ವಾಣಿ ಬಾರೆ ಬೇಗ ವದನದಿ
ವಾಣಿ ಬಾರೆ ಬೇಗ ಪ.
ಜಾಣೆ ಕಲ್ಯಾಣಿ ಬ್ರಹ್ಮನ ರಾಣಿ ಭಾರತಿ ವಾಣಿ ಅ.ಪ.
ಹೃದಯ ಮಂದಿರದಿಲಿದು ಸುವರ್ಣದ
ಪದುಮ ಮಂಟಪಕೆ ಮುದವ ಬೀರುತೆನ್ನ
ವದನದಿ ಸೇರುತ ಮುದ ಸುವಾಣಿಯ
ಚದುರೆ ನುಡಿಸುವ ಶುಕವಾಣಿ 1
ಮಂಗಳ ಮಹಿಮನ ಅಂಗುಟದಿಂ ಬಂ
ದಂಬರದಿಂದುದಿಶಿದಾಮರ ತರಂಗಿಣಿ
ಗಂಗಾಸ್ನಾನವ ಮಾಡಿಶಿ ನಿನಗೆ
ರಂಗನ ದಯಸೈತ ಪೀತಾಂಬರನುಡಿಸುವೆ ವಾಣಿ 2
ಭಕ್ತಿಯರಿಶಿಣ ಯುಕ್ತಿಯ ಕುಂಕುಮ
ಶಕ್ತಿಯ ಗಂಧವ ಪರಶಕ್ತಿಯ ಪೂವನು
ಮುಕ್ತಿದಾತೆ ಪೂಜಿಪೆ ಶ್ರೀ ಶ್ರೀನಿವಾಸ
ಮುಕ್ತಿಪಥದಪೂರ್ವ ಮುತ್ತಿನರಗಿಣಿ ವಾಣಿ 3