ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ನೀ ಯೆನ್ನ ಮುಂದಕೆ ಬರುವೆಯೊ ಸುಂದರ ಮೂರುತಿಯೆ ನಂದದಿ ಭಕುತರ ವೃಂದಗಳೆಲ್ಲವ ಸಂದೇಹವಿಲ್ಲದೆ ಮುಂದಕೆ ಕರದೊಯ್ವೆ ಪ ಪಂಕಜಾಕ್ಷನೆ ನೀನು ಕಿಂಕರ ಜನರಾ- ತಂಕಗಳೆಲ್ಲವ ಶಂಕಿಸದೆ ವೆಂಕಟನಾಮಕ ಸಂಕಟಪರಿºರವಿವ- ಳಾಂಕರನÀರವ ನಿಶ್ಶಂಕೆಯಿಂದಲಿಯಿತ್ತು 1 ಆರುವೈರಿಗಳೆನ್ನ ಗಾರುಮಾಡುವರಯ್ಯಾ ಆರು ಕಾವರು ಇಲ್ಲಾ ಮಾರಜನಕನೆ ಪಾರುಗಾಣಿಸದೆ ನೀ ದೂರಗೈಸಲು ಯನ್ನ- ನಾರು ರಕ್ಷಿಪರೊ ದೋಷವಿದೂರನೆ ಪೇಳೋ 2 ಯರಬೆರಡೆನಾಗಿತ್ತು ಪೊರಿಯೋ ದೇವರ ದೇವ ಕರುಣಾಬ್ಧಿ ನೀನೆಂದು ವರವೋದು ಶ್ರುತಿಯು ಶರಣಾಗತನನ್ನು ಪೊರೆಯದೆ ಬಿಡುವಂದು ಸರಿಯೇನೋ ಕರುಣಾಳು ಸಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ ದೀನ ವತ್ಸಲ ಸ್ವಾಮಿ ಕೃಷ್ಣ ಪ ಜ್ಞಾನಗಮ್ಯನೆ ನಿನ್ನ ಕಾಣಲು ಮನದಲ್ಲಿ ನಿತ್ಯ ಧ್ಯಾನವ ಮಾಡುವರಯ್ಯ ಅ.ಪ. ಶ್ರುತಿ ಶಾಸ್ತ್ರಗಳನೋದಿ ಮಥನವ ಮಾಡುವ ಮತಿಸಾಧನದಿಂದ ನಿನ್ನರಸುವರೊ ಪತಿತಪಾವನ ನಿನ್ನ ಕರುಣವೊಂದಿಲ್ಲದಿರೆ ಇತರ ಸಾಧನವೆಲ್ಲ ಗತಿದೋರದೋ ಸ್ವಾಮಿ 1 ನಿನ್ನ ಭಕ್ತರು ಮಾಳ್ಪ ಸಾಧನಂಗಳಿಗೆಲ್ಲ ನಿನ್ನ ಕಾರುಣ್ಯವೇ ಕಾರಣವಲ್ಲವೆ ನಿನ್ನ ನುತಿಸ ಬಂದ ನರರ ಕ್ಷೇಮದ ಭಾರ ನಿನ್ನದೆಂದು ತಿಳಿದು ನೀನಾಗಿ ಪೊರೆಯುವೆ 2 ಏನೊಂದು ಸಾಧನವರಿಯದ ಎನಗೀಗ ನೀನಾಗಿ ದಯಮಾಡಿ ಮೈದೋರಿದೆ ಏನು ಧನ್ಯನೊ ನಾನು ಆನಂದಕೆಣೆಗಾಣೆ ದಾನವಾಂತಕ ಸ್ವಾಮಿ ಕರಿಗಿರೀಶನೆ ಕೃಷ್ಣ 3
--------------
ವರಾವಾಣಿರಾಮರಾಯದಾಸರು
ಏಳು ಏಳು ಕೇಶವಾ ಶ್ರೀಮಾಧವಾ ಏಳು ಏಳು ಕೇಶವಾ ಪ ಏಳಯ್ಯ ಮಧುಸೂದನ ಚಕ್ರಧಾರೀ ಏಳಯ್ಯ ನಿಜಶೌರಿ ದಶರೂಪಧಾರೀ ಏಳಯ್ಯ ದೇವಕಿಕಂದ ಉದಾರೀ ಏಳಯ್ಯ ಮುರಹರ ಕೌಸ್ತುಭಧಾರೀ1 ತ್ರಿಜಗವನ್ನು ಬೇಗ ಪಾಲಿಸಲೇಳು ಭಜಕರ ಕರುಣದಿ ರಕ್ಷಿಸಲÉೀಳÀು ಸುಜನರ ಮರೆಯದೆ ವರದೆತ್ತಲಿಕೆ ಯೇಳು ಕುಜನರ ಹರುಷದಿ ತರಿಯಲೇಳು 2 ದಾಸದಾಸರು ಬಂದು ಸೇವಿಸುತಿಹರೇಳು ತಾಸು ತಾಸಿಗೆ ತತ್ವವರುಹಲೇಳು ದಾಸಗೆ ನಿತ್ಯದಿ ಭಾಸವಾಗಲೇಳು ದಾಸಗೆ ಮುಕ್ತಿಯ ಪಾಲಿಸಲೇಳು 3 ಅರುಣೋದಯವಾಯ್ತು ಕಿರುಣೋದಯವಾಯ್ತು ಭರದಿಂದ ಸೂರ್ಯನು ಮೇಲೇರುತಿಹನು ಚರಣ ಕಿಂಕರರೆಲ್ಲ ಸಂಸಾರ ಶರಧಿಯ ಸರಸದಿ ದಾಂಟಿ ನಿಂನನು ಸೇರುತಿಹರು 4 ವಿದ್ಯೆಯರುಹಲು ಯೇಳು ಜ್ಞಾನವೀಯಲು ಯೇಳು ಬುದ್ದಿಯ ಕಲಿಸಿ ಆತ್ಮವ ಸೇರಲೇಳು ಮದ್ದು ಭವರೋಗಕ್ಕೆ ಬೇಗನೀಯಲು ಯೇಳು ಎದ್ದು ಲೋಕಕ್ಕೆ ನೀ ಬೆಳಗಲೇಳು 5 ಸನ್ನುತ ವರ ದೂರ್ವಾಪುರಕೆ ದಿಗ್ದೇಶದಿಂ ದೀನದಾಸರು ಬಂದು ಘನಭಕ್ತಿಯಿಂದ ನಿತ್ಯ ಮಾಡುವರಯ್ಯ ಚನ್ನಕೇಶವಾ ಸೇವೆ ಸ್ವೀಕರಿಸೇಳು 6
--------------
ಕರ್ಕಿ ಕೇಶವದಾಸ
ಜೋ ಜೋ ಶ್ರೀ ಕೃಷ್ಣ ಪರಮಾನಂದಜೋ ಜೋ ಗೋಪಿಯ ಕಂದ ಮುಕುಂದ ಪ.ಪಾಲುಗಡಲೊಳು ಪವಡಿಸಿದವನೆ ಒಂದಾಲದೆಲೆಯ ಮೇಲೆ ಮಲಗಿದ ಶಿಶುವೇ ||ಶ್ರೀ ಲತಾಂಗಿಯರ ಚಿತ್ತವಲ್ಲಭನೇಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ 1ಹೊಳೆಯುವ ರನ್ನದ ತೊಟ್ಟಿಲ ಮೇಲೆಢಳಿ ಢಳಿಸುವ ಗುಲಗುಂಜಿಯ ಮಾಲೆ ||ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ 2ಆರ ಕಂದ ನೀನಾರ ನಿಧಾನಿಆರ ರತ್ನವೊ ನೀನಾರ ಮಾಣಿಕವೋ ||ಸೇರಿತು ಎನಗೊಂದು ಚಿಂತಾಮಣಿಯು - ಎಂದುಪೋರನಿನ್ನನು ಪಾಡಿ ತೂಗುವೆನಯ್ಯ - ಜೋ ಜೋ3ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆಮನೆಯ ಕೆಲಸವಾರು ಮಾಡುವರಯ್ಯ ||ಮನಸಿಗೆ ಸುಖನಿದ್ರೆ ತಂದುಕೊ ಬೇಗಫಣಿಶಯನನೆ ನಿನ್ನ ಪಾಡಿ ತೂಗುವೆನು - ಜೋ ಜೋ 4ಅಂಡಜವಾಹನ ಅನಂತ ಮಹಿಮಪುಂಡರೀಕಾಕ್ಷ -ಪರಮ ಪಾವನ ||ಹಿಂಡು ದೈವದಗಂಡ ಉದ್ಧಂಢ ದೇವನಪಾಂಡುರಂಗ ಶ್ರೀ ಪುರಂದರವಿಠಲ - ಜೋ ಜೋ 5
--------------
ಪುರಂದರದಾಸರು