ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು