ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನೊಳು ನ್ಯೂನವಾರಿಸದೇ ಸಲಹಯ್ಯಾ ಪ ಕಾಮಕ್ರೋಧ ಸಂಗವ ಮಾಡೀ | ತಾಮಸ ಲೋಭದಿ ಮೋಹವ ಕೂಡಿ | ತಾಮದ ಮತ್ಸರದಲಿ ಬೆರೆದಾಡೀ | ನೇಮದಿಗೆಟ್ಟೆ ವೃಥಾಯಕ1 ವಿಷಯೇಂದ್ರಿಯ ಸುಖ ವಿಷಯೆಂದರಿಯದೆ | ವಿಷಯದಿ ನಿಸಿದಿನಗಳೆದೆನು ಹರಿಯೇ | ಕುಶಲದ ಕರ್ಮದ ದಾರಿಯ ವಿಡಿಯೆ | ಘಸಣಿಗೆ ಬಿದ್ದೆನು ಭವದಿಂದ2 ತಂದೆ ಮಹಿಪತಿ ನಂದನ ಪ್ರಾಣಾ | ಮುದದಿ ಕೈಯನು ಪಿಡಿಯಲೋ ಪೂರ್ಣಾ | ಛಂದದಿ ತೋರಿಸಿ ನಾಮದ ಖೂನಾ | ಇಂದಿಗೆ ಧನ್ಯನ ಮಾಡು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ನಿತ್ಯ ಶಾರದಾ ಕೊಡು ಎನಗೆ | ಸಾರುವೆ ನಾ ನಿನ್ನ ಪ ಪುಂಡರೀಕ ನಯನೆ ಪುಂಡರೀಕನ ರಾಣಿ ಪುಂಡರೀಕ ಚರ್ಮಾಂಬರ | ಪುಂಡರೀಕನಾಥನುತೆ ಪುಂಡರೀಕವೆ ನಮಗೆ 1 ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ | ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ | ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ 2 ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ | ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು3
--------------
ವಿಜಯದಾಸ
ಪ್ರೀತಿಯ ಮಾಡನೀತಿಯ ಶುಕವಾಣಿ ಪ್ರೀತಿಯ ಮಾಡ ಚಾತುರ್ಯದಲಿಮುದ್ದು ಮಾತಿನ ಮಾಧುರಿ ಪ್ರೀತಿಯ ಮಾಡು ಪ. ದೇವಿ ರುಕ್ಮಿಣಿ ನಮ್ಮಮ್ಮ ದೇವಕಿ ಸರಿಯಮ್ಮನಾಕುಂದು ನಿನ್ನ ನುಡಿದೆನನಾಕುಂದು ನಿನ್ನ ನುಡಿದ ಅಪರಾಧವ ಭಾವದೊಳಿಡದೆ ಕರುಣಿಸು ಪ್ರೀತಿಯಮಾಡು1 ಅತ್ತಿಗೆ ನೀನಮ್ಮ ಹೆತ್ತತಾಯಿ ಸರಿಯಮ್ಮಅತ್ಯಂತ ನಿನಗೆ ನುಡಿದೆವ ಅತ್ಯಂತ ನಿನಗೆ ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು ಪ್ರೀತಿಯಮಾಡು2 ವಿಗಡ ಬುದ್ಧಿಯಿಂದ ನುಡಿದೆವವಿಗಡ ಬುದ್ಧಿಯಿಂದ ನುಡಿದೆವ ಅತ್ತಿಗೆ ನಿನ್ನಮಗಳು ಜಾನ್ಹವಿಯ ಸರಿಯಮ್ಮ ಪ್ರೀತಿಯ ಮಾಡು3 ಸತ್ಯಭಾವೆ ನಮ್ಮ ಅತಿ ವಿನೋದವಮತ್ತೊಂದು ನೀನು ತಿಳಿಯದೆ ಮತ್ತೊಂದು ನೀನು ತಿಳಿಯದೆ ಅತ್ಯಂತ ಎನಮ್ಯಾಲೆ ಕರುಣವ ಇರಲೆಮ್ಮ ಪ್ರೀತಿಯ ಮಾಡು4 ಸರಸಿಜಮುಖಿ ನಮ್ಮ ಹರುಷ ವಿನೋದವ ವಿರಸ ಮಾಡದಲೆಮನದೊಳು ವಿರಸ ಮಾಡದಲೆ ಮನದೊಳು ರಾಮೇಶನ ಅರಸಿ ನೀನಮಗೆ ದಯಮಾಡು ಪ್ರೀತಿಯ ಮಾಡು5
--------------
ಗಲಗಲಿಅವ್ವನವರು
ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರÀಮಾ ಉದಿಸಲಿ 1 ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ 2 ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3 ನೀನಲ್ಲದೆ ತುಲಾ ಕಾವೇರಿಯೊಳಗೆ ಸ್ನಾನ ಜಪ ತಪಗಳು ಮಾಡುವದೇಕೆ ಸಿರಿ ಪ್ರಾಣರಿಗೆ ಪ್ರಾಣನಾದ ಬಲು ಮೋಹನಾ 4 ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ ಲೋಕ ಚರಿಸುವದೇನು ನಿನ್ನ ಪೋಗಾಡಿ 5 ಧವಳಗಂಗಿಯೊಳಂದು ಬಿದ್ದು ಬಂದಾಗ ಕವಿ ವಾದಿರಾಜಗೊಲಿದು ಬರಲಿಲ್ಲವೇ ಅವರ ದಾಸಾನುದಾಸನು ಸತತ ನಾನು ತವಕದಿಂದಲಿ ಬಾರೊ ಭಕ್ತವತ್ಸಲಾ6 ಅರ್ಚಿಸಬಲ್ಲನೆ ದೇವ ನಿನ್ನನುದಿನಾ ಗಚ್ಚರಿತವಂದಲ್ಲವೆ ಮತ್ತಾವದರಿಯೆ ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
--------------
ವಿಜಯದಾಸ