ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಇದು ನಿಜಸಾಧನಾ ಮಾಡು ಕೈವಲ್ಯಪ್ರಾಪ್ತಿಯಿದೋ ಮಾಡು ನೀ ಮಾಡು ಆನಂದಪ್ರಾಪ್ತಿಯಿದೋ ಪ ಭಕ್ತಿಭಾವದಿ ಭಜಿಸುತ ನಿನ್ನ ಚಿತ್ತವನು ಪರಮಾತ್ಮನೊಳಿನ್ನು ನಿಜಾತ್ಮದೊಳಿನ್ನು ನಲೆಸುತಲಿ ಭವಬಂಧವಾ ನೀಗಿ ಆನಂದಪ್ರಾಪ್ತಿಗಿದೊ1 ವಿಷಯಚಿಂತನೆ ಮನದೊಳಗಿಹುದೇ ನಾನು ನನ್ನದಿದೆಂಬುದು ಬೆಳೆಯೆ ಇದೇ ಕೇಳ್ ಮಾಯೆ ನಾಶವಹುದೀ ಮಾಯೆ ನೀ ನೋಡು ಈ ಭಕ್ತಿಯೋಗದಲಿ ಮಾಡು ನೀ ಮಾಡು ಸನ್ಮಾರ್ಗಸಾಧನೆಯಾ 2 ಭಕ್ತಿಯೊಂದೇ ಸುಲಭದ ಸಾಧನೆ ಚಿತ್ತಶುದ್ಧಿಯನೀವುದು ನಿಜದಿ ಮನುಜಗಿದು ಜಗದಿ ತತ್ವದಿ ತಿಳಿವಾ ಮಾರ್ಗವತೋರಿ ಕೈವಲ್ಯವೀವುದಿದೋ ಕೇಳು ನೀ ಕೇಳು ಶ್ರೀ ಶಂಕರನ ಬೋಧಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಶ್ರೀಕಾಂತನನ್ನೊಲಿಸುವಾ ಬಗೆಯಾನೊರೆವೆ ಮಾನವ ಪ. ಶ್ರೀಕರಗುಣಯುತ ಪಾಕಶಾಸನವಿನುತ ಲೋಕೈಕ ವೀರನನ್ನೊಲಿಸುವಾ ತೆರನ ಪೇಳ್ವೆನಾಲಿಸು ಅ.ಪ. ಶಕ್ತಿ ಸಾಹಸಗಳಿಗೆ ಸೋಲುವನಲ್ಲ ರಕ್ಕಸಾಂತಕಮಲ್ಲ ಯುಕ್ತಿಮಾರ್ಗಕೆ ಮನವ ಸಿಲುಕಿಪನಲ್ಲ ಭಕ್ತವತ್ಸಲ ಸಿರಿನಲ್ಲ ವಿತ್ತ ಮೂಲಕದಿಂದ ಚಿತ್ತ ಚಲಿಸುವುದಲ್ಲ ಮುಕ್ತಿದಾಯಕನ ಮೆಚ್ಚಿಸಲ್ ವಿರಕ್ತಿಯಿಂ ಫಲವಿಲ್ಲ [ಮತ್ತ] ಖಿಲಾಂಡಕೋಟಿ ಬ್ರಹ್ಮಾಂಡನಾಯಕನ ಮೆಚ್ಚಿಸಲ್ ಭಕ್ತಿಯೊಂದೇ ಉತ್ತಮೋಪಾಯ ಕೇಳೆಲೈ1 ದೃಢದಿ ಶೈಶವದೊಳೇ ಅಡವಿಯನಾರಯ್ಯುತೆ ಪೊಡವೀಶನಡಿಗಿತ್ತ ತೊಡವಾವುದದ ಪೇಳ್ ಕಡು ಭಕ್ತನಾ ವಿದುರ ಪಡೆದನಸುರಾರಿಯಾಲಿಂಗನದ ಸುಖಮಂ ಮಡದಿಮಣಿ ಪಾಂಚಾಲಿ ಪಡೆದಳಕ್ಷಯಪ್ರದಾನಮಂ ತಡೆಯೇನು ಪೇಳಾ ಪರಮಾತ್ಮನೊಲ್ಮೆಗಿನ್ನು ದೃಢಭಕ್ತಿಗಿಂ ಮಿಗಿಲು ತೊಡವಾವುದಿರ್ಪುದೈ 2 ದಾನವವಂಶದಲಿ ಜನಿಸಿದನಾ [ಸು]ಜ್ಞಾನಿ ಪ್ರಹ್ಲಾದನು ಸಾನುರಾಗದಿ ಹರಿಯ ಭಕ್ತಿಯಿಂ ಧ್ಯಾನಿಸೆ ಕಂಬದಿಂ ನುನಿಸಿಯಾಕ್ಷಣದಲ್ಲಿ ಮನುಜಕೇಸರಿಯಾಗಿ ಘನದಾಕೋಪವನು ತಾಳಿ ದನುಜನ ಉರವ ಸೀಳಿ ಮನ್ನಿಸುತೆ ಭಕ್ತನಂ ನನ್ನಿಯಿಂ ಮೈದಡಹಿ ಉನ್ನತೋನ್ನತ ಪದವನಿತ್ತನಾಖಲಕುಠಾರಿಶೌರಿ ಮುನ್ನ ಭಕ್ತಿಯಿದುವೇ ಮುಖ್ಯಸಾಧನ ಕೇಳೈ 3
--------------
ನಂಜನಗೂಡು ತಿರುಮಲಾಂಬಾ