ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ ಪೊಳೆವ ನಂದನವನದಲಲರ್ದ ಮಾವಿನ ನೆಳಲ ಲಲರುವಾ ಸಿರಿತೋಳ ತಲೆಗಿಂಬನೊರಗೀ ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ ವಿಲಸಿತದ ಸರಸ ವಚನವ ಚೆನ್ನರಾಯಾ 1 ಬೆಳದಿಂಗಳೆರಕದಂದದ ಸಾರದ್ಹಂದರದಿ ಪೊಳೆವಿಂದುಕಾಂತದ ಜಗುಲಿಯೊಳೆನ್ನ ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ ಕಲೆಯರಿತು ಮೈಮರಸಿದುದ ಚನ್ನರಾಯಾ 2 ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ- ರಿನ ಮಂಚದಲಿ ಹಂಸತೂಲ ತಲ್ಪದಲಿ ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ- ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ 3
--------------
ಬೇಲೂರು ವೈಕುಂಠದಾಸರು
ಕೋಲ ಕೋಲೆನ್ನ ಕೋಲಕೋಲ ಕೋಲೆನ್ನ ಕೋಲಕೋಲಾಹಲವ ಮಾಡಿ ಬಾಲೆಯರು ಪಾರ್ಥಗೆ ಕೋಲ ಪ ಕಟ್ಟಿ ಜಾನ್ಹವಿಯಲ್ಲಿ ಬಿಟ್ಟು ಬದುಕಲು ಭೀಮ ಥಟ್ಟನೆ ಮಗ್ಗಲ ಹಚ್ಚಿ ಬಿಟ್ಟಿತು ಸರ್ಪಪ್ರಾಣ1 ಕುಸುಮದಂಥವಳಿಗೆ ಸವಳ ಪುರುಷನು ವಿಷದ ಲಡ್ಡಿಗೆ ತಿಂದು ಭಸ್ಮ ಮಾಡಿದ ಭೀಮ2 ಲಜ್ಜೆ ಬಿಟ್ಟು ಅರ್ಜುನ ಖೋಜಾನೆಂದೆನಿಸಿಕೊಂಡಿವಜ್ರ್ಯವಾಯಿತು ಮಾನ ನಿರ್ಜರೋತ್ತಮ ನಕ್ಕ3 ಹೆಣ್ಣಲ್ಲ ಗಂಡಲ್ಲ ಬಣ್ಣ ವಿಷ್ಟ್ಯಾಕೊ ನಿನಗೆ ಸಣ್ಣದಿ ನೆನೆದು ಕೀರ್ತಿ ಅಣ್ಣ ಬಲರಾಮನಕ್ಕನು 4 ಶೂರತನ ವೆಲ್ಲ ನೀಗಿ ಸೀರೆಯನುಟ್ಟುಕೊಂಡಿಬಾರದೆ ನಾಚಿ ನಿಂತೆಶೌರಿ ರಾಮೇಶನಕ್ಕನು ಕೋಲ5
--------------
ಗಲಗಲಿಅವ್ವನವರು