ಭೋ ಶುಭಕಾಯ ಕೇಶವರಾಯ
ದಾಸರ ಪ್ರಿಯ ಶೇಷಶಯ್ಯ ಪ
ಹೇಸಿಕೆ ಮಾಯ ಮೋಸದ ಬಲೆಯ
ನಾಶನಗೊಳಿಸಿ ಪೋಷಿಸೆನ್ನಯ್ಯ ಅ.ಪ
ನಶಿಪ ಸಂಸಾರ ವಿಷಯದ ಘೋರ
ಪುಸಿಯೆಂದೆನಿಸಿ ನಿಜಧ್ಯಾಸವ ಕರುಣಿಸೊ 1
ಅಜ್ಞಾನವಳಿಕಿಸಿ ಸೂಜ್ಞರಸಂಗದಿ
ಮಗ್ನನೆನಿಸಿ ನಿರ್ವಿಘ್ನದಿ ರಕ್ಷಿಸೊ 2
ಸಾವ ಹುಟ್ಟುವ ಮಹನೋವ ಗೆಲಿಸಿ ಜಗ
ಜೀವ ಶ್ರೀರಾಮ ತವಸೇವಕನೆನಿಸೊ3