ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಯಾತರ ಭಯವಿದೆ ಹರಿಯ ಕಿಂಕರಗೆ ಪಾರ್ಥಸೂತನ ದಯವಿದ್ದರೆ ಸಾಲದೇ ಪ ಮತ್ತೆ ಇಂದ್ರಿಯಗಳ ಜಯಿಸಿಕೊಂಬವಗೆ ಹರಿದಿನ ವ್ರತವನ್ನು ಬಿಡದೆ ಮಾಡುವಗೆ ಸರ್ವ ಜೀವೋತ್ತಮ ಪ್ರಾಣನೆಂಬವಗೆ ಜಗದೊಳು ಶ್ರೀ ಮಧ್ವರಾಯರ ಮತವೇ ನಿಗಮಾರ್ಥವೆಂದು ಡಂಗುರವ ಸಾರುವಗೆ ರಾಜೇಶ ಹಯಮುಖನ ಒಲಿಸಿಕೊಂಬವಗೆ 1
--------------
ವಿಶ್ವೇಂದ್ರತೀರ್ಥ
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು