ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನಾಗು ಹರಿಯ ದಾಸನಾಗು ಮೋಸಹೋಗದೆ ಭವಕೆ ಬ್ಯಾಸರಾಗು ಪ ಭಾನುಮಂಡಲ ಕಂಡು ಶ್ವಾನನುಬ್ಬರಿಪಂತೆ ಭೂನಾಥನಡಿವಿಡಿದು ಬಾಳ್ವೆ ನಿನಗೆ ಹೀನಮಾನವ ಕಂಡಣಕೆ ನುಡಿದರು ಸರಿಯೆ ಜ್ಞಾನನಿಧಿ ಹರಿಭಕುತಿಯ ಲೆಕ್ಕಿಸದೆ ಮಾಡು1 ಕಾಳುವೆಗ್ಗಳವಾಗೆ ಸುಮತಿ ಸಂಗ್ರಹಿಪಂತೆ ಬಾಳುವೆಯೊಳ್ಹರಿಸೇವೆ ಬಲು ಅಗ್ಗವಂತೆ ಕೀಳು ಜನರಲ್ಲಿ ಲೌಕಿಕತೆ ಮರುಳಾಗಿ ಸಂತೆ ಕೇಳುವವರಾರು ಹರಿಭಕುತಿ ಮಾಡುವವರು2 ಮಾರಿಗಾಹುತಿಯಾಗ್ವ ಕುರಿಮೇಕೆ ತೆರನಂತೆ ಘೊರ ಜವನನು ಮರೆತು ಕೊಬ್ಬುವವರಂತೆ ಶೇರು ನರಸಿಂಹವಿಠ್ಠಲನಂಘ್ರಿಕಮಲವಾ ಆರಾರು ಬಾಧೆಯಿಲ್ಲದೆ ಗತಿಯ ಕೊಡುವಾ 3
--------------
ನರಸಿಂಹವಿಠಲರು
ಪ್ರೀತಿಯ ಮಾಡನೀತಿಯ ಶುಕವಾಣಿ ಪ್ರೀತಿಯ ಮಾಡ ಚಾತುರ್ಯದಲಿಮುದ್ದು ಮಾತಿನ ಮಾಧುರಿ ಪ್ರೀತಿಯ ಮಾಡು ಪ. ದೇವಿ ರುಕ್ಮಿಣಿ ನಮ್ಮಮ್ಮ ದೇವಕಿ ಸರಿಯಮ್ಮನಾಕುಂದು ನಿನ್ನ ನುಡಿದೆನನಾಕುಂದು ನಿನ್ನ ನುಡಿದ ಅಪರಾಧವ ಭಾವದೊಳಿಡದೆ ಕರುಣಿಸು ಪ್ರೀತಿಯಮಾಡು1 ಅತ್ತಿಗೆ ನೀನಮ್ಮ ಹೆತ್ತತಾಯಿ ಸರಿಯಮ್ಮಅತ್ಯಂತ ನಿನಗೆ ನುಡಿದೆವ ಅತ್ಯಂತ ನಿನಗೆ ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು ಪ್ರೀತಿಯಮಾಡು2 ವಿಗಡ ಬುದ್ಧಿಯಿಂದ ನುಡಿದೆವವಿಗಡ ಬುದ್ಧಿಯಿಂದ ನುಡಿದೆವ ಅತ್ತಿಗೆ ನಿನ್ನಮಗಳು ಜಾನ್ಹವಿಯ ಸರಿಯಮ್ಮ ಪ್ರೀತಿಯ ಮಾಡು3 ಸತ್ಯಭಾವೆ ನಮ್ಮ ಅತಿ ವಿನೋದವಮತ್ತೊಂದು ನೀನು ತಿಳಿಯದೆ ಮತ್ತೊಂದು ನೀನು ತಿಳಿಯದೆ ಅತ್ಯಂತ ಎನಮ್ಯಾಲೆ ಕರುಣವ ಇರಲೆಮ್ಮ ಪ್ರೀತಿಯ ಮಾಡು4 ಸರಸಿಜಮುಖಿ ನಮ್ಮ ಹರುಷ ವಿನೋದವ ವಿರಸ ಮಾಡದಲೆಮನದೊಳು ವಿರಸ ಮಾಡದಲೆ ಮನದೊಳು ರಾಮೇಶನ ಅರಸಿ ನೀನಮಗೆ ದಯಮಾಡು ಪ್ರೀತಿಯ ಮಾಡು5
--------------
ಗಲಗಲಿಅವ್ವನವರು
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು