ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾದ್ರಿವಿಠಲ | ನೀನೇ ಪೊರೆ ಇವಳಾ ಪ ಜ್ಞಾನಿಜನವಂದ್ಯ ಹರಿ | ಶ್ರೀನಿವಾಸಾಖ್ಯ ಅ.ಪ. ತರಳೆ ಬಹುನೊಂದಿಹಳೊ | ಕರುಣಾ ಮಾಳ್ಪುದು ದೇವದುರಿತವನ ದಾವಾಗ್ನಿ | ಶರಣಜನರೊಡೆಯಾ | ಮರುತ ಮತದಲ್ಲಿರುತೆ | ನೆರೆ ನಂಬಿಬಂದಿಹಳೊಕರುಣದಿಂ ಕೈಗೊಟ್ಟು | ಪರಿಪಾಲಿಸಿವಳಾ 1 ಅನ್ಯದೇವರ ಪೂಜೆ | ಇನ್ನಾದರು ಬಿಡಿಸಿನನ್ನೆಯಿಂ ನಿನ್ನನ್ನೆ | ಪೂಜಿಸುವ ಭಾಗ್ಯಾಇನ್ನಾದರೂ ಕೊಟ್ಟು | ಪನ್ನಂಗಶಯನಹರಿಮನ್ನಿಸೊ ಇವಳ ಹರಿ | ಅನ್ನಂತ ಮಹಿಮಾ 2 ಸಾಧುಜನ ಸದ್ವಂದ್ಯ | ಸತ್ಸಂಗವನೆ ಕೊಟ್ಟುಮಾಧವನೆ ನೀನಾಗಿ | ಕಾದುಕೊ ಹರಿಯೇಭೇಧಮತ ತತ್ವಗಳ | ಬೋಧಿಸುತ ಇವಳೀಗೆಸಾಧನವ ಗೈಸುವುದೋ | ಬಾದರಾಯಣನೇ 3 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬಂಥಾಮತಿಯನೇ ಕೊಟ್ಟು ಸ | ದ್ಗತಿಯನೆ ಕರುಣಿಸೋ |ಸತತ ನಿನ್ನಯ ನಾಮ | ರತಿಯನೆ ಕರುಣಿಸುತಮತಿಮತಾಂವರರಂಘ್ರಿ | ಭಕ್ತಿಯನೆ ಈಯೋ 4 ಭಾವಜನಯ್ಯ ಎನೆಓವಿ ಬಿನ್ನವಿಪೆ ಹರಿ | ಸಲಿಸುವುದು ಇವನೇವೆಗುರ್ವಂತ ರಾತ್ಮಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ರಾಘವೇಂದ್ರ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತ ಕಳೆದು | ವೈರಾಗ್ಯ ಕೊಡುತಾಅ.ಪ. ಪ್ರಾಚೀನ ದುಷ್ಕರ್ಮ | ಮೋಚಕೇಚ್ಛೆಯ ಮಾಡಿಕೀಚಕಾರಿಯ ಮತದಿ | ದೀಕ್ಷೆಯನೆ ಕೊಟ್ಟುನೀಚೋಚ್ಛ ತರತಮವೆ | ವಾಚಿಸುತ ಇವಳಲ್ಲಿವಾಚಾಮಗೋಚರನ | ಭಕ್ತಿಯನೆ ಕೊಡುತಾ 1 ಸಾಧುಸಂಗವ ಕೊಟ್ಟು | ಸಾಧನೆಯ ಗೈಸುವುದುಯಾದವೇಶನ ಪ್ರೀತಿ | ಸಾಧನೆಯ ಗುರಿಯಾಮಾಧವನೆ ಪರನೆಂಬೋ ಬೋದ ಸಂತತಕೊಟ್ಟುಕಾದುಕೋ ಶ್ರೀಹರಿಯೆ | ಬಾದರಾಯಣನೆ 2 ಸರುವ ಕರ್ಮಗಳೆಲ್ಲ ಹರಿ ಮಾಡಿ ಮಾಡಿಸುವಬರುವ ತತ್ಸುಖ ದುಃಖ | ಸಮತೆಯಲಿ ಎಂಬಾವರಮತಿಯ ಕರುಣಿಸುತ | ಪರಿಹರಿಸು ಭವಬಂಧಕರುಣಾಳು ಗುರುರೂಪಿ | ಪೊರೆಯ ಬೇಕಿವಳಾ 3 ಮನಸೀನ ಚಾಂಚಲ್ಯ | ವನೆ ನೀನು ಕಳೆಯುತ್ತಕ್ಷಣಕನಂತಪರಾಧ | ಎಣಿಸದಲೆ ಹರಿಯೆದೀನನಾಥನಾದ ಹರಿ | ಜ್ಞಾನ ದಂಕುರವಿತ್ತುಘನ ದಯಾವಾರಿಧೇ | ಪೊರೆಯ ಬೇಕಿವಳಾ 4 ವ್ರಜ ಕುಂದ ವರದ ಹರಿಯೇನೊಂದವಳಿಗಾನಂದ | ಸಂಧಿಸಲು ಪ್ರಾರ್ಥಿಸುವೆಇಂದಿರಾರಾಧ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ. ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ 1 ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು 2 ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ 3 ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ 4 ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ. ಒಲಿದೈತರೆ ನೀ ನಲವೇರುತ ನಾ ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ. ಸಿಂಧುನಂದನೆ ಅರವಿಂದನಯನೆ ಇಂದುಸೋದರಿ ಸಿಂಧುರಗಮನೆ ಸುಗುಣಾಭರಣೆ ವಂದಿಪೆ ಶರದಿಂದುವದನೆ ಸುರ ವಂದಿತಚರಣೆ 1 ಅಂದಿಗೆ ಕಾಲುಂಗುರ ಘಲಿರೆನೆ ಇಂದಿರೆ ತವಪದದ್ವಂದ್ವವ ತೋರಿ ವಂದಿಸುವೆನ್ನೀಮಂದಿರ ಮಧ್ಯದಿ ಎಂದೆಂದಿಗು ನೆಲೆಸಿರು ನಂದಿನೀ ಜನನೀ 2 ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ ಕ್ಷೀರಾಬ್ಧಿಶಯನನ ಜಾಯೆ ಸಾರಸನಿಲಯೆ ವಂದಿಪೆ ತಾಯೆ ಬಾರೆಂದು ಕೈಪಿಡಿದೆಮ್ಮನು ಕಾಯಿ 3 ಸರಸಿಜಾಸನೆ ಸ್ಮರಮುಖ ಜನನಿಯೆ ಸುರನರಪೂಜಿತೆ ನಾರದ ಗೇಯೆ ಸಾರಗುಣಭರಿತೆ ಸರಸಿಜಪಾಣಿಯೆ ಶ್ರೀರಮಣೀ ಪರಿಪಾಲಿಸು ಜನನಿ 4 ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ ಪರತರ ಸುಖ ಸಂಪದವನು ಕೋರೀ ಪೊರೆ ಮೈದೋರಿ 5 ಪರಿಪರಿ ವಿಧದಾ ಸಿರಿಸಂಪತ್ತಿಯೋಳ್ ಗುರುದೈವಂಗಳ ಸೇವಾವೃತ್ತಿಯೋಳಿರೆ ಕರುಣಿಸು ದೃಢತರ ಭಕ್ತಿಯನೆಮಗೀಗಳ್ ವರಶೇಷಗಿರೀಶನ ಮಡದಿಯೆ ಮುದದೋಳ್ 6
--------------
ನಂಜನಗೂಡು ತಿರುಮಲಾಂಬಾ
ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ. ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1 ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2 ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
--------------
ಸಿರಿಗುರುತಂದೆವರದವಿಠಲರು
ಭವ ಸಂಕಟ ಪರಿಹರಿಸೊ ಕಿಂಕರನೆಂದೆನಿಸೊ ಪ ಶಂಕೆಯಿಲ್ಲದೆ ಪಾದಪಂಕಜ ಪೂಜಿಸಲೂಮಂಕುಮತಿಯ ಕಳೆವಾ ಅಕಳಂಕನೆಂದೆನಿಸುವಾ ಅ.ಪ. ಕಲಿಯುಗದೊಳು ಕಲಿ ಬಾಧೆಗೆ ಒಳಗಾಗಿ ಬಹುವಿಧವಾಗಿಒಲಿಸದೆ ವರಗುರು ಹಿರಿಯರ ನಿಂದಿಸುತಾ ವೇಳೆಗಳೆಯುತಾಗಳಿಸಿದೆ ಪಾಪವ ಚರಿಸುತ ಧರೆಯೊಳಗೆ ತೊಳಲುವೆ ತಮದೊಳಗೇಘಳಿಲನೆ ರಕ್ಷಿಸೊ ಬಾಲಕರನು ದೇವಾ ಎನ್ನಯ ಕುಲದೈವಾ 1 ಸಾಧನೆಗೋಸುಗ ಮೇದಿನಿಗೆ ಬಂದು ಸಾಧಿಸದೆ ಬಂದುಶೋಧಿಸುವೆನು ಪುರುಷಾರ್ಥದ ಮಾರ್ಗವನು ಮೋದವ ಪೊಂದುವೆನುಭೇದವ ತಿಳಿಯದೆ ಹಾದಿಯ ತಪ್ಪಿರುವೆ ಖೇದವ ಪುಡುತಿರುವೆಸಾದರದಲಿ ತವ ಪಾದದಿ ಧ್ಯಾನವನು ಒದಗಿಸಬೇಕಿನ್ನು 2 ಮಂದ ತಾಪ ಬಿಡಿಸೊ ಕರುಣವ ತೋರಿಸೊಆರು ಮೂರು ವಿಧ ಭಕ್ತಿಯನೆ ಈಯೋ ಕರಪಿಡಿದು ಕಾಯೋಸಾರುವ ಭಕುತರ ಧೀರ ವೃಂದದೊಳಗೆ ಸೇರಿಸೊ ಜವದೊಳಗೆಧಾರುಣೀಶ ತಂದೆವರದವಿಠಲನೆ ಶರಣೆಂಬೆನು ನಾನೇ 3
--------------
ಸಿರಿಗುರುತಂದೆವರದವಿಠಲರು
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು