ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಪೊರೆ ದೊರೆಯೆ ಪ. ನಿನ್ನ ಮಾಯ ಅ.ಪ. ಎಷ್ಟು ಛಲವೋ ಎನ್ನಿಂದಲಿ ಸೇವೆಯನು ಕೈಕೊಳ್ಳು ಇನ್ನು ಶ್ರೇಷ್ಠರಾದ ಶ್ರೀ ಗುರುಗಳ ಆಜ್ಞೆಯಲಿ ಬಂಧಿಸಿ ಎನ್ನಿಲ್ಲಿ ಮಹ ಮಹಿಮನೊ ನೀನು ಗುಟ್ಟು ಪೇಳಲು ಎನ್ನಿಂದಲಿ ಅಳವೇ ನಿತ್ಯದಿ ನಿನ್ನ ನೆನವೆ 1 ನಾನಾ ರೂಪ ಧ್ಯಾನದಲಿ ಬಂದ್ಯೊ ಎನ್ನಲಿ ನಿಂದ್ಯೊ ಮಾನವ ಜನ್ಮ ಸಾರ್ಥಕವೆನಿಸಿದ್ಯೊ ಶ್ರೀ ಗುರುದಯ ನೀಡ್ದ್ಯೊ ನಿನ್ನ ಪಾದದಲಿ ಮಮತೆ ಸಾನುರಾಗದಿ ಕೊಟ್ಟು ಎನ್ನ ಸಲಹೊ ಬಿಡೆನು ನಿನ್ನೆಲವೊ 2 ಮಚ್ಛಕೂರ್ಮ ಹರಿ ಸ್ವಚ್ಛ ವರಹರೂಪ ನರಹರಿ ಪ್ರತಾಪ ಸ್ವಚ್ಛಮನದಲಿಹ ಬಲಿಯನೆ ಬಂಧಿಸಿದ್ಯೊ ರಾಜರ ಮರ್ಧಿಸಿದ್ಯೊ ಅಚ್ಚ ಜೀವೋತ್ತಮಗಜನ ಪದವನಿತ್ಯೊ ಗೋಪಿಗೆ ಮುದವಿತ್ಯೊ ಬಿಚ್ಚಿ ವಸನವ ಹಯವನೇರಿದ್ಯಲ್ಲಾ ಗೋಪಾಲಕೃಷ್ಣವಿಠಲಾ 3
--------------
ಅಂಬಾಬಾಯಿ
ಲಾಲಿ ಶ್ರೀ ಕೃಷ್ಣ ಬಾಲ ಲಾಲಿ ನಂದ ಯಶೋದೆ ಲೀಲ ವೇಣುಗೋಪಾಲ ಪ. ವಸುದೇವ ಸುತನಾಗಿ ಬಂದು ಎಸೆವೊ ಗೋಕುಲದಲಿ ನಿಂದು ಅಸುರಕುಲ ಸಂಹಾರಕೆಂದು ನಸುನಗುತ ಗೋಪಿಯರ ವಶವಾಗ್ವೆನೆಂದು 1 ಪುಟ್ಟಿದಾ ಶಿಶುವನ್ನೆ ನೋಡಿ ನಕ್ಷತ್ರ ರೋಹಿಣಿ ಎಂದು ತಿಳಿದು ಅಷ್ಟಜನ ಸಹಿತ ಗೋಕುಲದಿ ಸಂತುಷ್ಟಿಯೊಳು ನಾಮಕರಣವ ಮಾಡಿ ನಲಿದೂ 2 ವೇದ ಘೋಷಗಳಾಗುತಿರಲೂ ಆದಿ ಮೂರುತಿಗೆ ಮೋಹದಲಿ ಕೃಷ್ಣನೆಂದ್ಹೆಸರನಿಡಲೂ ಸಾದರದಿ ಗೋಪ ದಕ್ಷಿಣೆ ತಾಂಬೂಲ ಅಗಾಧದಲಿ ಬ್ರಾಹ್ಮಣರಿಗೆ ಕೊಟ್ಟು