ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರ ನಿನ್ನದು ದೇವಾ ಭಕುತ ಸಂಜೀವಾ ಪ ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ. ಮೂರನೆ ಗುಣದಿಂದ ಮತ್ತನಾಗಿ ಬಹಳ ಮೂರು ವಿಧ ವಿಷಯದಲಿ ಮಗ್ನನಾದೆ ಮೂರುಖಾಗ್ರೇಸರಿಗೆ ಮುಂದಾವಗತಿಯೈಯ ಮೂರಾವತಾರವುಳ್ಳ ಮರುತಾತ್ಮಜನೆ 1 ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ ಆರು ವೈರಿಗಳು ಕಂಡಾವಾಗಲೂ ಆರು ಬಿಡಿಸದ ಬವಣೆ ಬಡಿಸುತಲೈದಾವರೆ ಆರೆರಡು ಪೆಸರುಳ್ಳ ಅಂಜನಾತ್ಮಜನೆ 2 ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ ಪಂಚಮಹಾ ಪಾತಕಕೆ ಎಳೆಯುತಾರೆ ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ ಪಂಚಪದಕವೇ Pದರುಂಡಲಗಿ ಹನುಮಯ್ಯ 3
--------------
ಕದರುಂಡಲಗಿ ಹನುಮಯ್ಯ
ಶೇಷ ಪರ್ಯಂಕ ಶಯನ ವಿಷಯದಭಿ ಲಾಷೆ ಪರಿಹರಿಸಿ ಕಾಯೋ ಪ ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
--------------
ಜಗನ್ನಾಥದಾಸರು
ಸ್ವಾಮಿ ನಿನಗೆ ಶರಣನೆಂಬೆ ಸೋಮನಾಥಾ ಸಕಲ ಕಾಮಿತಾರ್ಥವಿತ್ತು ಸಲಹೊ ಸೋಮನಾಥಾ ಪ. ಹರಿಯ ಕರುಣಾ ಬಲದಿ ನೀನು ಸೋಮನಾಥಾ ಸರ್ವ ಸುರರಿಗೆಲ್ಲ ಧೊರೆಯಾಗಿರುವಿ ಸೋಮನಾಥ ಪಾದ ನಂಬಿ ಸೋಮನಾಥ ಮೊರೆಯ ಹೊಕ್ಕೆ ನಿಂದು ಬಂದು ಸೋಮನಾಥ 1 ವಿಘ್ನರಾಜ ನಿನ್ನ ಮಗನು ಸೋಮನಾಥಾ ಬೇಗ ಭಸ್ಮಗೈಸು ವೈರಿಗಳನು ಸೋಮನಾಥಾ ಮಗ್ನನಾದೆ ಮಹಾಂಬುಧಿಯೊಳ್ ಸೋಮನಾಥಾ ಸರ್ವ ವಿಘ್ನವೋಡಿಸೈ ಕೃಪಾಳೊ ಸೋಮನಾಥ 2 ಶಂಕರ ಕೈಪಿಡಿಯೊ ತ್ರಿಪುರ ಬಿಂಕವಾರಿ ಶ್ರೀ- ವೆಂಕಟಾದ್ರಿನಾಥನ ಮನೋನುಸಾರೀ ಕಿಂಕರನೆಂದೆನಿಸೆನ್ನ ಮೃಗಾಂಕಧಾರೀ ಪಾದ- ಪಂಕಜವ ನೀಡು ಸರ್ವಾತಂಕಹಾರೀ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಯೆ ಎನಗಾರು ಗತಿಯೊ ನೀನಲ್ಲದೆ ಪ.ಹಿಂದಿನಾಪತ್ತು ಮರೆತೆಇಂದುಮಾಯದಿ ಬೆರೆತೆಒಂದುಗೂಡಿದವುಅಘಮುಂದಿನರುಹಿಲ್ಲ1ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುವಿಗಡಕಾವನ ತಡೆ ತಗಲು ಬಿತ್ತೊ ರಂಗಾ2ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ 3ಅಜ್ಞಾನೆಂಬಹಿ ಕಚ್ಚಿ ಯಜೆÕೀಶ ನಿನ್ನಂಘ್ರಿಸಂಜÕವಿಲ್ಲದೆ ದು:ಖ ಮಗ್ನನಾದೆನಲ್ಲೊ 4ಶ್ರೀ ಪ್ರಸನ್ವೆಂಕಟೇಶ ತಾಪತ್ರಯವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು