ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಎಂಬ ನಾಮದ ಬೀಜವನು ನಾಲಗೆಯಕೂರಿಗೆಯ ಮಾಡಿ ಬಿತ್ತಿರಯ್ಯ ಪ ತನುವ ನೇಗಿಲು ಮಾಡಿ ಹೃದಯ ಹೊಲವನು ಮಾಡಿತನ್ವಿರಾ ಎಂಬ ಎರಡೆತ್ತ ಹೂಡಿಜ್ಞಾನವೆಂಬೊ ಮಿಣಿಯ ಕಣ್ಣಿ ಹಗ್ಗವ ಮಾಡಿಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ 1 ಕಾಮಕ್ರೋಧಗಳೆಂಬ ಗಿಡಗಳನು ತರಿಯಿರಯ್ಯಮದಮತ್ಸರವೆಂಬ ಪೊದೆಯ ಇರಿಯಿರಯ್ಯಪಂಚೇಂದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯಚಂಚಲವೆಂಬ ಹಕ್ಕಿಯ ಓಡಿಸಿರಯ್ಯ 2 ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯುಶ್ಯದ ರಾಶಿಯನು ಅಳೆಯಿರಯ್ಯಇದು ಕಾರಣ ಕಾಗಿನೆಲೆಯಾದಿಕೇಶವನಮುದದಿಂದ ನೆನೆನೆನೆದು ಸುಖಿಯಾಗಿರಿಯ್ಯ3
--------------
ಕನಕದಾಸ
ವಿಷ್ಣುಪಾದವ ನೋಡಿದೆ ಎನ್ನ ಮನ- ದಿಷ್ಟ ಫಲಗಳ ಬೇಡಿದೆ ವಿಷ್ಣು ಪಾದವ ನೋಡ್ಯಭೀಷ್ಟ ಫಲಗಳ ಬೇಡಿ ಶ್ರೇಷ್ಠಪಾದಕೆ ಶಿರವ ಮುಟ್ಟಿಸ್ವಂದನೆ ಮಾಡಿ ಪ ಪಾದ ಇದು ನೋಡೆ ಗಯನ ಮೆಟ್ಟಿದ್ದ ಪಾದ ತಂಗಿ ದ್ರೌಪದಿದೇವಿಪತಿಗೆ ಸಾರಥಿಯಾಗಿ ಪಾದ 1 ಪಾದ ಶಂಖವು ಚಕ್ರಪದ್ಮರೇಖ್ಯುಳ್ಳ ಪಾದ ಮಧುರೆಯಲಿ ಮಾವನ ಮಂಚಿಕೆಯಲ್ಹಾರಿ ಪಾದ 2 ಬಲಿಯ ಶಿರ ತುಳಿದ ಪಾದ ನೆಲನ ಮೂರಡಿಯ ಮಾಡಿದ್ದ ಪಾದ ಶಿಲೆಯಾದಹಲ್ಯೆಯ ಉದ್ಧಾರವನು ಮಾಡಿ ಪಾದ 3 ಪಾದ ಕಾಳಿಫಣ ಜಿಗಿದು ತುಳಿದಂಥ ಪಾದ ಕೇಸರಿ ಪಾದ ಕಾ- ಪಾದ 4 ಪಾದ ಈ ಗಯದಿ ಸಾಕ್ಷಾತ ಹರಿಯ ಪಾದ ಕುಕ್ಷಿಯಲಿ ತ್ರಿಜಗವಿಟ್ಟು ರಕ್ಷಿಸುವಂಥ ಪಾದ 5
--------------
ಹರಪನಹಳ್ಳಿಭೀಮವ್ವ
ನಾರಾಯಣನೆಂಬ ನಾಮದ ಬೀಜವ ನಿಮ್ಮನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಪ.ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ |ಶ್ವಾಸೋಚ್ವಾಸ ಎರಡೆತ್ತಮಾಡಿ ||ಜಾÕನವೆಂಬ ಹಗ್ಗ ಕಣ್ಣಿಯ ಮಾಡಿ ||ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ 1ಮದಮತ್ಸರಗಳೆಂಬ ಮರಗಳನೆ ತರಿದು |ಕಾಮಕ್ರೋಧಗಳೆಂಬ ಕಳೆಯ ಕಿತ್ತಿ ||ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ |ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ 2ಉದಯಾಸ್ತಮಾನವೆಂಬ ಎರಡು ಕೊಳಗದಲಿ |ಆಯುಷ್ಯವೆಂಬ ರಾಶಿ ಅಳೆಯುತಿರೆ ||ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ |ಪಾಪ ರಾಶಿಯ ಪರಿಹರಿಸುವನಯ್ಯ 3
--------------
ಪುರಂದರದಾಸರು