುಗಳೆನಿಸದೇ ಪೊರೆ ಶ್ರೀಕರೇ 4 ವರಶೇಷಗಿರೀಶನ ಚರಿತಂಗಳನುದಿನ ಸ್ಮರಿಸಿಕೊಂಡಾಡುವಂತೆ ಮಾಡೆನುತೇ ವಂದಿಸುವೆ5
--------------
ನಂಜನಗೂಡು ತಿರುಮಲಾಂಬಾ