ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ ಸಾಕಯ್ಯ ಇಲಿ ಬೆಕ್ಕಿನಾಟಾ ಪ ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ 1 ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ 2 ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ವೀರನಾರಾಯಣನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ 3
--------------
ವೀರನಾರಾಯಣ
ಗುರುವ ನೆನೆದರೆ ಸಾಲದೆ ಚಿದಾನಂದಗುರುವ ನೆನೆದರೆ ಸಾಲದೆಹಿರಿದು ಸಂಸಾರಗಳು ಮಾಡುತ್ತೊಂದುದಿನಕ್ಕೊಮ್ಮೆ ಗುರುವ ನೆನೆದರೆ ಸಾಲದೆ ಪ ಜುಟ್ಟು ಜನಿವಾರ ಬಿಸುಟು ತಾವೀಗಉಟ್ಟೊಂದು ಕೌಪೀನವಕಟ್ಟಿ ಕಾಷಾಯ ಕಮಂಡಲು ದಂಡ ಹಿಡಿದುದಿಟ್ಟ ಸಂನ್ಯಾಸ ಪಡೆಯುವುದೇಕೆ1 ಅಡವಿ ಅರಣ್ಯವ ಸೇರಿ ಅಲ್ಲಿದ್ದಅಡವಿ ತೊಪ್ಪಲನೆ ತಿಂದುಗಿಡ ಮರಗಳಲಿ ಮಲಗಿ ಮಳೆ ಛಳಿಗೆ ಕಂಗೆಡೆದೆ ಕಡು ತಪವ ಮಾಡುವುದೇಕೆ2 ಚರಿಯ ಬೇಡುವುದೇಕೆ 3 ಕಾವಿ ವಸ್ತ್ರಗಳನುಟ್ಟು ಮೈಗೆಲ್ಲತಾ ವಿಭೂತಿಯ ಧರಿಸಿ ಕಂಠದಲಿತೀವಿ ರುದ್ರಾಕ್ಷಿ ತಾಳಿ ಶಿವಶಿವಾಯೆಂದುತಾವು ಗೊಣಗುವುದೇಕೆ 4 ಜ್ಞಾನಿಗೀಯವಸ್ಥೆಯಾ ವೇಷಗಳು ತಾವು ಇವಗೇನು ಇಲ್ಲಿಲ್ಲ ತಾನೆ ಚಿದಾನಂದ ಗುರು ತಾನೆ ತಾನೇ ಎಂದು ಭಾವಿಸುತಲಿತೀವಿ ತನ್ನನೇ ಮರೆತಿರಲದೇಕೆ5
--------------
ಚಿದಾನಂದ ಅವಧೂತರು
ನರಕ ಎತ್ತಣದೋ ನರಕ ಎತ್ತಣದೋ ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ ದಾನ ಧರ್ಮಂಗಳು ಮಾಡಲೇಕೆ ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ ತ್ರಾಣದಲಿ ಬಿಡದೆ ಎಣಿಸುವ ಜನರಿಗೆ1 ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ 2 ದೀಪ ಧೂಪಗಳೇಕೆ ನಾನಾ ಪರಿಯಲ್ಲಿ ಸೋಪಸ್ಕರದ ಎಡೆ ಇಡಲೇತಕೆ ಅಪಾರ ಮಹಿಮ ಅನಾಥರೊಡೆಯ ರಂಗ ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ 3 ಭೂತದಯಗಳೇಕೆ ನೀತಿ ಎಂಬುದು ಏಕೆ ಜಾತವೇದಸನಲ್ಲಿ ಕಳವಳವೇಕೆ ಪಿನಾಕಿ ಸಖನೆಂದು ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ 4 ಏನೇನು ಕರ್ಮದಾಚರಣೆ ಮಾಡುವದೇಕೆ ಭಾನು ಉದಯವಿಡಿದು ತೊಳಲಲೇಕೆ ದೀನನಾಗಿ ದಾತಾ ವಿಜಯವಿಠ್ಠಲ ಹರಿಯ ಮಾನಸದಲಿ ಧ್ಯಾನ ಮಾಡುವ ಜನರಿಗೆ 5
--------------
ವಿಜಯದಾಸ
ಯಾಕೆಂದು ದಣುಕೊಂಡಿರಿ ಸುಮ್ಮನೆ ವೃಥಾ ನಾಮವೊಂದಿದ್ದಮೇಲೆ ಪ ಕಣ್ಣಾಣದವರವೋಲು ತಿರುಗುವಿರಿ ಚರಿಸುತಿದ್ದಾಮೇಲೆ 1 ಘಾಸಿ ಮಾಡುವುದೇಕೆ ದೇಹವನು ನೆಲೆಯನು ತಿಳಿಯದೆ 2 ತನ್ನಯ ಮಂದಿರವು ತನುವಿದುಸ್ಥಿರವಲ್ಲ ತೃಣವಿತ್ತು ಸಾರಿದೆ 3 ಸುಟ್ಟು ಹುಡಿಹುಡಿಗೊಂಬ ಶರೀರವನ್ನು ಬಡಿವಾರ ತರವಲ್ಲ 4 ಮತಿಗೆಟ್ಟು ಸುಮ್ಮನೆ ತೊಳಲದಿರು ಜ್ಯೋತಿಯ ಕೂಡುಕಂಡ್ಯಾ 5
--------------
ಕವಿ ಪರಮದೇವದಾಸರು
ದಾಸನ ಮಾಡಿಕೋ ಎನ್ನ - ಇಷ್ಟುಗಾಸಿಮಾಡುವುದೇಕೆ ದಯದಿ ಸಂಪನ್ನಪದುರುಳಬುದ್ದಿಗಳೆಲ್ಲ ಬಿಡಿಸೋ - ನಿನ್ನಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||ಚರಣದ ಸೇವೆಯ ಕೊಡಿಸೋ - ಅಭಯ-ಕರಮೇಲಿನಕುಸುಮಶಿರದ ಮೇಲಿರಿಸೋ1ದೃಢಭಕ್ತಿಯಿಂದ ನಾ ಬೇಡಿ - ನಿನ್ನಅಡಿಯೊಳೆರಗುವೆನಯ್ಯಅನುದಿನಪಾಡಿ ||ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆಕೊಡು ನಿನ್ನಪರಭಕ್ತಿಮನ ಮಡಿ ಮಾಡಿ2ಮೊರೆಹೊಕ್ಕವರಕಾವಬಿರುದು ನೀನುಕರುಣದಿ ರಕ್ಷಣೆ ಮಾಡೆನ್ನ ಪೊರೆದು ||ದುರಿತರಾಶಿಗಳೆಲ್ಲ ತರೆದು ಒಡೆಯಪುರಂದರವಿಠಲನೆ ಹರುಷದಿ ಕರೆದು 3
--------------
ಪುರಂದರದಾಸರು