ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾದರೂ ದಯಬಾರದೇ ದಾಸನಮೇಲೆ ಇನ್ನಾದರೂ ದಯಬಾರದೇ ಪ ಪನ್ನಗ ಶಯನನೇ ಚೆನ್ನಕೇಶವನೇ ನಿಂನ್ನನು ನಂಬಿದ ಶರಣನಮೇಲೇ ಅ.ಪ ಹಲವು ಯೋನಿಗಳಲ್ಲಿ ನೆರೆ ಪುಟ್ಟಿ ಬಂದೇ ಹಲವು ಯಾತನೆಗಳ ಸಹಿಸುತ್ತ ಬಂದೇ ಹಲವು ರೀತಿಗಳಿಂದ ದುಃಖವ ತಿಂದೇ ಸಲೆ ನಂಬಿ ಹರಿಗೀಗ ಶರಣೆಂದು ಬಂದೇ 1 ಸೇರಿ ಬಗೆಯುತಲಿವೆ ಪಂಚ ವ್ಯಾಘ್ರಗಳೂ ಗಾರು ಮಾಡುತಲಿದೆ ಅಹಂ ಎಂಬ ಸಿಂಹವು ಶೆರಿಯ ಭಜಿಸುತ್ತ ಬಲೆದಾಟಿ ಬಂದೇ 2 ಬಂಧು ಬÁಂಧವರೆಂಬ ಕ್ರೂರವರ್ಗಗಳೆನ್ನ ತಿಂದು ಸುಲಿಯುತಲಿವೆ ವಂಚಿಸಿ ಹರಿಯೇ ಅಂದದಿ ದೂರ್ವಾ ಪಟ್ಟಣದಿ ನಿತ್ತಿರುವಂಥ ಸಿಂಧು ಶಾಯಿಯೇ ರಂಗ ಸಲಹೆನ್ನ ತಂದೇ 3
--------------
ಕರ್ಕಿ ಕೇಶವದಾಸ
ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1 ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2 ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ಸಹಿಸಲಾರೆನೊ ವ್ಯಥೆಯ ಪವಮಾನ ವಂದಿತನೆ ಪ. ಅಹೋರಾತ್ರಿಲಿ ಮನ ಕಳವಳ ಪಡುವದೊ ಆಹಾರ ನಿದ್ರೆಗಳು ತೊಲಗಿ ಪೋದವು ದೇವಾ ಸಹಿತಾಗಿ ತಾಯಿಯ ಸರ್ವಬಾಂಧವರೆಲ್ಲಾ ಸ ನ್ನಿಹಿತರಾಗಿ ಎನ್ನ ಬಳಗ ಇದ್ದರೂ ಕೂಡ ಅ ಸಹ್ಯವಾದ ದುಃಖ ದೂರಾಗಲಿಲ್ಲವೊ ಆಹಾ ಇರಲಾರೆ ಇರಲಾರೆ ಭಕ್ತ ಜನರ ಬಿಟ್ಟು ಮಹಿದಾಸ ಮೂರ್ತಿಯ ನಿನ್ನ ಭಕ್ತರ ಪಾದ ಸಹವಾಸ ಸುಧೆಯ ಸುರಿಸಿ ಬಲುಪರಿ ಅಹಿಭೂಷಣ ತಾತ ಕಾಳಿಮರ್ಧನಕೃಷ್ಣಾ 1 ಕರ್ಮ ಅಡ್ಡಬಂದು ಎನ್ನ ಘಾಸಿ ಮಾಡುತಲಿದೆ ಅರಿಯದಾದೆನೊ ದೇವಾ ಬ್ಯಾಸರವಾಗಿದೆ ಜನ್ಮವು ಮಹಿಯೊಳು ಸಾಸುವೆ ಮಾತ್ರವು ಸ್ವತಂತ್ರವಿಲ್ಲದಿಹ ದೋಷಿಜೀವನ ತಾನೇನು ಮಾಡಬಲ್ಲ ಸಾಸಿರನಾಮಗುರು ಕಾಳೀಮರ್ಧನಕೃಷ್ಣ2 ಜಲದ ಮಧ್ಯದಿ ಇರುವ ಮೀನವನು ಕಾವ ಮಳಲಿನೊಳಗೆ ತೆಗೆದು ಬಿಸುಟಿದಂತಾಯಿತು ಹೊಳೆಯ ಈಜುವೆನೆಂದು ಬಲು ಹೆಮ್ಮೆಯಿಂದಲಿ ಸೆಳೆವಿಗೆ ಸಿಕ್ಕು ಬಿದ್ದ ಮನುಜನ ತೆರನಾಯ್ತು ಬಲವಾಗಿ ಘಾಯವ ಪೊಂದಿದ ಸ್ಥಾನದಲ್ಲಿ ಸಲೆ ಕಾದ ಆಯಸ ಸೆಳೆಯನೆಳೆದಂತಾಯ್ತು ಅಳಲನು ನಿನಗಲ್ಲದೆ ಇನ್ನಾರಿಗೆ ಪೇಳಲೋ ಕೊಳಲಧರನೆ ಗುರು ಕಾಳಿಮರ್ಧನಕೃಷ್ಣಾ 3 ನಿನ್ನ ಭಕ್ತರಾ ಮಾತು ಯನಗದು ಮನ್ನಣೆ ನಿನ್ನ ಭಕ್ತರ ಕಥಾಶ್ರವಣ ಯನ್ನ ಕರಣಾಭರಣ ನಿನ್ನ ಭಕ್ತರ ಸಮೂಹ ಎನ್ನಯ ಕಣ್ಬೆಳಕು ನಿನ್ನ ಭಕ್ತರ ಪಾದದೂಳಿಯೆ ಶಿರೋಭೂಷಣವೆನೆಗೆ ನಿನ್ನ ಭಕ್ತರ ಆಶೀರ್ವಾದವೇ ಸರ್ವ ಬಲವೈ ಇನ್ನು ಈ ಬುದ್ಧಿಯು ಎಂದಿಗೂ ಕೆಡೆದಂತೆ ಚೆನ್ನಾಗಿ ರಕ್ಷಿಸೊ ಗುರು ಕಾಳಿಮರ್ಧನಕೃಷ್ಣಾ 4 ಪರಾಧೀನನೆಂದು ಪರಿಪರಿಯಿಂದಲಿ ಕೊರಗಿಸುವುದು ನಿನಗೆ ಎಂದಿಗೂ ಸರಿ ಅಲ್ಲ ಪರಾಧೀನನು ಅಹುದು ಪರತಂತ್ರನಾನಹುದು ಸರ್ವತಂತ್ರ ಸ್ವತಂತ್ರ ನೀನೆಂಬುದು ಸಿದ್ಧ ಶರಣಾಕರ ಆದರಿಷ್ಟು ಮಾತ್ರ ಕೇಳೋ ಸತಿ ತನ್ನಧೀನಳೆಂದು ಶಿರಶಿಡಿಯುವ ಊರಿ ಬಿಸಿಲಿನೊಳು ನಿಲ್ದಪನೆ ಸರಿಬಂದಿದ್ದು ಮಾಡೋ ಇದರ ಮೇಲಿನ್ನು ದೇವಾ ಉರಗಶಯನ ಗುರು ಕಾಳೀಮರ್ಧನಕೃಷ್ಣಾ 5 ನೀನು ನುಡಿಸಿದಂತೆ ನುಡಿದು ನುಡಿವೆನಯ್ಯ ನಿನ್ನ ಚಿತ್ತವು ಗುರು ಕಾಳೀಮರ್ಧನಕೃಷ್ಣಾ
--------------
ಕಳಸದ ಸುಂದರಮ್ಮ
ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು