ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಜನಯನನ ಕಂಡೆ ಕಾಮನಯ್ಯನ ಪ. ಮಂಜುಗುಣಿಯೊಳಿಪ್ಪನ ತಿಮ್ಮಪ್ಪನಅ.ಪ ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವಕಟ್ಟಿದ ಕಠಾರಿಯಿಂದ ದುಷ್ಟರ ಹುಡಿಗುಟ್ಟುವ 1 ಚಕ್ರ ಶಂಖಧರನಾಗಿ ಕಕ್ಕಸರ ರಕ್ಕಸರಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ 2 ಆಗಮವೈರಿಯನು ಕೊಂದಾಗ ಹಯವದನನ್ನಈಗ ಮಾನಿಸರಿಗೆ ಸೌಭಾಗ್ಯವೀವ ದೇವನ3
--------------
ವಾದಿರಾಜ
ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ ತಿರುಪತಿ ವೇಂಕÀಟರಮಣ ಪ ಸ್ವಾಮಿ ಪುಷ್ಕರಿಣಿಯ ತಟದಿ ವಾಸ ಮಾಡಿಕೊಂಡಿರುವೆಯೊ ನೀನು | ಭೂಮಿಯೊಳಗೆಲ್ಲ ಸಾಧು ಸಜ್ಜನರು ನೇಮದಿಂದಲಿ ನಿನ್ನ ಸೇವಿಪರು 1 ಮಂಜುಗುಣಿಯ ಪುರದೊಳಗೆ ಬಂದು ಕಂಜಾಕ್ಷ ವರ ಚಕ್ರ ಶಂಖ ಮತ್ತೆ ಶರಚಾಪಗಳನ್ನೆತ್ತಿ ಮೆರೆದೀ 2 ಜಗಕೆಲ್ಲ ಶೇಷಾದ್ರಿಯಂಥ ಕ್ಷೇತ್ರವಿಲ್ಲೆಂದು ತೋರಿಸುತಿರುವಿ | ಖಗವರನನ್ನೇರಿ ತಿರುಗಿ ಬಂದು ತಿರುಪತಿ ಕ್ಷೇತ್ರದೊಳಿರುವಿ 3 ಪಾದ ಮುಟ್ಟದೆ ಜಾನುಗಳಿಂದ | ಬಂದು ಸಾಲಿಗ್ರಾಮದ ಮಾಲೆಯನ್ನು ಪಾದಕರ್ಪಿಸಿ ಸ್ತುತಿಸಿದರು ನಿನ್ನ 4 ಬಂದು ರಾಜೇಶ ಹಯಮುಖ ನಿನಗೆ | ಮಾಲೆ ಹಾಕುತ ಮುಂದೆ ನಿಂದಳು ಶಂಕೆಯಿಲ್ಲದೆ ನಮಿಸಿದಳು ಮುದದಿ 5
--------------
ವಿಶ್ವೇಂದ್ರತೀರ್ಥ