ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬದೆ-ನಾ-ಕೆಟ್ಟೆ ಪ ಅಂಬುಜಾಕ್ಷನೆ ನಿನ್ನಾ ಅ.ಪ ಗಳಿಸಿತು ಬಹುಕಾಲಾ ವಿಷಯಕೆ ಆಯ್ತೆಲ್ಲಾ ಅತಿಶಯ ವಾಯ್ತಾಶೇಗತಿಯನು ನಾಕಾಣೆ ಮತಿವಂತ ವ್ರತತತಿ ಜಪಜಪ ಹೋಮಕೆ ಗತಿದಾಯಕ ನಂಬದೆ 1 ಬಂದೆನು ಬಹುಸಾರಿ ನೊಂದೆನು ಈ ಪರಿಯೇ ಕಂದಿಸೆ ಯಮರಾಯಾ ಬಂಧುವು ಯಾರೈಯ ಇಂದಿರೆ ಮನಶಶಿ ಸುಂದರಮೂರ್ತಿ ಮಹೇಂದ್ರ ಪರಾತ್ಪರ ಪೂರ್ಣಾನಂದನ 2 ಮಾಡಿಹೆನಪರಾಧ ಪಾಡದೆ ತವ ಮಹಿಮೆ ಬೇಡುವೆ ನಿಜಭಕ್ತಿ ಓಡಿಸು ಈ ಬುದ್ಧಿ ಓಡಿಸೆ ಜಗ ಕಾಪಾಡುತಜೀವರ ಈಡು ದಿಕ್ಕಿಲ್ಲದ ಗೂಢ ಸ್ವತಂತ್ರನೆ 3 ಜ್ಞಾನವ ನಾಬಿಟ್ಟೆ ಹೀನನು ಹೇ ಧೊರೆಯೆ ಜ್ಞಾನದ ಶರಣೆಂಬೆ ಏನನು ಕೊಡಲಾರೆ ಆನತ ಬಂಧುವನಂತ ಗುಣಾರ್ಣವ ಶ್ರೀನಿಧಿ ಸೃಷ್ಟಿವಿನೋದವ ಗೈವನ4 ಬಂದಿಯು ನಾನೈಯಾ ಬಂಧಕ ನೀನೈಯ ಎಂದಿಗುನಾದಾಸಾ-ತಂಡಿಡು ನೀಲೇಸಾ ನಂದ ಮುನೀಂದ್ರ ಸುಮಾನಸ ಮಂದಿರ ನಂದದ ಶ್ರೀವರ “ಶ್ರೀ ಕೃಷ್ಣವಿಠಲ”ನ5
--------------
ಕೃಷ್ಣವಿಠಲದಾಸರು
ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ತಿರುಪತಿ ವೆಂಕಟೇಶ ಕಂಡೆನೋ ನಿನ್ನ ವೆಂಕಟನೇ ಸ್ವಪ್ನೆಪುಂಡರೀಕಾಕ್ಷ ಸಂಪೂರ್ಣ ಸದ್ಗುಣನೇ ಪ ಗಿರಿಯ ಮೇಲ್ಹತ್ತಿ ಬಂದಿಹೆನು ನಿನ್ನಶರಣರೊಳಗೆ ಬಂದು ನುತಿಯ ಮಾಡಿಹೆನುಪರದೇಶ ಜನರ ನೋಡಿದೆನು ಅವರ್ಹೊರಗೆ ಪೋಗಲು ನಾನ್ಹೊರಗೆ ಬಂದಿಹೆನು1 ಮತ್ತು ನಾ ಒಳಗೆ ಬಂದಿಹೆನು ತೆರದುತ್ತಮ ದ್ವಾರಗಳನ್ನೇ ನೋಡಿದೆನುಚಿತ್ರ ವಾಲಗರ ಕೇಳಿದೆನು ಪೋಗ-ಲುಕ್ತಿ ಪೇಳುತಲೆ ಸನ್ನಿಧಿಲೆ ಬಂದಿಹೆನು 2 ಕಮಲ ನೋಡುತಲಿಇಂದಿರೇಶನೆ ನಯನದಲಿ ಪೊಕ್ಕೆ-ನಿಂದು ಸಂತೋಷ ನಿರ್ಭರ ಶರಧಿಯಲಿ 3
--------------
ಇಂದಿರೇಶರು
ನಾನು ಎಂಬೊದೆ ದೊಡ್ಡದು ನೀನೆಲ್ಲಿಹೆಯೊ ನಾನೆಲ್ಲಿ ಕಾಣಲಿ ಪ. ನಾನೆಂಬೊ ವ್ಯಾಪಾರ ನೀನೆ ಮಾಡಿಹೆ ಗಾನಲೋಲ ಸರ್ವರಂಗಲಿ ನಾನೇ ಇಹೆನೆಂದು ಅ.ಪ. ಸರ್ವರೊಳಗೆ ನಾನೆಂಬೊದೇ ಇರಲಾಗಿ ಸಾರ್ವಜನಿಕ ನೀನೆಲ್ಲಿಹೆಯೊ ಸರ್ವಧಿಕಾರಿ ನೀನೇ ಎಂಬ ವಿಬುಧರ ಸರ್ವಕಾಲದಿ ಸರ್ವ ಸುರರ ಸಹಿತಿಹೆ ನಾನು 1 ಮಿಂಚಿದ ಪಾಪವ ಮಾಡುವ ಮನುಜರ ವಂಚಕತನದಲಿ ದೇಹದೊಳಿಹೆ ನೀನು ಸಂಚಿತಾರ್ಥದ ಪುಣ್ಯವ ಗಳಿಸಿದ ಭಕ್ತರ ಮಿಂಚಿನ ಹುಳದಂತೆ ಕಂಚಿ ವರದ ಇಹೆ 2 ರಘುಪತೆ ರಾಘವನೆನುತ ಶ್ರೀ ಶ್ರೀನಿವಾಸನ ಬಗೆ ಬಗೆ ಸ್ತುತಿಸದೆ ಅಧಮರಿಗಿಲ್ಲ ಅಘಹರ ಗೋಪಿಗೆ ಮಿಗೆಯಾಟ ತೋರಿಹೆ ನಗಧರ ಅಳಗಿರಿ ಸೊಗಸಿನ ಚೆನ್ನಿಗ ನಾನು 3
--------------
ಸರಸ್ವತಿ ಬಾಯಿ
ನೀನೆ ನುಡಿಸಿದಂತೆ ನುಡಿಯುವೆನು ಮಿಕ್ಕ ಜ್ಞಾನವಿಲ್ಲ ಎನಗೇನೇನು ಪ ನೀನೆ ಜಗತ್ರಾಣ ಶ್ರೀಹರಿಯೆಂಬುದೊಂದೆ ಖೂನಮಾಡಿ ಕೊಂಡಾಡುವೆನು ಅ.ಪ ನೀ ನಡೆಸಲು ನಾ ನಡೆಯುವೆನು ಹರಿ ನೀನಾಡಿಸಲು ನಾನಾಡುವೆನು ನೀನೀಡದಿರೆ ಬಲು ಮಿಡುಕುತ ಬಳಲುವೆ ನೀ ನುಣಿಸಲು ಉಂಡು ನಲಿವೆ ಪುಂಡನಾಗಿ 1 ಕಡುಪ್ರೇಮದಿ ಚರಾಚರಗಳನು ಕಾಯ್ವಿ ಪೊಡವಿ ಈರೇಳುವ್ಯಾಪಕ ನೀನು ಕೊಡುವ ಕರ್ತ ನೀನೆ ಮೂಲೋಕಕೆಂಬ ನುಡಿ ದೃಢದಿ ನಂಬಿ ಗಟ್ಟಿಮಾಡಿಹೆನು 2 ಹೋಮ ಯಜ್ಞ ಯಾಗ ತಿಳಿಯೆ ನಾನು ಮತ್ತು ನೇಮನಿತ್ಯದ ಗುರುತರಿಯೆನು ಭೂಮಿಗಧಿಕ ಮಮಸ್ವಾಮಿ ಶ್ರೀ ರಾಮನ ಪೂರ್ಣನಂಬಿಕೊಂಡಿಹೆನು 3
--------------
ರಾಮದಾಸರು
ಪ್ರಾಣಸನ್ನುತ ನರಸಿಂಹ | ವಿಠಲ ಪೊರೆ ಇವಳಾ ಪ ಕಾಣೆನಾನನ್ಯರನು | ಕಾರುಣ್ಯ ಮೂರ್ತೇ ಅ.ಪ. ವಾಸುದೇವ ಹರೀ |ಕೇಶವನೆ ಪೂಜಿಸೀ | ವೇಷದಲಿ ಸೂಚ್ಯ ಪರಿಆಶಿಷವನಿತ್ತು ಉಪ | ದೇಶ ಮಾಡಿಹೆನೋ 1 ಕಾಮಾರಿ ಸಖಕೃಷ್ಣ | ಕಾಮಿತವನೇ ಇತ್ತುಭಾಮಿನಿಯ ಸಲಹೆಂದು | ನೇಮದಲಿ ಬೇಡ್ವೇಶ್ರೀ ಮನೋಹರ ಹರಿಯೆ | ದುರಿತಾಳಿ ಪರಿಹರಿಸಿನಾಮಸ್ಮøತಿ ಸುಖ ಕೊಟ್ಟು | ಭವವನುತ್ತರಿಸೋ 2 ಪಾದ ಮಾನಿಯ ಪ್ರೀಯಪಾವನ್ನ ತವನಾಮ | ನಾಲಿಗ್ಯೆ ಒದಗೀಜೀವನದಿ ಸಂತೋಷ | ಒದಗಲೀ ಎನುತ ಹರಿದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಬಾಲಕೃಷ್ಣವಿಠಲ | ಕಾಪಾಡೊ ಇವನಾ ಪ ನೀಲ ನೀರದ ವರ್ಣ | ಕಾಳಿಂದಿ ರಮಣ ಅ.ಪ. ಮೋದ ತೀರ್ಥರ ಮತದಿಹಾದಿಯಲ್ಲಿರುವವನ | ಕಾದುಕೋ ಹರಿಯೇವೇದಾಣಿ ಸನ್ನುತನೆ | ಭೇದ ಪಂಚಕ ತಿಳಿಸಿಮೋದ ಪಡಿಸುವುದಿವನ | ವೇದಾಂತ ವೇದ್ಯ 1 ವ್ಯಾಪ್ತೋಪಾಸಕ ಜೀವಿ | ಗಿತ್ರಿಹೆನೊ ಅಂಕಿತವಸುಪ್ತೀಶ ಪೇಳ್ದಪರಿ | ಗೋಪ್ತ ಮಹಿಮಾಆಪ್ತ ನಿವ ನೆಂದೆನುತ | ಗೊತ್ತು ಮಾಡಿಹೆ ದೇವದೀಪ್ತ ಮೂರುತಿ ಹರಿಯೆ | ತೃಪ್ತಿ ಪಡಿಸಿವನಾ 2 ಸ್ವಾಪದಲಿ ಸತ್ಪಂಚ | ಪುಷ್ಪ ಬಕುಳವನಿತ್ತುಶ್ರೀಪ ನಿನ್ನನುಗ್ರಹ | ಪ್ರಾಪಕದಸೂಚ್ಯಾನೀ ಪಾಲಿಸುತ್ತಿವಗೆ | ಬಾಷ್ವಾವಾನಂದುದರಿಸೋಪಾನ ಮುಕ್ತಿಗೆನೆ | ವ್ಯಾಪಾರ ನಿನದೋ 3 ಉಂಬುಡುವ ಕ್ರಿಯೆ ಸರ್ವ | ಬಿಂಬ ತಾಗೈಯೈ ಪ್ರತಿಬಿಂಬ ಕುಂಟೆಂಬುವಾ | ಸುಜ್ಞಾನವಿತ್ತುಗುಂಭ ಸಾದನದಿ ಹೃದ | ಯಾಂಬರದಿ ನೀತೋರಿಸಂಭ್ರಮದಲಿರಿಸಿವನ | ಅಂಬುಜದಳಾಕ್ಷ 4 ಎಲ್ಲೆಲ್ಲೂ ನಿನ್ನ ವ್ಯಾಪ್ತಿ | ಸೊಲ್ಲನುಣಿಸುತ ಹರಿಯೆಬಲ್ಲಿದರ ಸಂಗವನು | ಸಲ್ಲಿಸುತ ಇವಗೇಪಲ್ಲಿವಿಸೆ ಸುಜ್ಞಾನ | ಬೇಡ್ವೆ ನಿನ್ನನು ದೇವಚೆಲ್ವ ಹಯಮುಖ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಒಂದೆರೆಡೇ ನಾ ಹೇಳಲುಎಂದಿಗು ತೀರವು ಅಪರಾಧ ಸಿರಿಕೃಷ್ಣ ಪ.ಪಾಪವ ಗಳಿಸಿದರೇನುಂಡಾರದ ಬಲ್ಲೆಆ ಪುಣ್ಯವಂತರ ಕೀರ್ತಿ ಬಲ್ಲೆಈಪರಿತಿಳಿದರು ಕೆಟ್ಟವೃತ್ತಿಯ ಬಿಡೆಆಪದ್ಬಂಧು ಇದೇನು ಮಾಯವೊ ಸ್ವಾಮಿ 1ತಾಪತ್ರಯವನುಭವಿಸುವಾಗ ಪಶ್ಚಾತ್ತಾಪವಲ್ಲದೆ ಮಾತೊಮ್ಮಿಗಿಲ್ಲಶ್ರೀಪತಿನೋಡುಚಿತ್ತದಕಪಟವಿಷಯಾಲಾಪವೆವಿಡಿದಿದೆ ಹಿತ ಹೊಂದದಯ್ಯ 2ಹಣ್ಣು ಹಂಚಿದ ತೆರ ಹೊತ್ತು ಹೋಯಿತು ಕಿಂಚಿತ್ಪುಣ್ಯ ಮಾಡಿಹೆನೆಂಬ ನಂಬಿಗಿಲ್ಲಚಿನ್ಮಯ ಮೂರುತಿ ಪ್ರಸನ್ವೆಂಕಟೇಶನಿನ್ನವನೆಂಬ ಹೆಮ್ಮೆಲಿ ಮಾಡಿದ ತಪ್ಪು 3
--------------
ಪ್ರಸನ್ನವೆಂಕಟದಾಸರು
ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲಪತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ1ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೊ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ2ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ3ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ4ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ5ಮಾಡಬಾರದ ಪ್ರತಿಜೆÕಯ ಮಾಡಿಹೆನು ಕೇಳೆಲೋ ಸುಗ್ರೀವಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆನೆ ಕೇಳೆಲೋ ಸುಗ್ರೀವಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ6ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ7ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವಗಂಡನ ಪಡೆದಿರೆಶುಂಭಜಯಿಸುವನೆನ್ನ ಕೇಳೆಲೋ ಸುಗ್ರೀವಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ8ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿಬರ್ವಳು ನಿನ್ನ ಮಾತಿಗೆಶುಂಭಬಹನೇ ಕೇಳೆಲೆ ಮಹಾದೇವಿಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ9ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ10ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆಚಿಂತೆ ಹರಿಪೆ ಸುರರನು ಶುಂಭನನುಕಟ್ಟಿಎನುತಲಿ ಸರ್ವಾಂಬಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ11
--------------
ಚಿದಾನಂದ ಅವಧೂತರು