ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆನ್ನುತ್ಹಳಿಯಲಿ ನಿನ್ನ | ನಾನಾವಿಧದಿ ಬೆಳಗುವ ಮಹಮಹಿಮನ ಪ ಸಾಗರ ನಿಲಯನೆಂದೆನಲೇ ನೀಗದ್ವೊಯ್ಕುಂಠ ಮೇಲು ಮಂದಿರನ ರಾಗದಿಂ ದ್ವಾರಕೆ ಪುರಮನೆಯವನೆನಲೇ ಯೋಗದಿಂದಣುರೇಣುತೃಣದಿ ವ್ಯಾಪಕನ 1 ಪನ್ನಂಗ ಹಾಸಿಗೆ ಮಾಡಿಹ್ಯನೆನಲೇ ಉನ್ನತ್ಹಾಸಿಗೆಯ ಮೇಲೆ ಮಲಗಿಕೊಳ್ವವನ ಭಿನ್ನವಿಲ್ಲದೆ ದರ್ಭೆಶಾಯಿಯೆಂದೆನಲೇನು ಚಿನ್ನಮಂಚದ ಮೇಲೆ ಲೋಲ್ಯಾಡುವವನ 2 ಹೊಟ್ಟಿಗ್ಹುಲ್ಲ ತಿಂದವನೆನಲೇ ಶಿಷ್ಟ ದಿವಿಜರಿಟ್ಟ ಮೃಷ್ಟಾನ್ನುಣ್ವವನ ಕೊಟ್ಟ ಹಣ್ಣಿನ ತೋಟ ಹಸಿದು ತಿಂದವನೆನೆ ಸೃಷ್ಟಿ ಈರೇಳಕ್ಕೆ ಅನ್ನ ಕೊಡುವವನ 3 ಅಸುಬಿಟ್ಟ ದಿಕ್ಕಿಲ್ಲದನೆನಲೇ ಅಸಮಲಬಲವುಳ್ಳಂಥ ಯಾದವಾರ್ಯನ ಕುಸುಮನಾಭಂಗೆ ಸಂಸಾರಿಯೆಂದೆನಲೇನು ಎಸೆವ ಪರವಸ್ತು ನಿರ್ಬಯಲು ನಿರ್ಮಯನ 4 ಅಳವಲ್ಲ ಎನಗೆ ನಿನ್ನ ವೊಲಿರೆ ದಿವ್ಯ ಮಹಿಮೆ ತಿಳಿಯುವ ತ್ರಾಣ ಒಲಿದು ಚರಣದಾಸರಾಳಾಗಾಳುವೆನೆಂದು ಇಳೆಯೊಳು ಸಾರುವೆ ನಳಿನಾಕ್ಷ ಶ್ರೀರಾಮ 5
--------------
ರಾಮದಾಸರು
ಕಪಟನಾಟಕನೀತ ಕೃಪಾಸಿಂಧು ಸಾಕ್ಷಾತ ಧ್ರುವ ಸಗುಣ ಸುಪಥ ದೋರಿ ನಿರ್ಗುಣನಾಗಿಹ ಶ್ರೀಹರಿ ಅಗಣಿತ ಗುಣದೋರುವ ಅನೇಕಾಪರಿ ಜಗದೊಳು ಮುರಾರಿ 1 ಹಿಡಿದೇನೆಂದರೆ ಸಿಲುಕ ಗೂಡಿನೊಳಗೆ ಮಾಡಿಹ್ಯ ಮಲಕ ನೋಡೇನೆಂದರೆ ಭಕ್ತಿಗೆ ನಿಲುಕ ಒಡಿಯ ಗೋಪಾಲಕ 2 ಕುಲಗಳ್ಳಗೆ ಕೊಡುವ ಮ್ಯಾಲೆ ಹುಯಲು ತಾ ಮಾಡುವ ಬಲುಖಳ ದೈವ 3 ಭಾಷೆ ಕೊಟ್ಟರೆ ತಪ್ಪ ಋಷಿ ಮುನಿಗಳ ಪಾಲಿಪ ಭಾಸುತ ಭಕ್ತರ ಹೃದಯದೊಳಗಿಪ್ಪ ಭಾಸ್ಕರ ಸ್ವರೂಪ 4 ಗುಹ್ಯ ಆಗೋಚರ ಸೋಹ್ಯ ತಿಳಿಯಲು ಸಾಕ್ಷಾತ್ಕಾರ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಘೋರವಿದು ಮಹ ಘೋರವಿದು ಸಂ ಸಾರದ ನೆಲೆ ದಾರಿಗರಿತಿಹ್ಯದು ಪ ತೋರದೆ ಮೂಜಗ ಹಾರೈಸಿದನು ದು:ಖ ವಾರಿಧಿಯೊಳು ಘೋರ ಬಡುತಿಹ್ಯದು ಅ.