ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಆರು ರಾಗ:ನಾಟಿ ಝಂಪೆತಾಳ ಅಘಟ್ಯಘಟಿನಾಟ್ವೀ ಪುಲಿಂದಾ ಶ್ರೀಪತೇಸ್ತನುಃ ನೃಪಜಾಸ್ಮರಪೀಡಾಂ ತಾಂ ಕಥಯಂತೀ ಹರೇದಘಮ್ ನಿತ್ಯ ಸಂತೋಷ ಜಯತು ಜಯ ಲಕ್ಷ್ಮೀಶಾ ವೆಂಕಟೇಶಾ 1 ಪದ್ಮಜಾಕೃತಯಾತ್ರೆ ಪ್ರದ್ಮವಿಕಸಿತ ನೇತ್ರಾ ಪ್ರದ್ಮಾಜಾಸನ ಮುಖ್ಯ ಪದ್ಮನಾಭಾಖ್ಯ 2 ಗುರ್ವನುಗ್ರಹ ಗಮ್ಯ ಗುರುಗುಣಾರ್ಣವಸೌಮ್ಯ ಗುರ್ವನಂತಾದ್ರೀಶ ಗುರುಸುಪ್ರಕಾಶ3 ವಚನ ಪುರುಷನ ಪಾದ ನಿತ್ಯ ಮರೆಯದಲೆ ಮನದಲ್ಲಿ ಕರವ ವರಬುದ್ಧಿಯಲಿ ಎನ್ನ ಶಿರಮೆಟ್ಟಿ ಕರಮುಗಿದು ಕೊರವಂಜಿ ಕಥೆಯ 1 ಮುನ್ನಾಗಿ ನಾರೀಕುಲ ತನ್ನ ಕಾರ್ಯಕೆ ಕಳುಹಿ ಎನ್ನ ಕಾರ್ಯಕೆ ಅನ್ಯ ತನ್ನ ಕಾರ್ಯವು ಮತ್ತೆ ಮಾಡುವರಲ್ಲ ಚನ್ನವಾಗಿ2 ಉಬ್ಬುಬ್ಬಿ ವನಿತೆಯರು ಈ ರೀತಿ ಅವಲಂಬಿ ಗಂಭೀರಕೊರವಿ ಮುಖ ಬಾಯ್ವಳಗ್ಹಲ್ಲು ಎಂಬುವದು ಒಂದಿಲ್ಲ ಲಂಭಕರ್ಣಗಳಿಹವು ಲಂಭಕುಚಗಳು ಮತ್ತ ಲಂಬೋದರಿ ಯೆನಿಸಿಕೊಂಬುವಳು ತಾನು 3 ಜಡೆಗಳ ಧರಿಸಿ ಧೀರ ಮಾಡಿ ಸಾರ ಚಾರುನವಧಾನ್ಯಗಳ ಪೂರ ಚಾರು ತಿಲಕವನಿಟ್ಟು ಹಾರ ಗೀರುಕಂಕಣ ಕೈಗೆ ಚಾರು ತಾ ಐವತ್ತು ಪೂರ ವಯದವಳಾಗಿ ತೋರುತಿಹಳು4 ಮಣಿ ಮಾಲೆಗಳ ಧರಿಸಿ ಮಣಿ ಮೇಲೆ ಕರ್ಪೂರ ಮಣಿಯು ಮೇಲೆ ಸಾಲ್ಹಿಡಿದು ವಿವಿಧಮಣಿ ಬಾಲಕನ ಉಡಿಯಲ್ಲಿ ಕೋಲು ಕೈಯಲಿ ಪಿಡಿದು ನಡೆದಳಾಗ 5 ರಾಗ:ಶ್ರೀರಾಗ ಆದಿತಾಳ ಗಿರಿಯಿಂದಲಿ ನಾರಾಯಣ ಪುರಕೆ ಬಂದಳು ಪುರದ ಬಾಗಿಲುಗಳನ್ನೆಲ್ಲ ತ್ವರದಿ ದಾಟಿದಳು ತಿರವಿದ ಸೆರಗು ತಿರುಗಿ ಹೊದೆಯುತಲೆ ತಿರುಗಾಡುತ ಬಂದಳು ತಿರುಕೊಂಬುವರಂತೆ ಮನೆ ಮನೆ ಬಾಗಿಲನು ಮೆಟ್ಟುತಿಹಳು ಮನಸಿಗೆ ಬಂದ್ಹಾಂಗೆ ಧ್ವನಿಮಾಡುತಿಹಳು ಮನಗೊಟ್ಟು ಕೇಳಿರಿ ಎನ್ನ ತಾಯಿಗಳಿರಾ ಮನದ ಮಾತುಗಳ್ಹೇಳುವೆ ಮನೆಯವ್ವಗಳಿರಾ 1 ಹಿಂದಾದದ್ದು ಹೇಳೇನು ಇಂದಾದದ್ದು ಮತ್ತೆ ಚಂದಾಗಿ ಪೇಳೇನು ಮುಂದಾಗುವದೆಲ್ಲಾ ಹಿಂದಕ್ಕೆ ನಾ ಬಹಳ ಮಂದಿಗ್ಹೇಳಿದೆನು ಒಂದೂ ಸುಳ್ಳಾಗಿಲ್ಲ ಸಂದೇಹವಿಲ್ಲ 2 ಸಾಮಭೇದವ ಬಲ್ಲೆ ಸಾಮುದ್ರಿಕಿ ಬಲ್ಲೆ ಹೈಮಾದಿ ಜ್ವರಕೌಷಧ ನಾ ಮಾಡಲು ಬಲ್ಲೆ ಕಾಮಿನಿಯರಿಗಾದ ಕಾಮಜ್ವರ ಬಲ್ಲೆ ಕೌಮಾರಿಗಳಿಗಂತು ನಾ ಮುಂಚೆ ಬಲ್ಲೆ 4 ಭೂತ ಬಿಡಿಸಲು ಬಲ್ಲೆ ಬೇತಾಳವ ಬಲ್ಲೆ ಮಾತಾಡದ ಮೂಕರನು ಮಾತಾಡಿಸಬಲ್ಲೆ ನೀತಿನುಡಿಗಳ ಬಲ್ಲೆ ಜ್ಯೋತಿಷ್ಯವ ಬಲ್ಲೆ ಕೂತು ಕೇಳಿದರೆಲ್ಲ ಮಾತ್ಹೇಳಲು ಬಲ್ಲೆ5 ಹಸನಾಗಿ ಪೇಳುವೆ ಕುಶಲಾದವಾಣಿ ಹುಸಿಯಲ್ಲವಿದು ಎನ್ನ ಹಸುಗೂಸಿನಾಣಿ ಅಸು ಹೋದರು ನಾನಲ್ಲ ಹುಸಿಯಾಡುವ ಕೊರವಿ ವಸುಧೆಯೊಳಗೆ ನಾ ಹೆಸರಾದ ಕೊರವಿ6 ನರನಾರಾಯಣಲಿ ಇರುವಂಥ ಕೊರವಿ ವರನಂತಾದ್ರೀಶನ ನೆರವುಳ್ಳ ಕೊರವಿ ಕೊರವಿ ಮಾತನು ಕೇಳಿ ಪುರದ ನಾರಿಯರು ಅರಸನ ರಾಣಿಗೆ ತ್ವರದಿ ಪೇಳಿದರು7 ರಾಗ:ಪೂರ್ವಿರಾಗ ಭಿಲಂದಿ ತಾಳ ಬಂದಳಮ್ಮ ಇಲ್ಲೆ ಜನರು ನೆರೆದು ಬಹಳ ಆತುರ ಪಟ್ಟು ಕೇಳುತಿಹರÀುಪ ಮಾತನಾಡುತಿಹಳು ಮುದದಿ ಕೇಳಿ ದ್ಹೇಳುವಳು ಮುದಕಿಯಾಗಿ ತೋರುತಿಹಳು 1 ತನ್ನ ಮಕ್ಕಳಾಣೆ ಕೊಡುತಿಹಳು 2 ನರನಾರಾಯಣರು ಎಲ್ಲಿ ಇವರೊ ಅಲ್ಲೆ ಇರುವಳಂತೆ ವರದನಂತಾದ್ರೀಶ ಕೊಟ್ಟ ವರವುಳ್ಳ ಕೊರವಿಯಂತೆ 3 ರಾಗ:ಕನ್ನಡ ಕಾಂಬೋದಿ ಅಟತಾಳ ಬೇಗ ಅರಸನ ಪಟ್ಟದ ರಾಣಿ ಪನ್ನಗವೇಣಿ 1 ತಿರುಗಿ ಬಂದರು ಮತ್ತಲ್ಲೆ ಕೊರವಿ ಇದ್ದಲ್ಲೆ 2 ಎಂದು ಕರೆದರು ಕಯ್ಯ ಬೀಸುತ ಕಣ್ಣುತಿರುವುತ 3 ನುಡಿದಾಳೀಪರಿ ವಾಣಿ ಮಾತಿನ ಜಾಣೆ 4 ಆಕೆ ಸೌಭಾಗ್ಯದ ಒಡವಿ ಹುಟ್ಟನಾ ಬಡವಿ 5 ನೋಡಿ ಎನ್ನ ಒಡವೆಯ ನೋಡಿರಿ ಮಾತನಾಡಿರಿ 6 ಎನ್ನ ಕರಿದಾಳೆಂಬುವದು ಅಪಹ್ಯಾಸವಿದು 7 ನಕ್ಕು ಮಾತಾಡುವಿರಾ ಬಂಡು ಮುದಕಿಯ ಕಂಡು 8 ಅಂಜಿ ಮಾತಾಡಿದರಾಗ ವಿನಯದಿ ಬೇಗ9 ಒಮ್ಮೆಗಾದರುದಕ್ಕೀತೆ ಆಡೋದು ರೀತೆ10 ಬಂದು ನಡೆದಳು ಮುಂದೆ ಆನಂದದಿಂದ11 ಅರಮನೆಗೆ ಬಾಗಿಲೊಳಗೆ ಅಂಗಳದೊಳಗೆ 12 ಕೋಲುಕೋಲೆಂದು ಪಾಡುವಳು ಮಾಯಾತೋರುವಳು 13 ರಾಗ:ಶಂಕರಾಭರಣ ಆದಿತಾಳ ಕೋಲೆನ್ನ ಕೋಲು ಲೀಲೆಕೊಂಡಾಡುತಲಿ ಪ ಭರದಿಂದೊದೆಯುತಿರೆ ತಿರುಗಿ ಕಾಲ್ಹಿಡಕೊಂಡು ಪರಿಪರಿಸ್ತುತಿಸಿದಾ 1 ನೋಡಿ ಸಹಿಸದೆ ಕೊಲ್ಲಾಪುರಕೆ ನಡೆದಳು 2 ಹರಿ ವೈಕುಂಠದಿಂ ಧರೆಗಿಳಿದನು 3 ಹುತ್ತಮನೆಯ ಮಾಡಿ ಗುಪ್ತದಲ್ಲಿರುತಿಹ4 ನೆತ್ತಿಯ ಒಡಕೊಂಡು ಭಕ್ತನ ಸಲುಹಿದೆ 5 ಗುರುವಕರೆದ ಅವನಿಂದ ತಲೆ ಗಾಯವ ಕಳೆದನು 6 ತಾ ಬೇಡಿ ಸ್ವಾಮಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು 1 ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ2 ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ | ಮರಳೆ ಮಾತಾಡಿದರೆ ಅಪರಾಧ ಹೊರಿಸುವರು 3
