ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುತಿ ಮಾಡುವೆನಾ ಕೃಷ್ಣಮೂರುತಿಗೆ ಪ ಆರುತಿ ಮಾಡುವೆ ನಾರಿ ದ್ರೌಪದಿಗೆ ಸೀರಿಗಳುಡಿಸಿದ ಮಾರಪಿತಗೆ ಸಖಿ ಅ.ಪ ಅಂಗುಟಾಗ್ರದಿಂದ ಗಂಗೆಯ ಪಡೆದಂಥ ಮಂಗಳಪ್ರದ ಶಿರಿರಂಗನ ಚರಣಕೆ1 ಭವ ಬಂಧವ ಬಿಡಿಸುವ ನಂದಗೋಪನ ಮುದ್ದು ಕಂದ ಶ್ರೀಕೃಷ್ಣಗೆ 2 ಆರಾದಿಸುವ ರಘ ದೂರಮಾಡುವ ಶÀುಭ ಕಾರಿ ಕೊಪ್ಪರ 'ಸಿರಿನಾರಶಿಂಹಗೆ ' ಬೇಗ 3
--------------
ಕಾರ್ಪರ ನರಹರಿದಾಸರು
ಉರುಟಣಿಯಾ ಸರಸಿಜನಾಭಾಗ್ಹರುಷದಲಿ ಮಾಡುವೆನಾ ಪ ಶಂಖಚಕ್ರಧರಾ ವೆಂಕಟೇಶ ನಿಮಗೆ | ಕುಂಕುಮ ಹಚ್ಚುವೆ ಪಂಕಜಾಕ್ಷಿ ನಾ 1 ನಂದಗೋಪಿಕಂದ ಹಚ್ಚುವೆ ಗಂಧ ಹಚ್ಚುವೆ ಸುಗಂಧ | ಮುಕುಂದಗೆ 2 ಯಶೋದೆಯ ಬಾಲಾ ಕಾಮಿತಶೀಲಾ ಹಾಕುವೆನು ಮಾಲಾ ಗೋಪಾಲಗೆ 3 ಪೊಡವಿ ಪಾಲಿಪಾ | ಕಡಲಶಯನಾ | ಕೊಡುವೆನು ವಿಡಾ ಪಿಡಿ ಬೇಗನೆ 4 ಪೊಡವಿ ಪಾಲಿಪಾ ಕಡಲಶಯನಾ | ವಂದಿಸಿ ಪ್ರಾರ್ಥನೆಗೈಯುವೆನಾ 5
--------------
ಶಾಮಸುಂದರ ವಿಠಲ
ಗಂಡನೆ ಪ್ರಾಣಗಂಡನೇ ಪ ತಿಂಡಿಬಟ್ಟೆಗೆ ತಂದು ಹಾಕದೆ ಜಿಣುಗುವಅ.ಪ ಲಿಬ್ಬಿಯಿದ್ದರೆ ತೆಗೆದು ತಾರೆಂಬನು ಅಬ್ಬರಿಸುತ ಕೂಗಿ ಕೈಯ್ಯೆತ್ತಿ ಬರುವನು ಒಬ್ಬರಗೊಡವೆ ನಮಗ್ಯಾಕೆ ಎಂಬುವನು 1 ಸೀರೆ ಕುಪ್ಪಸಕೇಳೆ ಚೀರುತ್ತಯಿಲ್ಲೆಂಬ ಯಾರೆ ನಿನಗೆ ಬಲಯೆಂಬುವನು ಸೋರುವ ಮನೆಯಂತೆ ಎನ್ನ ಸಂಸಾರ 2 ಬಟ್ಟೆ ಮಾತಿನ್ನೇನು ಯಣ್ಣೆಕಾಣದು ತಲೆಯೇನ್ಹೇಳಲಿ ಕಣ್ಣುಕಾಣದೆ ನಮ್ಮಪ್ಪಯಿವಗೆ ಕೊಟ್ಟ ಗನ್ನಘಾತಕನಿವ ಕಲಿಕಾಲಜಗಳ 3 ಓದುಬರಹಗಳೆಂಬ ಹಾದಿಯ ತಾಕಾಣ ಆದದ್ದಾಗಲಿಯಿನ್ನೇನು ಮಾಡುವೆನಾನು 4 ಇರುಳು ಹಗಲುಯನ್ನ ಕರೆಕರೆ ಪಡಿಸುವ ಚರಣಕಮಲವೆನಗೆ ದೊರೆಯುವುದ್ಹ್ಯಾಗೆ 5
--------------
ಗುರುರಾಮವಿಠಲ
ಭಕ್ತ ಪ್ರಹ್ಲಾದಗೆ ಆರುತಿ ಮಾಡುವೆನಾ ಪ ಆರುತಿ ಮಾಡುವೆ ನಾರಿಯ ಗರ್ಭದಿ ನಾರದ ಮುನಿಯಿಂದ ನಾರವ ಪಡೆದಗೆ ಅ.ಪ ಶಾಲೆಯೊಳಗೆ ದೈತ್ಯ ಬಾಲಕರಿಗೆ ಸಿರಿ ಲÉೂೀಲನೆ ಪರನೆಂದು ಪೇಳಿದ ಬಾಲಕಗೆ 1 ನಂದತೀರ್ಥರ ಮತಸಿಂಧುವಿಗೆ ಪೂರ್ಣ ಚಂದ್ರನೆಂದೆನಿಸಿದ ಚಂದ್ರಿಕಾರ್ಯರಿಗೆ 2 ವಂದಾರು ಜನರಿಗೆ ಮಂದಾರನೆನಿಸಿದ ನಂದದಾಯಕ ಸುಧೀಂದ್ರಕುಮಾರಗೆ 3 ವೃಂದಾವನದೊಳಗೆ ನಿಂದು ಶೇವಕಜನ ವೃಂದಾಪಾಲಕ ರಾಘವೇಂದ್ರಯತೀಂದ್ರಗೆ 4 ಧರೆಯೊಳು ಶರಣರ ಪೊರೆವ ಕಾರ್ಪರ ನರಹರಿ ಯ ನೊಲಿಸಿದಂಥ ಪರಿಮಳಾಚಾರ್ಯರಿಗೆ5
--------------
ಕಾರ್ಪರ ನರಹರಿದಾಸರು