ಪ ಪರಮೇಷ್ಠಿ ಶಿರವಂದು ತೆಗೆಸಿಹ್ಯದು ಮುರಹರನನು ಸುಡುಗಾಡು ಹೊಗಿಸಿಹ್ಯದು ಸಿರಿವರ ಹರಿಯನು ಪರಿಪರಿ ಜನುಮವ ಧರಿಸುತ ಧರೆಮೇಲೆಳೆಸಿಹ್ಯದು 1 ಚಂದ್ರಗೆ ಕುಂದುರೋಗ್ಹಚ್ಚಿಹ್ಯದೋ ಬಲು ಮೇಂದ್ರ ಸೂರ್ಯನ ಪೊಲ್ಲ ಕಳಚಿಹ್ಯದು ಇಂದ್ರನ ಅಂಗಾಂಗ ಸಂದು ಬಿಡದಲತಿ ರಂಧ್ರಗೊಳಿಸಿ ಹೇಯ ಸುರಿವುವುದು 2 ಕಾಲ ತಂದಿಹ್ಯದು ಪಾ ತಾಳಕೆ ಬಲಿಯನು ಇಳಿಸಿಹ್ಯದು ವಾಲಿಯ ನಿಗ್ರಹ ಮಾಡಿಸಿ ಲಂಕೆಯ ಪಾಲದಶಕಂಠನ ವಧಿಸಿಹ್ಯದು 3 ಪರಮ ಪಾಂಡವರನ್ವನಕೆಳಸಿಹ್ಯದು ಆ ಕುರುಪನ ಕುಲನಾಶ ಮಾಡಿಹ್ಯದು ಪರಮ ತ್ರಿಪುರ ಶಿರಸೆರೆ ಸೂರೆಮಾಡಿಸಿ ಸುರನಿಕರರಿಗ್ಹಂಚಿಕೊಟ್ಟಹ್ಯದೊ 4 ಹಿರಿಯರನೀ ಪಾಡ ಪಡಿಸಿಹ್ಯದು ಈ ಮರುಳ ನರರ ಪಾಡೇನಿಹ್ಯದು ಗುರುವರ ಶ್ರೀರಾಮನೋರ್ವನ ಹೊರತಾಗಿ ಸರುವ ಜಗವ ಗೋಳಾಡಿಸಿಹ್ಯದು 5
--------------
ರಾಮದಾಸರು
ಜಡಮತಿ ಮನುಜ ಡಂಭವ ತ್ಯಜಿಸೊ ದೃಢದಿಂದ್ಹರಿಪಾದ ಸತತದಿ ಭಜಿಸೋ ಪ ಒಡಲೊಳ್ವಂಚಕನಾಗಿ ಹೊರಗೆ ಬಹುಮಾನವ ಪಡೆದರೆ ಹರಿ ನಿನ್ನ ಮೆಚ್ಚುವ ನೇನೋ ಅ.ಪ ನಿರುತ ಮಾನಸದೊಳ್ ಮನೆಮಾಡಿಹ್ಯ ಪ್ರಭು ಮರೆವೆ ಪರದೆ ತೆಗೆದಿರವಿಟ್ಟು ನೋಡೋ ಅರಿಯದ ನರರು ನಿನ್ಹಿರಿಯನೆನಲು ಕರಿವರದ ಕಮಲನಾಭನರಿಯನೆ ಮರುಳೆ 1 ಮರುಳನೆ ದುರಿತವ ಸ್ಮರಿಸವನಿತರಲಿ ಅರಿಯುವ ಹರಿ ನಿನ್ನಂತರದಲಿ ನಿಂದು ಮರುಳುಮತಿಯ ನೀಗಿ ಹೊರಒಳಗೊಂದಾಗಿ ಅರೆಲವನಿಲ್ಲದೆ ಪರಮನಂ ಧ್ಯಾನಿಸೋ 2 ಧರೆಮೆಚ್ಚಿ ನಡೆದರೆ ಬರುವುದೇನೆಲೊ ನಿನ ಗ್ಹರಿಮೆಚ್ಚಿ ನಡೆವುದೆ ಪರಮಸೌಭಾಗ್ಯ ಧರೆಯಾಣ್ಮ ಶ್ರೀರಾಮ ಮರೆಯಾಗುವನೆಲೋ 3
--------------
ರಾಮದಾಸರು