ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ಪ ಇಲ್ಲವೋ ಕಾಣೋ ಎಂದಿಗಾದರು ಮರುಳೆ ಅ.ಪ ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಲನ್ನೀಗ ಬಳಿವ ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರುವಾಗುವುದು ಉರಿ ಮಂಜು ಆಗುವುದು | ಕರಿ ನಾಯಿಯಾಗುವುದು ಕಂಡವರಿಗೆ | ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು | ನರಹರಿಯ ನಾಮಗಳ ನಂಬಿ ಭಜಿಪರಿಗೆ 2 ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ | ಕ್ಷಣದೊಳಗೆ ಪೋದಂತೆ ಕಾಣಿಸುವುದು | ಘನ ಪಾಷಾಣಗಳು ತೃಣಸಮವು ಎನಿಸುವುವು | ವನಜಾಕ್ಷನ ಕೃಪೆಯ ಪಡೆದ ದಾಸರಿಗೆ 3 ಕ್ಷುಧೆ ತೃಷೆಯಾಗುದು ಕ್ಷುದ್ರ ಸಂಗವಾಗದು | ಪದೆಪದೆಗೆ ರೋಗಗಳು ಬೆನ್ನಟ್ಟವು | ಉದಯಾಸ್ತಮಾನಗಳೆಂಬ ಭಯ ಸುಳಿಯದು | ಪದಮನಾಭನ ಕೃಪೆಯ ಪಡೆದ ದಾಸರಿಗೆ 4 ಬಾರವು ಭಯಗಳು ಬಂದರೂ ನಿಲ್ಲವು | ಹಾರಿ ಹೋಗುವುವು ದಶ ದಿಕ್ಕುಗಳಿಗೆ | ಘೋರ ದುರಿತಾರಿ ಶ್ರೀ ವಿಜಯವಿಠ್ಠಲನಂಘ್ರಿ | ಸೇರಿದ ಜನರಿಗೆ ಇನಿತು ಭಯವುಂಟೆ5
--------------
ವಿಜಯದಾಸ
ಕೂಗೆಲೋ ಮನುಜ ಕೂಗೆಲೋ ಪ ಸಾಗರಶಯನನೆ ಜಗಕೆ ದೈವವೆಂದು ಅ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಮತ್ಸ್ಯ ಮೂರುತಿಯೆಂದು1 ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಕೂರ್ಮ ಮೂರುತಿಯೆಂದು2 ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರುಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿ ಯೆಂದು 3 ನಿಗಮವಂದಿತ ವಾರಿಜನಾಭ ಅನಿರುದ್ಧ ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ನರಮೃಗ ರೂಪಾನೆಂದು 4 ವಟಪತ್ರಶಯನ ಜಗದಂತರ್ಯಾಮಿ ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು5 ವಿಷ್ಣು ಸಂಕರುಷಣ ಮಧುಸೂದನ ಶ್ರೀ ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು 6 ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್Àನನೆ ವಿಭುವೇ ವಿಶ್ವರೂಪ ವಿಶ್ವನಾಟಕ ಋ ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು 7 ವಾಸುದೇವ ರಂಗ ನವನೀತ ಚೋರ ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು 8 ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಭಂಜನ ಕುಸುಮ ಶರನಯ್ಯ ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು 9 ಸರ್ವಮಂಗಳ ಸರ್ವಸಾರ ಭೋಕ್ತ ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು 10 ಪರಿ ಅಪಾರ ಜನ್ಮ ಬೆಂಬಿಡದಲೆ ಸಪ್ತ ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ 11
--------------
ವಿಜಯದಾಸ
ಜ್ಞಾನ ಪ್ರದಾಯಕ ಪ್ರಾಣದೇವ ಪ ಕಾಣೆ ನಿನಗೆ ಸಮಸತ್ಪ್ರಭಾವ ಅ.ಪ ಈ ಶರೀರದೊಳು ವಿಭೀಷಣನ ತೋರೊ 1 ಕೋಪ ಕುಜನತ್ವ ದುರ್ ವ್ಯಾಪಾರಾದಿಗಳನ್ನೆಲ್ಲ ರೂಪಡಗಿಸಿದೆ ನೀನೇ ಭೂಪನೈಯ್ಯ 2 ಇಪ್ಪತ್ತೊಂದು ವಿಧದ ತಪ್ಪುಗಳ ತಿದ್ದಿದೆ ತಿ- ಮ್ಮಪ್ಪ ವೇದ ವ್ಯಾಸರ ಶಿಷ್ಯಾವರ್ಯಾ 3 ಕಲಿಮಾರ್ಗದಲಿ ಪೋಪ ಹೊರೆ ಬುದ್ಧಿನಾಶಗೈಸಿ ಒಳಗೆ ನೀ ಪೊಳೆವುದು ಜಲಜಾಪ್ತ ಪ್ರಿಯ4 ರಂಜೀತವಾದ ಕಣ್ಣ್ಣಿಗೆ ಮಂಜು ಮುಚ್ಚಿಹುದು ದಿ- ವ್ಯಾಂಜನ ಹಚ್ಚೈ ವೀರಾಂಜನೇಯಾ5 ಯೇಳಾರೊಳಗೆ ಹದಿನೇಳಾನೆಯವರನು ಪಾಲಿಪ ದೊರೆ ನೀನು ಜಾಲವೇನು?6 ಸಿರಿಗುರುರಾಮ ವಿಠಲನ ಶರಣಾರಾಭರಣ ನೀನೆ ಕರುಣೀಸದಿದ್ದರೆಮ್ಮನು ಕಾವರಾರೈ 7
--------------
ಗುರುರಾಮವಿಠಲ
ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು ಕರುಣಿಚನ್ನಕೇಶವ ಶ್ರೀ ವೆಂಕಟಾದ್ರಿನಿಲಯ ಪ ಎನ್ನ ತಪ್ಪುಗಳ ನಾನು ಮರೆಯಲೆಂತು ಎನ್ನಬೆನ್ನ ನೋಡಿಕೊಳ್ಳಲಹುದೆ ಎನ್ನಿಂದ ಅ ಮಂಜು ಮರೆಯಾಗುವುದು ಮಾರ್ತಾಂಡ ಮೂಡೆಕಂಜಲೋಚನ ನಿನ್ನ ಪದಕಮಲ ಸ್ಮರಣೆರಂಜಿಸಿ ಮನವನು ಪಾರಾಗಿಪುದು ಪಾಪಗಳಅಂಜಿಕೆಯ ಬಿಡಿಸುತ ಅನುಗ್ರಹಿಪ ಕರುಣಿ 1 ದಯೆ ನಿನ್ನದಿರೆ ಭಯ ಎನಗಿಲ್ಲ ಹರಿಮಾಯೆ ಮೋಹಗಳಿಗೆ ಮರುಳಾಗಿಹ ಬೊಂಬೆಜಯವಾಗಿಸಿ ಈ ಜನ್ಮ ಕೃತಾರ್ಥವ ಮಾಡುತೋಯಜಾಕ್ಷ ಶ್ರೀ ನೆಲೆಯಾದಿಕೇಶವರಾಯ2
--------------
ಕನಕದಾಸ
ನೇತ್ರಾವತಿಯ ವಾಸಾ | ಪ್ರಮಥ ಪೋಷಾಸೂತ್ರತನಯನೆ ಕಾಯೊ | ಭಕ್ತ ಜನ ಪೋಷಾ ಪ ಲೌಕಿಕ ಕುಕರ್ಮಗಳ | ನಾಚರಿಸಿ ಬಲು ವಿಧಧಿಕಾಕು ಜನರಾ ಸಂಗ | ಬಳಸಿ ಭವದೀ |ಏಕಮೇವನ ಚರಣ | ತೋಕನೆಂದೆನಿಸದಲೆನೂಕಿ ಎನ್ನಾಯುಗಳ | ವ್ಯರ್ಥ ಕಳೆವೇ 1 ಕೃತ ತ್ರೇತ ದ್ವಾಪರದಿ | ವ್ಯಕ್ತನಾಗುತ ನೀನುಚತುರದೊಳಗೇ ಮಂಜು | ನಾಥನೆನಿಸೀ |ಕೃತಿಪತಿಯ ಸಚ್ಚರಣ | ಶತಪತ್ರ ಭಜಿಪರಿಗೆಗತಿ ತೋರಿ ಸನ್ಮುಕುತಿ | ಪಥಕೆ ಕೊಂಡೊಯ್ವೇ 2 ಯತಿವಾದರಾಜರಿಂ | ಹಿತದಿ ಕದರೀಯಿಂದಪೃಥುಕು ನೃಹರಿಯ ಶಿಲೆಯು | ಸ್ಥಿತ ಧರ್ಮಸ್ಥಳದೀಕೃತವು ವೈಷ್ಣವ ಪೂಜೆ | ಚತುರಯುಗ ಮೂರುತಿಯೆವಿತತ ಮಹಿಮನ ತೋರ್ವ | ಮತಿಮಾಡೊ ಶರ್ವಾ3 ವೈಕಾರಿಕಾದಿ | ಸಾಕಾರಿ ಮಹದೇವಕೈಕೊಳುತ ಮನ್ಮಾತ | ನೋಕರಿಸದೇ |ಪ್ರಾಕ್ಕು ಕರ್ಮವ ಕಳೆದು | ನೀ ಕೊಡುವುಧ್ಹರಿ ಭಕುತಿನಾಕಪತಿ ವಂದ್ಯ ಸ | ನ್ನಾಕನದಿ ಧರನೇ 4 ಗುಣ ಪೂರ್ಣನಾದ ಗುರು | ಗೋವಿಂದ ವಿಠಲ ಪದವನಜ ಬೇಡುವೆ ಮನದಿ | ಕರುಣಾನಿಧೇ |ಅನಲಾಕ್ಷ ನಿನ್ನೊಲಿಮೆ | ಇಲ್ಲನಕ ಗತಿಯಿಲ್ಲಬೆನಕ ಪಿತ ಮನಮಾನಿ | ಎನಗೊಲಿಯೊ ಶಿವನೇ5
--------------
ಗುರುಗೋವಿಂದವಿಠಲರು
ಬೆಳಗಾಯಿ ತೇಳಿರಯ್ಯಾ ಪ ಕರ ಪುಷ್ಕರದ ನೆಲೆಯ ಲೊಗದು | ಬಲಿದ ವೈರಾಗ್ಯ ವೈರಾಗ್ಯ ಮುಂಬೆಳಗ ಸುಖ ತಂಗಾಳಿ | ರವಿ ಉದಯಿಸಿದ 1 ನ್ಮತ್ತದುರ್ವಾದಿ ನಕ್ಷತ್ರದೆಡೆಗೆ | ಭವ ದ್ವಿಜ ರಿಂದ ಸುತ್ತುಗಟ್ಟಿ ಭಜಿಸುತಿದೆ 2 ನೆರೆಭಾವ ಭಕುತಿ ರಥ ಚಕ್ರನೆರೆಯೆ | ದುರಿತೌಘ ಮಂಜು ಮುಸುಕು ದೆರಿಯೇ | ಸಂಚಿತ ಮೊದಲ | ಹಂಸನು ಮೆರಿಯೆ 3 ಸಾಲ ಸ-ಚ್ಚಾಸ್ತ್ರಾ ದೇಳಿಗೆಗೆವಿದ್ವಜ್ಜ | ನಾಳಿ ಝೇಂಕರಿಸುತಲಿ ಮ್ಯಾಲನಲಿಯಿ | ಮೂಲ ರಘು ಪತಿಯ ದೇವಾಲಯದ ವಾದ್ಯಗಳು | ಘೇಳೆನಿಪ ನಿಜ ವೇದ ಘೋಷ ಕೇಳ ಬರುತಿದೆ ಜನಕೆ4 ಘನ ಪುಣ್ಯ ಪೂರ್ವಾದ್ರಿ ಕೊನಿಗೆ ಅರುಣಾಂಬರದಿ | ವಿನುತ ಜ್ಞಾನದ ಕಿರಣವನೆ ಪಸರಿಸಿ | ಜನದ ವಿದ್ಯದ ನಿದ್ರೆಯನೇ - ಜಾರಿಸಿ ಹೋದ | ಮಹಿಪತಿ ನಂದನ ನುಭಿವದಿ ಕೀರ್ತಿ ಪಾಡಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುತ್ತೂರೇಶ ಶ್ರೀ ಮರ್ಕಟಾ ತುಲಸÀದಲಾಯತಾಕ್ಷ ಶ್ರೀರಾಮದೂತಾ ಪ ಎತ್ತ ಚಲಿಸದಂತೆನ್ನ ಮನವ ತವ ಪಾದ ಸರೋಜದೊಳಿಟ್ಟು ಪತ್ತು ತಲೆಯನರಿಯಡಿದಾವರೆಯನು ನಿತ್ಯ ಭಜಿಸುವಂದದಿ ಮಾಡಯ್ಯ 1 ಆಂಜನೇಯಾ ಭೀಕರ ರೂಪಾ ದಾನವ ಘಾತಕರಾ ಸತಿ ಮೇದಿನಿ ಸುತೆಯಳ ಮಂಜುಮಾಡಿ ಖಲ ರಾವಣನೊಯ್ಯಲು ಅಂಜದಿರೆಂದವನಿಪ- ನಿಗಭಯವಿತ್ತು ಮಂಜುಂ ಕಾರ್ಯವ ನೆರೆದಪೆನೆಂದೀ 2 ಭಾರತೀಯ ಪವÀನತನಯ ಘನತರ ಕಾರ್ಯಕರ್ತಾ ಶ್ರೀರಾಮದೂತಾ ಘೋರತರದ ಅಪರಾರ್ಣವನು ಹಾರಿ ದಾಂಟಿ ಲಘು ದಶಮುಖಪುರವನು ವೀರರಾಘವನಂಘ್ರಿಗೆ ಎರಗಿದಿ ನೀ 3 ದಾನವನಾಶಾ ಜಾನಕೀತ್ರಾತ ದಶರಥಸುತ ಭಜಕಾ ಆನಂದತೀರ್ಥ ದಾನವ ಕೋಟಿಯ ನಡೆದು ಜವದಿ ನೀ ಮೌನಿ ಹರಿಗೆ ಸಹಾಯಾಗ್ರಣಿಯಾಗಿ ಹೀನ ರಕ್ಕಸ ದಶ- ಶಿರವನರಿಸಿ ನೀ ನರಸಿಂಹವಿಠಲನ ದಾಸನೆನಿಸಿದೀ 4
--------------
ನರಸಿಂಹವಿಠಲರು
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