ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ಪ ದುಷ್ಟಸಂಸಾರ ಬಹುಕಷ್ಟವಯ್ಯ ಇದ ರಟ್ಟೊಳಿಗಳ ತಾಳಲಾರೆನಯ್ಯ ಆರೆನಿದರ ಕೋಟಿಲೆಗಳಾರೆನಯ್ಯ ಪಾದ ಸೇರಿಸೈಯ್ಯ 1 ಕಾಮಕ್ರೋಧ ಲೋಭಮೋಹ ಬಿಡಿಸಯ್ಯ ಮದಮಾತ್ಸರ್ಯವೆಂಬ ಕಾಟ ನೀನೊತ್ತಿಸಯ್ಯ ಪಾದ ಹೊಂದಿಸಯ್ಯ ಸರ್ವಬಂಧು [ನೀ] ಎನ್ನ ಜಿಹ್ವೆಯಲಿ ನೆಲೆಸಯ್ಯ 2 ಆಶ ಪಾಶಕ್ಲೇಶವೆಲ್ಲ ನಾಶ ಮಾಡಿಸಯ್ಯ ಶ್ರೀಶ ನಿನ್ನ ದಾಸರಲ್ಲಿ ಸೇರಿಸಯ್ಯ ವಾಸುಕಿಶಯನ ಭವದಿ ನೊಂದೆನಯ್ಯ ಸ ರ್ವೇಶಬಂಧು ಎನ್ನನುದ್ಧರಿಸಯ್ಯ 3 ಪುತ್ರಮಿತ್ರಬಂಧುವರ್ಗದಿ ಬಿದ್ದಿಹೆನಯ್ಯ ಅ ನಿತ್ಯಮೋಹದಲ್ಲಿ ಮುಳುಗಿ ಪೋದೆನಯ್ಯ ವ್ಯರ್ಥನಾಗಿ ಕಾಲವನ್ನು ಕಳೆದೆನಯ್ಯ ಎನ್ನ ಮರಣ ಕಾಲದಿ ನಿಮ್ಮ ಸ್ಮರಣೆ ಕರುಣಿಸಯ್ಯ 4 ಜನನ ಮರಣವೆಂಬೊ ಜಾಡ್ಯ ಕ್ರೂರವಯ್ಯ ಇದರ ವಿಧವನರಿತು ವೈದ್ಯ ಮಾಳ್ವರ ಕಾಣೆನಯ್ಯ ಬ್ರಹ್ಮಾದಿ ದೇವತೆಗಳೂ ಅರಿಯರಯ್ಯ ಧನ್ವಂತ್ರಿರೂಪ ಶ್ರೀನಿವಾಸ ರಕ್ಷಿಸಯ್ಯ 5 ದೇಹವೆಲ್ಲ ಗಳಿತವಾಗಿ ಪೋಯಿತಯ್ಯ ಇಂದ್ರೀಯ ಸ್ವಾಧೀನದಲ್ಲಿ ನಿಲ್ಲದಯ್ಯ ವಿಷಯದಲ್ಲಿ ಮನಸು ಬಹಳ ಹರಿವುದಯ್ಯ ಲಕ್ಷ್ಮೀಪತಿಯೆ ನಿಮ್ಮ ಭಕ್ತಿಯಿತ್ತು ಸಲಹಯ್ಯ 6 ದೀನನಾಗಿ ನಿನ್ನ ಚರಣ ಸೇರಿದೆನಯ್ಯ ಜ್ಞಾನವೈರಾಗ್ಯವಿತ್ತು ಪಾಲಿಸೆನ್ನಯ್ಯ ಮರಳಿ ಜನ್ಮ ಬಾರದಂತೆ ಮಾಡಬೇಕಯ್ಯಾ ಗರುಡಗ ಮನ ವೆಂಕಟರಮಣ ಭವಸಂಕಟ ಬಿಡಿಸಯ್ಯ 7
--------------
ಯದುಗಿರಿಯಮ್ಮ
ಮದಲಗಟ್ಟಿ ಪ್ರಾಣನಾಥಾ ಮುದವನಿತ್ತು ಪಾಲಿಸಯ್ಯ ಪ ಮದನಜನಕ ಮಾಧವಾನಬೋಧವಿತ್ತು ಕರುಣಿಸಯ್ಯ ಅ.ಪ. ತಾಪ ಮೂರ್ತಿ ನೀನುದೀಪದಂತೆ ಹೊಳೆದು ಭವದಕೂಪ ದಾಟಿಸಯ್ಯಾ ಭೂಪ 1 ದೇವ ದೇವೋತ್ತಮನೆ ನೀನುಜೀವದಾನ ಮಾಡಿಸಯ್ಯಪಾವಮಾನಿ ಪರಿಕೆಸೆಮ್ಮಾನೋವನದೂರ ಮಾಡಿಸಯ್ಯಾ 2 ಅಂಧ ಬಧಿರ ಮೂರ್ಖ ಜನರುಬಂದು ನಿನ್ನ ವಂದಿಸಲುಛಂದದಿಂದ ಅವರ ದುರಿತವೃಂದವನ್ನು ನಾಶಗೈವೆ 3 ಭೂಸುರೇಂದ್ರ ವ್ಯಾಸರಿಂದಆರು ತುಂಗಾ ಹೃದವ ಬಿಟ್ಟುಭಾವಿಸುವೆ ಇಲ್ಲದೇವಆ ಸಮೀರ ಜಾತ ಶೂರ 4 ಮುದದಿನಾಥ ಜ್ಞಾನ ವಾತಾಕಂದಧೀಮಂಧ ರಾಮ ದೂತಾಹೃದಯ ಸದನದಲ್ಲಿ ತೋರೋತಂದೆಶ್ರೀನರಹರಿಯ ರೂಪ 5
--------------
ತಂದೆ ಶ್ರೀನರಹರಿ
ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ ಶ್ರವಣಮಾಡಲು ಭಕುತಿ ಆವಕಾಲಕು ಇತ್ತು ತವಪದದಾಸರ ದಾಸ್ಯ ಕೊಡಿಸೋ ದೇವ 1 ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ ಕೀರ್ತನ ಭಕುತಿಗೆ ಕರ್ತದಾತ ನೀನೆ2 ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ ಕರುಣಿಸಿ ಪೊರೆಯೊ ಗುರುವರ ಸುಂದರ 3 ಪಾದ ಸೇವೆಯ ಕೊಡು ಸಾದರದಿಂದಲಿ ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4 ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5 ವಂದನಾಭಕುತಿ ಎನ್ನಿಂದ ನೀ ಮಾಡಿಸಿ ನಂದನಂದನಗಾನಂದಪಡಿಸೊ ದೇವ 6 ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ ವಾಸುದೇವನ ನಿಜದಾಸನೆ ಸರ್ವದಾ 7 ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8 ಆತ್ಮನಿವೇದನ ಭಕುತಿಯನ್ನು ಪರ ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9 ನವವಿಧ ಭಕುತಿಯ ಕೊಟ್ಟು ಸಲಹೋ ದೇವ ಅವಕಾಲಕು ಪವಮಾನ ನೀನೆ ಗತಿ 10 ಸಂಕಟ ಹರಿಪ ಶ್ರೀ ವೇಂಕಟೇಶನ ದೂತ ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
--------------
ಉರಗಾದ್ರಿವಾಸವಿಠಲದಾಸರು
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ಪ ಕರವ ಜೋಡಿಸಿ ಬಿನ್ನೈಪಾ || ದುರಿತ ರಾಶಿ | ಪರಿಹಾರ ಮಾಡಿಸಯ್ಯಾ 1 ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರಿಗಳಿಗೆ ನಿರುತ ಮಾರಕ ನೀನಹುದೋ2 ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ 3 ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ 4 ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5
--------------
ವಿಜಯದಾಸ