ರಾಮನಾಮವ ಪಾಡೆಲೊ ಮನುಜಾ ಪ
ರಾಮನಾಮವ ಪಾಡಿ ಈ ಸಭೆಯೆಲ್ಲಾ ನೋಡಿ
ಕಾಮಾಕಲಭಿಮಾನನು ಕಾಮಿನಿಗೇಳಿದ ಸೀತಾ 1
ಸಾಧಿಸಿದಾರೊಳು ನೀ ಸಂಭ್ರಮವಾಗೊ ಯೆಲೊ
ಶೋಧಿಸಿ ನಿನ್ನೊಳು ನಿಜಸಾಧನ ಕೇಳುವ ಸೀತಾ 2
ಇಂತೀ ಪರಿಯೊಳು ಮಹದಂತರವಿಹುದಿದಾ
ಹಂತವರ ಕಂಡು ನೀ ವೇದಾಂತದೊಳು ನಿಂದು 3
ಭರತಪುರೀಶನನ್ನು ಮರೆತರಾಗುವುದುಂಟೆ
ಅರಿತು ನೋಡಿಕೊಂಡು ನೀ ಪರಮತತ್ವವಿದೆಂದು 4