ನಲಿದೂ 3 ಚತುರ ವೇದದ ನಾಲ್ಕು ಸರಪಣಿಯ ಹೂಡಿ ಚತುರ ದಿಕ್ಕನೆ ನಾಲ್ಕು ಚೌಕ ತೊಟ್ಟಿಲನೆ ಕಟ್ಟಿ ಚತುರ್ಮುಖನಯ್ಯನ ತೊಟ್ಟಿಲೊಳಗಿಟ್ಟು ಅತಿಶಯದಿ ನಾರಿಯರು ತೂಗಿದರು ಹರಿಯಾ ಲಾಲಿ4 ಮಚ್ಛಕೂರ್ಮನೆ ವರಹ ಲಾಲಿ ತುಚ್ಛ ದೈತ್ಯನ ಕೊಂದ ನರಹರಿಯೆ ಲಾಲಿ ಅಚ್ಚವಾಮನ ಭಾರ್ಗವ ಕೃಷ್ಣ ಲಾಲಿ ಸಚ್ಚ ಬೌದ್ಯಕ ಶ್ರೀ ಶ್ರೀನಿವಾಸನೆ ಲಾಲಿ 5
--------------
ಸರಸ್ವತಿ ಬಾಯಿ
ಶ್ರೀ ಸುಧಾಮ ಚರಿತ್ರೆಶ್ರೀ ಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನೂ ಪಘೋರದಾರಿದ್ಯ್ರದ ಬಾಧೆಯೊಳಿರುತಲಿಚಾರುಸಚ್ಚರಿತೆಯ ಆಗರವಾಗಿಹ ಅ.ಪ.ಶೀಲ ಸದ್ಗುಣವತಿಯು ಸುಸೀಲೆಯುಸತಿಮಣಿ ಪತಿವ್ರತೆಯುಬಾಲಕ ಸಲಹಲು ಕಡು ಕಷ್ಟ ಬಡುತಲಿ ಶ್ರೀಲೋಲನ ಧ್ಯಾನದಿ ಕಾಲಕಳೆಯುತಲಿಹಳು 1ಮನದಲಿ ಯೋಚಿಸುತ ಅನುನಯದೊಳುಪತಿಗೆ ತಾ ನುಡಿದಳೆಂದೂಅನುಭವಿಸಲಾರೆಘನದಾರಿದ್ರ್ಯವನುಸಂ ಮ್ಮಂಧಿಗಳು ಸ್ನೇಹಿತರಲ್ಲವೇ ನಿಮಗೆ 2ಅಂದ ಮಾತನು ಕೇಳುತ ಕುಚೇಲ ತಾಹಿಂದೆ ಗುರುಕುಲ ವಾಸದಿನಂದ ಬಾಲನ ಕೂಡ ಹೊಂದಿದ ಸ್ನೇಹವತಂದು ಸ್ಮರಣೆಗೆ ಶ್ರೀ ಕೃಷ್ಣ ಸಖನು ಎಂದಾ 3ಕಡುಹರುಷದಿ ಸತಿಯುಒಡನೆ ತಂದು ಪ್ರಥಕು ತಂಡುಲವ ನೀಡೀಕಡಲೊಡೆಯಪಾದದರುಶನ ಕೊಂಡು ನೀವಸಡಗರದಲಿ ಬನ್ನಿರೆಂದು ಕಳುಹಿದಳು 4ಭರತ ಮಾರ್ಗದಿ ಹರಿಯಾಸ್ಮರಿಸುತಲೆ ಮನದೊಳು ಪೂಜಿಸುತಸುರ ವೈಭವದಲಿ ಮೆರೆಯುವ ದ್ವಾರಕಾಪುರವನುನೋಡುತ ಬೆರಗಾಗಿ ನಿಂದನು 5ಚಾರರೊಡನೆ ಪೇಳಿದಾಶ್ರೀ ಕೃಷ್ಣನ ಬಾಲ್ಯದಸಖತಾನೆಂದುದೂರದಿ ಬಂದು ದ್ವಾರದಿ ನಿಂದಿಹುದನುಅರುಹಿರಿ ಹರಿಗೆಂದು ಕಳುಹಿದನವರನು 6ವಾರುತಿಯನು ಕೇಳುತಾಶ್ರೀಕೃಷ್ಣ ತಾ ವಿಪ್ರನೆಡೆಗೆ ಬರುತಾಕರಪಿಡಿದವನ ಕರೆತಂದನರಮನೆಗೆ ತಾವರಸಿಂಹಾಸನದಲ್ಲಿ ಕುಳ್ಳಿರಿಸಿದನಾಗ 7ದೂರದ ದಾರಿಯನು ನಡೆದು ಬಂದಶ್ರಮ ಪರಿಹಾರಕೆಂದುನಾರಿ ರುಕ್ಮಿಣಿ ನೀರ ನೆರೆಯ ಪಾದವ ತೊಳೆದುಭಾರಿ ಉಪಚಾರ ಮಾಡುತಿದ್ದನು ಕೃಷ್ಣಾ 8ಮಡದಿ ಮಕ್ಕಳ ಕ್ಷೇಮವ ವಿಚಾರಿಸಿಕಡು ಸಂಭ್ರಮವ ತೋರುತಷಡುರಸದನ್ನವ ಮಡದಿ ರುಕ್ಮಿಣಿ ಬಡಿಪೆಸಡಗರದಲಿ ಸುಭೋಜನವ ಮಾಡಿಸಿದನು 9ಅಂದಿನಿರುಳು ಕಳೆಯೇತಂದಿಹುದೇನುಕಾಣಿಕೆತಮಗೆನುತಾಚಿಂದೆ ಬಟ್ಟೆಯೊಳಿದ್ದ ಪ್ರಥಕು ತಂಡುಲವ [ಅವಲಕ್ಕಿ]ಬ್ರಹ್ಮಾಂಡದೊಡೆಯ ತಾ ಕೊಂಡೆ ಸಂಭ್ರಮದಿಂದ 10ಪ್ರಥಕು ತಂಡುಲವ ಕೊಂಡುಸುಧಾಮನ ಭಕುತಿ ಭಾವನೆ ಕಂಡುಅತುಲ ಐಶ್ವರ್ಯದ ಸುಖ ಸಂಪದವಿತ್ತುಮುಕುತಿ ನೀಡಿದ ನಮ್ಮ ಭಕುತ ವತ್ಸಲ ಕೃಷ್ಣಾ 11ಮಂಗಲಂ ಮಚ್ಛಕೂರ್ಮವರಹ ನರಸಿಂಹ ಸುಂದರ ವಾಮನಮಂಗಲಂ ಭ್ರಗುರಾಮ ದಶರಥ ತನಯಗೆಮಂಗಲಂಸಿರಿಕೃಷ್ಣ ಬೌದ್ಧ ಸುಕಲ್ಕಿಗೆ 12ಮಂಗಲಂ ಪ್ರದ ಚರಿತ್ರೆಯಾಭಕುತಿಯಿಂ ಪೇಳಿ ಕೇಳಿದ ಜನಕೆಹಿಂಗದೆ ಸಕಲ ಸೌಭಾಗ್ಯ ಸಂಪದ ವೀವಾಅಂಗಜಪಿತ ತಂದೆಸಿರಿವಿಠಲ ಸ್ವಾಮಿ 13ಶ್ರೀಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನುನೀರಜನಾಭನ ಕರುಣೆಯಿಂದಲಿ ತಾಭೂರಿಸಂಪದಸಿರಿಭೋಗಿಸುತಿದ್ದನು 14ಶ್ರೀ ಸುಧಾಮ ಚರಿತ್ರ ಸಂಪೂರ್ಣಂ
--------------
ಸಿರಿವಿಠಲರು