ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನ ಸುದಿನ ನಾಳೆಗೆಂದರೆಂದು ಕಠಿಣ ಮಂದಮತಿಯು ನೀನಾಗದೆ ಈಗ ಮುಕುಂದನ ನಾಮ ಕೀರ್ತನೆಯ ಮಾಡುವುದಕೆ ಪ ಯೋಗಿಗಳೊಡನಾಡು ವಿಷಯದ ಭೋಗವ ನೀಡಾಡು ನಿನ್ನ ನೀ ತಿಳಿವುದಕೆ 1 ಅಸ್ಥಿರ ದೇಹವಿದುನಾನಾವಸ್ಥೆ ಬಾಧಿಸುತಿಹುದು ಬಿಡನೊಡನಾಡುವುದಕೆ 2 ಸಾಧು ಸಂಗತಿಯಿಂದ ಪಾಪವಿಚ್ಛೆದನವದರಿಂದ ಲಕ್ಷ್ಮೀರಮಣನ ಪೂಜಿಸಲಿಕೆ 3
--------------
ಕವಿ ಪರಮದೇವದಾಸರು
ನಿನ್ನ ಪೂಜೆ ಮಾಡುವುದಕನಾನುಕೂಲವು ಪ ಎನ್ನದೇಹ ಪೋಷಣೆಗೆ ಎಲ್ಲ ಇರುವದು ಅ.ಪ ತಾನು ಉಡುವುದಕ್ಕೆ ಹೆಚ್ಚುಧನದ ವಸ್ತ್ರವು ದಾನ ಮಾಡುವುದಕೆ ನೀಚÀತರದ ಅರುವೆಯೂ 1 ಘನ್ನಲೋಕ ಮಾತೆಗೆ ಗಿಲೀಟು ನಗಗಳು 2 ಯಜಮಾನಗೆ ಘೃತದ ಪಕ್ವ ಭಕ್ಷ್ಯ ಭೋಜ್ಯವು ಇತರ ಜನರಿಗೆಲ್ಲ ಎಣ್ಣೆಕರಿದ ಭಕ್ಷ್ಯವು 3 ದೇಹ ಸಂಬಂಧಿಗಳಿಗೋಸುಗ ಸಾಲಗೈವುದು ಶ್ರೀಹರಿ ನಿನ್ನವರು ಕೇಳೆ ಇದ್ದರು ಇಲ್ಲವೂ 4 ಅನ್ಯಜನರೊಳಿದ್ದಗುಣವು ದೋಷವೆಣಿಪುದು 5 ಪರಿ ತಿಳಿದು ಕೊನೆಗೆ ನರಕ ಹೊಂದುತ 6 ಘನಮಹಿಮೆ ಗುರುರಾಮವಿಠಲ ನಿನ್ನ ಮರೆವರು 7
--------------
ಗುರುರಾಮವಿಠಲ
ಪಾಲಿಸೊ ಎನ್ನ ಗಣಪತಿಯೆ ಪ ಆಲಿಸು ಎನ್ನ ವಿಜ್ಞಾಪನೆಯನು ನೀಂ ಅ.ಪ ಮೂಷಿಕವಾಹನ ಮುನಿಜನ ಪೋಷಣ ಶೇಷಾಭರಣ ವಿಶೇಷ ಮಹಿಮನೆ 1 ಅಂಬಾಸುತ ಹೇರಂಭ ನಿನ್ನಯ ಪಾ- ದಾಂಬುರುಹವ ನೆರೆ ನಂಬಿದೆ ಜೀಯ 2 ಗುರುರಾಮವಿಠಲ ಸ್ಮರಣೆ ಮಾಡುವುದಕೆ ನಿರ್ವಿಘ್ನತೆ ಕೊಡು ಕರುಣವಾರಿಧಿಯೆ3
--------------
ಗುರುರಾಮವಿಠಲ
ಸಕಲ ಕರ್ಮಗಳ ಮಾಡಿ ಮಾಡಿಸುವೆ ನೀನು ಪ ವಿಕಳಮತಿಗಳಿದನರಿಯರೇನೆಂಬೆ ನಾನು ಅ.ಪ. 'ತೇನವಿನಾ ತೃಣಮಪಿ ನ ಚಲತಿ' ಎಂಬುದನು ಆನುಪೂರ್ವಕದಿಂದ ತಿಳಿದು ತಿಳಿಯದಂತೆ ತಾನು ಪುಣ್ಯಕರ್ಮಗಳನು ಮಾಳ್ಪವನೆಂದು ನೀನು ಪಾಪಕೆಳಸುವೆನೆಂಬರಧಮ ಜನರು 1 ವಿಧಿವಿಹಿತ ಕರ್ಮಗಳನು ಮಾಡಿಸುವಾತ ಹರಿಯು ಆಧುನಿಕ ಕರ್ಮಗಳಿಗೆ ಕರ್ತೃ ತಾನೆ ಎಂದು ಅಧಮ ಕಾರ್ಯಗಳ ಮಧುವೈರಿಗಾರೋಪಿಸದೆ ನಿಧನರಾಗಿಹ ಜನರು ಮಧ್ಯಮರೆನಿಸುವರು 2 ಪಾಪ ಪುಣ್ಯ ಕರ್ಮಗಳೇನು ಮಾಡುವುದಕೆ ಶ್ರೀಪತಿ ರಂಗೇಶವಿಠಲ ಪ್ರೇರಕನಲ್ಲದೆ ವ್ಯಾಪಾರ ತನಗಿನಿತಾದರಿಲ್ಲವೆಂದರಿತು ಲೇಪರಹಿತರಾಗಿಹರೆ ಉತ್ತಮರಯ್ಯಾ 3
--------------
ರಂಗೇಶವಿಠಲದಾಸರು