ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ್ನಿಸೊ ಶ್ರೀ ವೆಂಕಟೇಶ ಮಂಜುಗುಣಿಪುರ ವಾಸ ಪ. ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ ಅ.ಪ. ದೇಶದೇಶದಿಂದ ಬಂದ ಜನರಿಗೆ ಮುದದಿಂದ ಲೇಸಿನ ವರನನೀವೆ ನಿರುತ ಕಾವೆ ಭಾಸುರ ಮೋಹನವೇಷ ಭಾನುಕೋಟಿಸುಪ್ರಕಾಶ ಶ್ರೀಸತಿಯ ಪ್ರಾಣೇಶ ಶ್ರೀ ಶ್ರೀನಿವಾಸ 1 ವಾರಿಧಿಯೊಳಗಾಡಿದೆ ಗಿರಿಯ ಬೆ[ನ್ನ] ಲೆತ್ತಿದೆ ಭಾರವಹ ಧರೆಯ ತಂದೆ ದೈತ್ಯನ ಕೊಂದೆ ದುರುಳ ಬಲಿಯನು ಮೆಟ್ಟಿ ದೈತ್ಯನೃಪರನೆ ಕುಟ್ಟಿ ತರುಣಿಗಭಯವನಿತ್ತೆ ತರುವ ಕಿತ್ತೆ 2 ಪುರದ ನಾರಿಯರನು ಪಂಥದಿ ಗೆಲಿದೆ ನೀನು ವರ ಕಲ್ಕಿಯಾಗಿ ತುರಗವನೇರಿ ಮೆರೆದೆ ವರದ ಪ್ರಸನ್ನ ಹಯವದನ ವೆಂಕಟರಾಯ ಪೊರೆಯೊ ಎಂದೆಂದೂ ಎನ್ನ ಪುರುಷರನ್ನ 3
--------------
ವಾದಿರಾಜ