--------------
ವಿಜಯದಾಸ
ಛೀ ಛೀ ಛೀ ಛೀ ಪ ಬಿಟ್ಟು ಕೊಡೋ ನೀ ಸಂಸಾರ ಭ್ರಾಂತಿ | ಎಷ್ಟು ಸೋಸುವಿ ದುಃಖದ ಪಂಥಿ | ಅಷ್ಟು ಪಾಶದೀ ಬಿಗಿದಿಹ ಗ್ರಂಥಿ | ಕಷ್ಟ ಪಟ್ಟಿನ್ನು ಮಾಡುವಿ ಚಿಂತಿ 1 ಸತಿ ಸುತರೆಲ್ಲಾ | ಘನ್ನಸ್ನೇಹವ ಮಾಡುವರಲ್ಲಾ | ಧನ ಯೌವನ ಕೊರತ್ಯಾಗಿ ಸೊಲ್ಲಾ | ತೃಣ ಸಮಮಾಡಿ ಬಗೆವರು ಖುಳ್ಳಾ 2 ಹಳೆದಾಯಿತು ತಾಳಿದ ಕಂಥೀ | ಬಲವಿಂದ್ರಿಯ-ವಾದವು ಶಾಂತಿ | ಬಲು ನೆರೆಯಿತು ರೋಗದ ಸಂತಿ | ಕೆಳಗಾಯಿತು ಪೌರುಷ ಖಂತಿ 3 ಹಿರಿಕಿರಿಯರು ಸರಿಕರು ನಿನ್ನಾ | ಸರಿದ್ಹೋಗುದು ಕಾಣಲಿಲ್ಲÁ ಕಣ್ಣÁ | ಅರಿತು ವಿವೇಕವ ಪಡಿಯದೆ ಘನ್ನಾ | ಮರೆದಾಗುರೆ ನೀ ಮಸಿಮಣ್ಣಾ 4 ಒಂದಾಗಲು ಮತ್ತೊಂದಾಶೆ | ಸಂಧಿಸುವದು ವಾಸನೆ ಸೂಶಿ | ತಂದೆ ಮಹಿಪತಿ ನಂದನು ಹೇಸಿ | ಇಂದು ಸಾರಿದಾ ಹರಿನಾಮ ಸ್ಮರಿಸಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1 ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2 ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3 ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4 ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5 ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6 ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7
--------------
ಶ್ರೀಪಾದರಾಜರು
ಬಂಡು ಮಾಡುವರಲ್ಲೊ ರಂಗೈಯ್ಯ ಪ ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ ಬಿಡುಗಂಣನಿವನೆಂಬರೋ ರಂಗೈಯ್ಯಾ 1 ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ ದೊಡ್ಡ ದೆವ್ವಯೆಂಬರೊ ರಂಗೈಯ್ಯಾ 2 ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ ಕೋರೆದಾಡಿಯನೆಂಬರೊ ರಂಗೈಯ್ಯಾ 3 ತರಳನ ಸಲಹಲು ಸಿರಿಗೆ ಪೇಳದೆ ಬಂದ ಉರಿಮೋರೆಯವನೆಂಬರೊ ರಂಗೈಯ್ಯಾ 4 ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ ಕಪಟ ತಿರುಕನೆಂಬರೊ ರಂಗೈಯ್ಯಾ 5 ಪಿತನ ಮಾತನು ಕೇಳಿ ಮಾತೃಹತ್ಯವಗೈದ ಪತಿತ ಹಾರುವನೆಂಬರೊ ರಂಗೈಯ್ಯಾ 6 ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ ಹತಭಾಗ್ಯನಿವನೆಂಬರೊ ರಂಗೈಯ್ಯಾ 7 ನೆರೆಹೊರೆ ಹೆಂಗಳ ಸುರತದಿ ಕೂಡಿದ ಜಾರ ಚೋರನು ಎಂಬರೊ ರಂಗೈಯ್ಯಾ 8 ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ 9 ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ ದುಷ್ಟ ರಾಹುತನೆಂಬರೊ ರಂಗೈಯ್ಯಾ 10 ಕಂದಾ ನೀ ನಿರ್ದೋಷ ರಂಗೇಶವಿಠಲ ನೆಂದು ತಿಳಿದು ದೂರುವರೊ ರಂಗೈಯ್ಯಾ 11
--------------
ರಂಗೇಶವಿಠಲದಾಸರು
ಮೊದಲಕಲ್ಲು ಶೇಷದಾಸ ಸ್ತುತಿ ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ ಪ ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ ಅ.ಪ. ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ ತೀರ್ಥರ ಮತಾನುಸಾರವಬೋಧಿಸುತ ಪರಮಾನುಗ್ರಹ ಮಾಳ್ವರ 1 ವಾಸುದೇವನ ದಾಸರೊಳಗ್ರೇಸರರು ಇವರುಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರುಭೂಸುರಾಂಶರಲ್ಲಿದಾವ ಸುರೇಶರೋಶೇಷದಾಸರಾಗಿ ಇಹರು 2 ತಂದೆ ಶ್ರೀ ನರಸಿಂಹನ ಪದದ್ವಂದ್ವ ಭಜಿಸುವರುಬಂದ ಸಜ್ಜನವೃಂದ ಜನಕಾನಂದಗೈಸುವರುಇಂದಿರೇಶನ ಒಂದೆ ಮನದಿ ಆ-ನಂದಬಾಷ್ಪಗಳಿಂದ ಧೇನಿಪರು 3
--------------
ಇಂದಿರೇಶರು
ಮದ್ದು ಮಾಡಲರಿಯಾ ಮುದ್ದು ರಮಾದೇವೀ ಪ.ಮುದ್ದು ಕೃಷ್ಣನಲ್ಲಿ ಮನ ಸಿದ್ಧವಾಗಿ ನಿಲ್ಲುವಂತೆ ಅಪವಚನಗಳೆಲ್ಲ ವಾಸುದೇವನ ಕಥೆಯೆಂದುರಚನೆ ಮಾಡುವರಲ್ಲಿರಕ್ತಿನಿಲ್ಲುವ ಹಾಗೆ1ಸಂತೆ ನೆರಹಿಸತಿ ಸುತರು ತನ್ನವರೆಂಬಭ್ರಾಂತಿ ಬಿಟ್ಟು ನಿಶ್ಚಿಂತನಾಗುವ ಹಾಗೆ 2ಎನ್ನೊಡೆಯಸಿರಿ ಪುರಂದರವಿಠಲನಸನ್ಮತಿಯಿಂದೆ ಹಾಡಿ ಪಾಡುವ ಹಾಗೆ 3
--------------
ಪುರಂದರದಾಸರು