ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮ ಕ್ರೋಧವನು ಬಿಡು ತಾಮಸಗುಣವ ಸುಡು ಪ ರಾಮನಾಮ ಜಪಿಸಿ ರಾಜಯೋಗದಲ್ಲಿ ಸೇರು ಅ.ಪ ಜ್ಞಾನಭಕ್ತಿ ವೈರಾಗ್ಯವೆಂಬಾನಂದದಿ ಮಗ್ನನಾಗಿ ಹೀನದುರ್ವಿಷಯಗಳೇನು ಕೋರದಿರೆಲವೊ1 ತತ್ವೋಪದೇಶವ ತೋರು ಸಾತ್ವಿಕರೊಳಗೆ ಸೇರು ಮಾನವ ನೀ 2 ಸಿರಿ ಚರಣಗಳ ಭಜಿಸಿ ಪರಮ ಸುಖಿಯಾಗೆಲೋ 3
--------------
ಗುರುರಾಮವಿಠಲ
ತಿಳಿದು ನೋಡಲೆ ಮನವೆ ತೀವ್ರ ತಾಮಸವೇಕೆ ತಿಳಿದುಕೋನಿನ್ನ ನೀನು ತಿಳಿಯೆ ಮಾಯೆಗಳಿಲ್ಲ ತಿಳಿಯೆ ಶಿವನಾಗುತಿಹೆಬಲುಮರವೆ ಯಾಕೆ ಪಾಪಿ ಮನವೆ ಪ ಶೂನ್ಯ ದುರಿತ ಭಂಗತರ ತರಂಗ ಮೂರ್ತಿಜಂಗಮನೆ ನೆಲೆಸಿಹನು ಜನಿಸಿನೀ ನಿನ್ನೊಳಗೆ ಕಣ್ಗಾಣದಿಪ್ಪೆ ಗುರುವ ಮನವೆ 1 ಮಾಯೆ ಮೋಹಕೆ ಸಿಲುಕಿ ಮಗ್ನನಾಗಿರುತಿಹೆ ಕಾಯವಿದು ನಿನಗೆ ಸ್ಥಿರವೇಆಯಾಸಂಬಡಬಹುದೆ ಅಲ್ಪ ಮತಿಗಳ ಕೂಡಿ ನ್ಯಾಯವೆ ನಿನಗೆರಾಯ ನಾನೆಂಬ ಹೆಮ್ಮೆಯ ತಾಳ್ದು ರತಿ ಬಹಳ ಸ್ತ್ರೀಯರಲಿ ಸೊಗಸಬಹುದೇಮಾಯಕಿಂತಕಟ ನೀ ಶಿಲ್ಕಿ ಒಳಗಾಗುವುದುಮಾಯವೋ ಇದು ಮಹಿಮೆಯೋ ಮನವೇ 2 ಎನ್ನ ಸತಿಸುತ ಬಂಧು ಎನ್ನ ಗೃಹವು ಇದೆಂದು ಬನ್ನಬಡುತಿಹೆ ಯಾತಕೆನಿನ್ನೊಳಗೆ ಇಹ ವಸ್ತು ನೀನೆ ಕಾಣದಲಿರೆ ಮನ್ನಿಸಾ ಗುರುಹಿರಿಯರಉನ್ನತ ಕಟಾಕ್ಷದಲಿ ಒಳಗೆ ದೃಷ್ಟಿಸಿ ಕಂಡು ನಿನ್ನೊಳಗೆ ಪುಳಕನಾಗುಚಿನ್ಮಯ ಚಿದಾನಂದ ಚಿದ್ರೂಪ ತಾನೆಂದುನಿನ್ನ ಸಂಶಯ ಕಳೆಯೋ ಮನವೇ 3
--------------
ಚಿದಾನಂದ ಅವಧೂತರು
ಮಾಯಾದೊಳಗೆ ಶಿಲ್ಕಿ ಮಗ್ನನಾಗಿ ಮರವೆಗೆ ಒಳಗಾದೆ ಕಾಯಬೇಕಯ್ಯ ನಿನ್ನ ಕರುಣ ರಸವನ್ನು ಕಾಣದೆ ನಾ ಬರಿದೆ ಪ ದೀನದಯಾಪರ ದನುಜಾಂತಕ ನಿಧಾನ ಸುಜನವಂದ್ಯಾ ಮಾನವಾದಿ------ಜನಕ ಸನ್ಮಾನಿತ ಮುಚುಕುಂದ ನಿತ್ಯ ಶ್ರೀ ರಂಗಾ 1 ಇತರ ಜ್ಞಾನತೊರೆದು ಮನಬಣ್ಣ ಮರೆದು ಪಾದ ಸೌಖ್ಯವ ಕಾಣದಿನ್ನೂ ಪಿಡಿವರು ಇನ್ನೂ 2 ಏಸೋ ಬಾರಿ ನಾ ಹುಟ್ಟಿದರೇನು ಇನ್ನು ನಿನ್ನ ಕಾಣದೆ ಮನವು ನಿನ್ನಲ್ಲಿಲ್ಲದೆ ಘಾಸಿಗೆ ಬಿದ್ದೆನು ಕರುಣಿಸೊ ಬೇಗನೆ ಘನ್ನ `ಹೆನ್ನ ವಿಠ್ಠಲನೆ ' ವಾಸುದೇವ ಎನ್ನ ವೈನದಿ ರಕ್ಷಿಸೋ ವಸುಧೆಯ ಪಾಲಕ 3
--------------
ಹೆನ್ನೆರಂಗದಾಸರು
ವಿವೇಕದಿಂದಾ ಮತಿಯುಕ್ತನಾಗಿ ಕುವಿದ್ಯದಾದಾ ಗುಣವೆಲ್ಲ ನೀಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದದಾಮೋದರ ಮಾಧವೇತಿ 1 ತ್ರಿವಿಧ ತಾಪದೊಳು ಮಗ್ನನಾಗಿ ನೀವ್ಯರ್ಥದಿನಗಳಿಯದೆ ಹೋಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 2 ಈ ವಿಷಯದಾಸುಖ ನಿತ್ಯವಲ್ಲಾ ನೀವಾತು ಕೇಳಿಗುರುವೀನ ಸೊಲ್ಲಾ ಭಾವಾರ್ಥದಿಂದ ಸ್ಮರಿಸೂದು ನೀತಿ ಗೋವಿಂದ ದಾಮೋದರ ಮಾಧವೇತಿ 3 ಆವದು ತನ್ನ ಹಿತವನು ನೋಡಿ ಸಾವಧನಾಗೀ ಶ್ರವಣ ಮಾಡಿ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 4 ಅವಾವ ಯೋನಿಯಲಿ ಬಂದಹಿಂದಾ ಅವದುಗತಿಯಂದು ನೋಡಿವಂದಾ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 5 ತಾವಂದೇ ಆಶ್ರೈಸದೆ ಕಾಮಧೇನು ಸಾವಿರ ಸಾಧನಕ ಬೀಳುದೇನು ಬಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 6 ಜೀವಾತ್ಮರಾಗಿ ಸಚ ರಾಚ ರಾವ ಬಾವರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೊದರ ಮಾಧವೇತಿ 7 ಗೋವಿಂದ ಅಷ್ಟಕವ ದಾವಪ್ರಾಣೀ ಸೇವಿಸುವನು ಕಾವನು ಚಕ್ರಪ್ರಾಣೀ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ ಪರಿ ಅನುಭವ ಬಡುತಾ ಇನ್ನೂ ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ ಭಂಗ ಬಡುತಲಿಷ್ಟು 1 ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ 2 ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು ನನ್ನ----ಯು ವೃತ್ತಿ ನನ್ನದೆಂದೂ ನಿತ್ಯ ಒಂದಾಡುವೆ ನೀದಾರೋ ಮೂಢಾ 3 ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ 4 ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು ಕಾಯಾ ಅಸ್ಥಿರವೆಂದು ಕಾಣೋ----- ಶ್ರೀಯರಸ 'ಹೆನ್ನ ವಿಠ್ಠಲ’ರಾಯನ ಕರ್ಮ ಧ್ಯಾನವು ಬಿಟ್ಟು 5
--------------
ಹೆನ್ನೆರಂಗದಾಸರು
ಶ್ರೀರಾಮ ನಿನ್ನ ಪದಕೆರಗಿ ನಮಿಸಿವೆನು ತೋರೆನಗೆ ನಿಜರೂಪ ಪರಿವಾರ ಸಹಿತ ಪ. ಶ್ರೀ ಗುರುಗಳಿಗೆರಗಿ ಅವರ ಕರುಣಾಬಲದಿ ಈಗ ಈ ಜನ್ಮದಲಿ ನಿನ್ನ ಭಜಿಪೆ ನಾಗಶಯನನೆ ನಿನ್ನ ಜನ್ಮಕರ್ಮದ ದಿನದಿ ಬೇಗ ಬಂದೆನ್ನೊಳಗೆ ನೆಲಸಿದೆಯೊ ದೇವ 1 ನಿನ್ನ ದರುಶನಕೆಂದು ಘನ್ನ ಯೋಗಿಗಳು ಬರೆ ಮನ್ನಿಸೆ ಇರುತಿರಲು ದ್ವಾರಪಾಲಕರು ಇನ್ನವರ ಶಾಪದಲಿ ದೈತ್ಯಕುಲದಲಿ ಜನಿಸೆ ಮುನ್ನವರ ಪೊರೆಯಲು ಭೂಮಿಯೊಳು ಬಂದೆ 2 ದಶರಥಗೆ ಸುತನಾಗಿ ತಾಟಕಿಯ ಸಂಹರಿಸಿ ಅನುಜ ಕುಶಲದಿಂದಲಿ ಶಿಲೆಯ ಹೆಣ್ಣುಗೈಯುತ ಬಂದು ಶಶಿಮುಖಿ ಸೀತೆಯನು ಕರಪಿಡಿದ ದೇವ 3 ಧನುವ ಮುರಿದುದ ಕೇಳೀ ಜಮದಗ್ನಿ ಕುವರನು ನಿನ ಸಂಗಡದಲಿ ಕಾಳಗಕೆ ಬರಲು ದನುಜರಿಗೆ ಭ್ರಮೆಗೊಳಿಸಿ ಕನಲುತಿಬ್ಬರು ಕಾದಿ ಘನಬಲ ಗೆಲಿದಂಥ ಅನುಗುಣನೆ ರಾಮ 4 ಅನುಜ ಸೀತೆ ಸಹಿತದಿ ವನಕೆ ಪ್ರೀತಿಯಿಂದಲಿ ಪೋದೆ ನೀತಿಯನು ತಿಳಿದು ಪಾತಕವ ಹರಿಸುವ ಪರಮ ಪಾವನ ಮೂರ್ತಿ ಈ ತೆರದ ಲೀಲೆಯನು ತೋರಿದೆಯೊ ಜಗಕೆ 5 ಕಂಡು ಮಾಯಾಮೃಗವ ಅಂಡಲೆದು ಅದರೊಡನೆ ಭಂಡ ರಾವಣ ಬಂದು ಭಿಕ್ಷುಕನ ತೆರದಿ ಲಂಡನತದಲಿ ಸೀತೆಯನು ಕದ್ದು ಓಡಲು ಕಂಡು ನಿರ್ಜನ ಗೃಹವ ಬೆಂಡಾದ ರಾಮ 6 ಅನುಜನೊಡನೆ ವನವ ಅಲೆದಲೆದು ಕಂಗೆಟ್ಟು ಘನ ಪಕ್ಷಿಯಿಂದಲಿ ವಾರ್ತೆ ತಿಳಿದು ಹನುಮ ಸುಗ್ರೀವರಿಗೆ ಒಲಿದು ವಾಲಿಯ ಕೊಂದು ವನಿತೆ ಸೀತೆಯನರಸೆ ವಾನರರ ಕಳುಹಿದೆ 7 ಹನುಮನಿಂದಲಿ ಸುಟ್ಟು ದನುಜಪುರ ಉಂಗುರವ ವನಿತೆ ಸೀತೆಗೆ ಕೊಟ್ಟು ವಾರ್ತೆ ತರಿಸಿ ವನಧಿಗೆ ಸೇತುವೆಯ ಕಟ್ಟಿ ವಾನರರೊಡನೆ ದನುಜ ರಾವಣ ಸಹಿತ ರಕ್ಕಸರ ಕೊಂದೆ 8 ಅಗ್ನಿಯಿಂ ಸೀತೆಯನು ಶುದ್ಧಳೆನಿಸಿ ಗ್ರಹಿಸಿ ವಿಘ್ನವಿಲ್ಲದ ಪದ ವಿಭೀಷಣಗಿತ್ತು ಮಗ್ನನಾಗಿರೆ ಭರತ ನಿನ್ನ ಪದಧ್ಯಾನದಲಿ ಅಗ್ನಿಸಖಸುತನೊಡನೆ ವಾರ್ತೆ ಕಳುಹಿಸಿದೆ 9 ಬಂದೆದುರುಗೊಳ್ಳೆ ಭರತನು ಸಕಲ ಪರಿವಾರ ಬಂದಯೋಧ್ಯೆಗೆ ಸಕಲ ಸನ್ನಾಹದಿ ಅಂದು ಸಿಂಹಾಸನದಿ ಪಟ್ಟಾಭಿಷೇಕವಗೊಂಡು ಬಂದ ಭಕ್ತರಿಗೆ ಇಷ್ಟ್ಟಾರ್ಥ ಸಲಿಸಿದೆಯೊ 10 ಕೊಟ್ಟು ಕಪಿಗೆ ಬ್ರಹ್ಮಪಟ್ಟದ ಪದವಿಯನು ಶ್ರೇಷ್ಠನೆನಿಸಿದೆಯೊ ಜಗಕೆ ಬೆಟ್ಟದೊಡೆಯ ಇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಎನಗೆಕೆಟ್ಟ ಸಂಸೃತಿ ಬಿಡಿಸಿ ಕೊಟ್ಟಭಯ ಸಲಹೊ 11
--------------
ಅಂಬಾಬಾಯಿ