ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡೆ ನೋಡೆ ನೋಡೆ ಗೋಪಿನೋಡೆ ನಿನ್ನ ಮಗನಾಟವ ಪ. ಮಧುರೆಯೊಳಗಿರುವೋದೆ ಕಠಿಣವೆಮದನಜನಕನ ಕಾಟವೆ ಹೆದರಿಸಿಬೆದರಿಸಿ ನಮ್ಮಾ ನಮ್ಮಗುಗಳ ಚೂಟೋಡಿ ಹೋದನೆ1 ನಿನ್ನಿನಾ ದಿನದಲ್ಲಿ ಬಂದುಗನ್ನಗತಕ ಕೃಷ್ಣನುಹೆಣ್ಣಮಕ್ಕಳ ಕಣ್ಣ ಮುಚ್ಚಿಬೆಣ್ಣೆಯ ಮೆಲುವುತ ಓಡಿದ2 ಜಾರಬುದ್ಧಿ ಮಾಡದಿರೆಂತಪೇಳಿದೆವು ಬಹಳ ನಾವುಕಂಸಾಂತಕ ಕೃಷ್ಣ ನಮ್ಮನೆಹಾಳುಮಾಡಿ ಹೋಳಿ ಆಡಿದ 3 ಗೋಪಿ 4 ಸರಸ ತೇಜಿಯನೇರಿ ಮೆರೆವನೆಹರುಷ ಹಯವದನ ಕಾಂತನೆಪರಮಪಾವನಚರಿತ್ರಗಾತ್ರನೆಹರುಷದಿ ಭಕ್ತರನು ಪೊರೆವನೆ 5
--------------
ವಾದಿರಾಜ
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಜಗದುದ್ಧಾರಕ ತನ್ನ ಮಗನೆಂದು ಬಗೆದು |ನಿಗಮಗೋಚರನ ಆಡಿಸಿದಳು ಯಶೋದೆ ಪವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-ಗುಟವ ಪೀರುವನ-ಆಡಿಸಿದಳು 1ವಿಶ್ವತಶ್ಚಕ್ಷುವ ವಿಶ್ವತೋಮುಖನ |ವಿಶ್ವವ್ಯಾಪಕನ-ಆಡಿಸಿದಳು 2ಅಣೋರಣಿಯನ ಮಹತೋಮಹೀಯನ |ಗಣನೆಯಿಲ್ಲದವನ-ಆಡಿಸಿದಳು 3ನಿಗಮಕೆ ಸಿಲುಕದಅಗಣಿತಮಹಿಮನ |ಮಗುಗಳ ಮಾಣಿಕ್ಯನ-ಆಡಿಸಿದಳು 4ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |ವಲ್ಲಭಪುರಂದರವಿಠಲನ-ಆಡಿಸಿದಳು5
--------------
ಪುರಂದರದಾಸರು
ಪೋಗದಿರಲೊ ರಂಗ-ಬಾಗಿಲಿಂದಾಚೆಗೆ |ಭಾಗವತರು ಕಂಡರೆತ್ತಿಕೊಂಡೊಯ್ವರೊ ಪಸುರಮುನಿಗಳು ತಮ್ಮ ಹೃದಯಗಹ್ವರದಲಿ |ಪರಮಾತ್ಮ ನಿನ್ನ ಕಾಣದರಸುವರೊ ||ದೊರಕದ ವಸ್ತುವು ದೊರೆಕಿತು ತಮಗೆಂದು |ಹರುಷದಿಂದ ನಿನ್ನ ಕೆರೆದೆತ್ತಿಕೊಂಬರೊ 1ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ |ಹಗರಣಮಾಳ್ಪರೊ ಗೋಪಾಲನೆ ||ಮಗುಗಳ ಮಾಣಿಕ್ಯ ತಗುಲಿತು ಕರೆತಂದು |ಮಿಗಿಲು ವೇಗದಿ ಬಂದು ಬಿಗಿದಪ್ಪಿಕೊಂಬರೊ 2ದಿಟ್ಟ ನಾರಿಯರು ತಮ್ಮಿಷ್ಟವ ಸಲಿಸೆಂದು |ಅಟ್ಟಟ್ಟಿ ಬೆಂಬತ್ತಿ ತಿರುಗುವರೊ ||ಸೃಷ್ಟೀಶ ಪುರಂದರವಿಠಲ ರಾಯನೆ |ಇಷ್ಟಿಷ್ಟು ಬೆಣ್ಣೆಯ ಕೊಡುವೆನೊ ರಂಗಯ್ಯ 3
--------------
ಪುರಂದರದಾಸರು