ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯಕಾಲದೊಳೆದ್ದು ಗೋಪಿಯು ದಧಿಯ ಮಥಿಸುವ ಎಂಬ ಸಮಯದಿ ಉದರಗಣ್ಣನು ಎದ್ದು ತೊಟ್ಟಿಲೊಳ್ ತೊದಲು ನುಡಿಗಳಿಂ ಕರೆದ ತಾಯಿಯ 1 ನುಡಿಯ ಲಾಲಿಸಿ ನಳಿನನೇತ್ರನು ಕರೆದ ಹಾಲನು ಕೊಡುವೆನೆಂದರೆ ಕೊಡುವೆನೆಂದರೆ ಕಣ್ಣಮುಚ್ಚನು ಒಡನೆ ಮಲಗುವ ಮಲಗದೇಳುವ 2 ನಿದ್ರೆ ತೀರದೆ ನೀ ಎದ್ದ ಕಾರಣ ಬುದ್ಧಿ ಸಾಲದು ಮುದ್ದು ಮಗುವಿಗೆ ಒದ್ದು ಕೆಲಸವ ತಿದ್ದಿ ಉನ್ಮತ ಅಮ್ಮ ಬಾರೆಲೆ ಎನ್ನಗಲಬೇಡವೆ 3 ಗುಮ್ಮ ಬರುತದೆ ಗುಸುಗುಸೆನುತದೆ ಶ್ರೀದವಿಠಲನಾ ಶ್ರೀಲತಾಂಗಿಯು ಮೋದಪಡಿಸುವ ಮಾನವೀಯಳೇ ವೇದಗೋಚರ ನೀ ಏಳಬೇಡವೋ ಪಾದಕೆರಗುವೆ ಪವಡಿಸೆಂದಳು 4
--------------
ಶ್ರೀದವಿಠಲರು
ಧರ್ಮವೆಂದೆನಿಪ ಮಾರ್ಗವನು ಬಿಟ್ಟುಕರ್ಮವೆಂದೆನಿಪ ಕಾನನವ ಪೊಕ್ಕುದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿಕರ್ಮಪಾಕದಲಿ ಸಾರುತಿದೆ ಜಗದಿ ಪ ಹರಿಹರ ವಿಭೇದಗೈದವಂಗೆ ದಂತಚ್ಯುತವುಗುರುದೈವಗಳ ನಿಂದೆಗೈದವಗೆ ಉನ್ಮದವುಪರಸತಿಯ ಕಾಮಿಸಿದವಗೆ ಪಾಂಡು ರೋಗವುಕೆರೆಗಳನು ಒಡೆಸಿದಾತಗೆ ಶೀತಜ್ವರವುಹಿರಿಯರನು ಜರಿದವಗೆ ಪೀನಾಶಿ ರೋಗವುಧರೆಯನಳಿಸಿದವಗೆ ಸರ್ವಾಂಗ ಪರಿಶ್ವೇತವುಪುರ ಅಗ್ರಹಾರ ಕೆಡಿಸಿದವಗೆ ರಾಜರೋಗವೆಂದುಅರಿವುದು ಸಕಲ ಜನರು 1 ಕಥೆ ಪುರಾಣಗಳ ಹಳಿದವಗೆ ಕಾಸಶ್ವಾಸಮತಭೇದವನು ಮಾಡಿದವಗೆ ಮೂಲವ್ಯಾಧಿಪಿತಮಾತೆಯರ ಸಲಹದವಗೆ ಗಂಡಾಮಾಲೆಯತಿಗಳನು ನಿಂದಿಸಿದವಗೆ ಸನ್ನಿಪಾತ - ಪರಸತಿಯರಿಗೆ ಅಳುಪಿದಾತಗೆ ಮೂತ್ರ ಕೃಚ್ರಪತಿವ್ರತೆಯರ ಪೀಡಿಸಿದವಗೆ ಅತಿಸಾರಮತಿಗೇಡಿ ಮೂರ್ಖನಿಗೆ ಕ್ಷಯರೋಗ - ಇದುಕ್ಷಿತಿಯೊಳಗೆ ಸಿದ್ಧಾಂತ 2 ಶಿಶು ಹತ್ಯೆ ಗೈದವಗೆ ಕುಕ್ಷಿಶೂಲೆಪಶುಗಳನು ಮರ್ದಿಸಿದವಗೆ ಪ್ರಮೇಹವುಉಸಿರಲೇಕಿನ್ನು ಸ್ವಾಮಿದ್ರೋಹಿಗೆ ಬಹುಮೂತ್ರಪುಸಿಯನಾಡುವ ಪುರುಷಗೆ ರಕ್ತ ಕಾಳಿಹಸಿದವರಿಗನ್ನವಿಕ್ಕದವಗೆ ಆಮ್ಲಪಿತ್ತವೃಷಭವನು ಒದ್ದವಗೆ ಬಿಗರುವಾತಮುಸುಕುವುದು ವಿಶ್ವಾಸಘಾತಕಗೆ ನರರೋಗಪುಸಿಯಲ್ಲವಿದು ಕೇಳಿ ಜನರು 3 ಕೊಟ್ಟು ಭಾಷೆಯ ತಪ್ಪಿದವಗೆ ಉಪಜಿಹ್ವೆಕೊಟ್ಟು ತುಪ್ಪಿದವಗೆ ಕರಕಂಪನಕೊಟ್ಟರೂ ಕೊಡಲಿಲ್ಲವೆಂಬವಗೆ ಉದರರೋಗಕೊಟ್ಟವರಿಗೆರಡು ಬಗೆವಗೆ ಮೇಹರೋಗಅಷ್ಟಮದದಿಂದ ಮೆರೆವವಗೆ ಬೆರಗಿನ ರೋಗಬಟ್ಟೆಯೊಳು ಮುಳ್ಳು ಹರಡಿದವಗೆ ನೇತ್ರವ್ಯಾಧಿಹುಟ್ಟುವುದು ಕಂಕಣ ಕಂಟಕಗೆ ಕುಷ್ಠರೋಗಕಟ್ಟಿಟ್ಟ ಬುತ್ತಿ ಇದು4 ಕರ್ಮ ಬಲ್ಲವರಾರುಎಂದು ಮಂದಮತಿಗಳಾಗಿ ಕೆಟ್ಟಳಿಯದಿರೆಹಿಂದಣದೆಲ್ಲವೂ ಬಹದೆಂಬುದಕೆ ಸಾಕ್ಷಿಇಂದು ಕಣ್ಣೆದುರೆ ಜಗದೊಳಗೆ ತೋರುತಿಹುದಿಗೊಚಂದದಲಿ ತಾಯಿ ಮಗುವಿಗೆ ಮೊಲೆಯ ಹಾಲುಣಿಸುವಂದದಲಿ ಉಣಿಸಿದಲ್ಲದೆ ಬಿಡದು ಮರೆಯದಿರಿಕಂದರ್ಪಪಿತ ಸೊಂಡೆಕೊಪ್ಪದಾದಿಕೇಶವನಮುಂದರಿತು ಭಜಿಸಿ ಮುಕ್ತಿಯ ಪಡೆಯಿರಣ್ಣ5
--------------
ಕನಕದಾಸ
ಮಾಡಲೋ ಹರಿಪಾದ ಭಜನಿ| ಮನವೇ ನೀ| ಪಾತಕ ಓಡಿಸಿ ಕಳೆವದು| ಕಾಡಿಗೆ ಕೊಂಡಾ ವಾಡಬನಂತೆ ಪ ಸಿಕ್ಕದು ನರದೇಹಲಿಂದು|ಜನಿಸಿ ಬಂದು| ಪುಕ್ಕಟೆ ನೀಗುವದು ಕುಂದು| ಅಕ್ಕರದಲಿ ವಿಷಯಕ್ಕೆಳಿಸುತಾ|ಭವ| ದಿಕ್ಕಲು ಸಾರುತ ಠಕ್ಕಿಸಿ ಕೊಂಬರೆ 1 ಸಂತರ ಸಹವಾಸ ಮಾಡೀ|ಕರುಣ ಬೇಡಿ| ಅಂತರ ಸುಖವನು ಕೂಡಿ| ತಂತು ವಿಡಿದು ನಿಶ್ಚಿಂತದಿ ಘನ|ವಿ| ಶ್ರಾಂತಿ ಪಡೆದು ಅನಂತನ ಪಾಡುತ2 ಭಕುತಿಯ ಸವಿಸಾರವೆಲ್ಲಾ|ಬಲ್ಲವನೇ ಬಲ್ಲಾ| ಮುಕುತಿಯೊಳಗೆ ಸುಖವಲ್ಲಾ| ಪ್ರಕಟದಿ ಮಹಿಪತಿ ಮಗುವಿಗೆ ಭೋಧಿಸಿ| ತಗಬಗಿ ಬಿಡಿಸಿದ ನಗೆ ಮೊಗದಿಂದ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು